ಆತ ಬರೀ ಬೇಹುಗಾರನಲ್ಲ. ಭೂಮಿ, ಆಕಾಶ, ಅಗ್ನಿ, ವಾಯು, ಜಲ ಹೀಗೆ ಪಂಚಭೂತಗಳನ್ನು ಕಾಲಕೆಳಗಿಟ್ಟು ಕುಣಿವ ಕಲಿ. ಸಾವನ್ನೂ ಸುಖಿಸುವ, ಮಕ್ಕಳಂತೆ ಕಣ್ಣೀರಿಡುವ ಭಾವಲೋಲ. ಐವತ್ತನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಜೇಮ್ಸಬಾಂಡ್ನ ಇಪ್ಪತ್ಮೂರನೇ ಅವತಾರ ಇದು.

ಪ್ರೇಕ್ಷಕರ ಹೃದಯ ಬಾಯಿಗೆ ತರುವುದು ಬಾಂಡ್ನ ಮೊದಲ ಕೆಲಸ! ಇಸ್ತಾನ್ಬುಲ್ನಲ್ಲಿ ನಡೆಯುವ ದೀರ್ಘಾವಧಿಯ ಮೊದಲ ದೃಶ್ಯದಿಂದಲೇ ಈ ಕಾರ್ಯ ಶುರು. ಅಲ್ಲಿಂದ ಲಂಡನ್, ಮಕಾವು, ಶಾಂಘೈನಲ್ಲಿ ಹರಿಯುತ್ತದೆ ಸಾಹಸದ ಹೊಳೆ.

ಕಡೆಗೆ ಸ್ಕಾಟ್ಲೆಂಡ್ನ ರುದ್ರ ಮನೋಹರ `ಕ್ಲೈಮ್ಯಾಕ್ಸ್ ಸಾಗರ~ದಲ್ಲಿ ಅದರ ಮಿಲನ.
ಚಿತ್ರದ ಪ್ರತಿ ಫ್ರೇಮಿನಲ್ಲಿಯೂ ನಿರ್ಮಾಪಕರು ಸುರಿದ `ಹಣ~ ಗೋಚರ. ಉಗಿಬಂಡಿ ಮೇಲೆ ಹರಿದಾಡುವ ಬುಲ್ಡೋಜರ್ನಿಂದ ಹಿಡಿದು, ನಾಯಕನ ನೆತ್ತಿ ಮೇಲೆ ಪ್ರವಹಿಸುವ ರೈಲಿನವರೆಗೆ ವೈಭವದ್ದೇ ಮೆರೆದಾಟ. ಆಸ್ಟನ್ ಮಾರ್ಟಿನ್ ಡಿಬಿ ಫೈವ್ ಕಾರು ಬಾಂಡ್ನ ಹೆಗ್ಗುರುತು. ಅದು ಕೂಡ ಕೊನೆಗೆ ಪುಡಿ ಪುಡಿ.

ಡೇನಿಯಲ್ ಕ್ರೇಗ್ರ ಎಲ್ಲಾ ಬಾಂಡ್ ಚಿತ್ರಗಳದ್ದೂ ಒಂದು ತೂಕವಾದರೆ ಈ ಚಿತ್ರದ್ದೇ ಮತ್ತೊಂದು ತೂಕ. ಹೊಡೆದಾಡುವುದನ್ನೇ ಉದ್ಯೋಗ ಮಾಡಿಕೊಂಡ ಅಭಿನಯ ಇಲ್ಲಿಲ್ಲ. ಪಾರ್ಟಿಗಳಲ್ಲಿ ಮಿಂಚುವ, ಬೇಕೆಂದಾಗ ಮಧುಚಂದ್ರ ಅನುಭವಿಸುವ ತೀವ್ರ ರಸಿಕನನ್ನಾಗಿ ಇಲ್ಲಿ ಚಿತ್ರಿಸಲಾಗಿದೆ. ವೈರಿ ಪಾಳೆಯದ ಮನದನ್ನೆ ಮರ್ಲೊ. ಆಕೆ ಸಾಯುವ ಮೂಲಕ ಒಳಿತು ಕೆಡುಕಿನ ಸಮರ ನಿರ್ಣಾಯಕ ಹಂತಕ್ಕೆ ಜಿಗಿಯುತ್ತದೆ.

ಬಾಂಡ್ ಚಿತ್ರಗಳ ಪ್ರಧಾನ ಲಕ್ಷಣ ಚುಟುಕು ಹಾಗೂ ಚುರುಕು ಮಾತು. ಅದಕ್ಕೆ ಇಲ್ಲಿಯೂ ಬೆಲೆ ಹೆಚ್ಚು. ಗಂಭೀರ ದೃಶ್ಯಗಳಲ್ಲಿ ಹಾರುವ ಕೆಲವು ಮಾತುಗಳಲ್ಲಿ ನಗೆಯ ಮದ್ದು ಬೆರೆತಿದೆ. ಕೆಲವು ದೃಶ್ಯಗಳು ಕಲಾವಿದ ಬಿಡಿಸಿದ ವರ್ಣಚಿತ್ರದಷ್ಟೇ ಸೊಗಸು.

ಅದರೆಲ್ಲಾ ಶ್ರೇಯಸ್ಸು ಕ್ಯಾಮೆರಾ ಹಾಗೂ ಬೆಳಕಿನ ತಂತ್ರಜ್ಞರಿಗೆ. ಖ್ಯಾತ ಗಾಯಕಿ ಅಡೆಲ್ ಹಾಡಿರುವ ಶೀರ್ಷಿಕೆ ಗೀತೆಯಲ್ಲಿ ಕುತೂಹಲದ ಬುತ್ತಿ ಉಂಟು. ಕತೆಯ ಎಳೆಯಲ್ಲಿ ಹೆಚ್ಚಿನದನ್ನು ಹುಡುಕುವಂತಿಲ್ಲ. ಭಯೋತ್ಪಾದನೆಯ ಹೂರಣವಿರುವ ಸಾಕಷ್ಟು ಚಿತ್ರಗಳನ್ನು ಹಾಲಿವುಡ್, ಬಾಲಿವುಡ್ ಪ್ರೇಕ್ಷಕರರು ಈಗಾಗಲೇ ಕಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.