ಲಂಡನ್ (ಪಿಟಿಐ): ಭಾರತದ ಅಗ್ರ ಕ್ರಮಾಂಕದ ಬಾಕ್ಸರ್ ವಿಜೇಂದರ್ ಸಿಂಗ್, ಈ ಬಾರಿಯ ಲಂಡನ್ ಒಲಿಂಪಿಕ್ಸ್ ನಲ್ಲಿ ಪದಕ ಭರವಸೆ ಮೂಡಿಸಿದ್ದಾರೆ. ಮಧ್ಯಮ ತೂಕದ (75ಕೆಜಿ) ವಿಭಾಗದ ಫ್ರೀ- ಕ್ವಾರ್ಟರ್ ಫೈನಲ್ನಲ್ಲಿ ಕಜಕಸ್ತಾನದ ಡಾನಾಬೆಕ್ ರನ್ನು ಮಣಿಸಿದ್ದಾರೆ.

2008 ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚು ಪದಕ ವಿಜೇತ 26 ವಯಸ್ಸಿನ ವಿಜೇಂದರ್ ಸಿಂಗ್, ನೆನ್ನೆ ರಾತ್ರಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ 14-10 ಪಾಯಿಂಟ್ಗಳಿಂದ ಪಂದ್ಯವನ್ನು ತನ್ನದಾಗಿಸಿಕೊಂಡಿದ್ದಾರೆ. ಪಂದ್ಯದ ನಂತರ ಮಾತಾಡಿದ ಈ ಗೆಲವು ನನಗೆ ಸಂತಸ ನೀಡಿದ್ದು ಮುಂದಿನ ಪಂದ್ಯಗಳಿಗೆ ಸಹಕಾರಿಯಾಗಿದೆ ಎಂದು 26 ವಯಸ್ಸಿನ ವಿಜೇಂದರ್ ತಿಳಿಸಿದ್ದಾರೆ.

ಈ ಬಾರಿ ನಾನು ನನ್ನ ಮನೆಗೆ ಬೇರೆ ಬಣ್ಣದ ಪದಕ ತೆಗೆದುಕೊಂಡು ಹೋಗಬೇಕೆಂದುಕೊಂಡಿದ್ದೇನೆ. ಎಂದು ಹರಿಯಾಣದ ವಿಜೇಂದರ್ ಸಿಂಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.