ಶನಿವಾರ, ಜೂಲೈ 11, 2020
21 °C

ಬಾಗೇಪಲ್ಲಿಯಲ್ಲಿ ಸಮಸ್ಯೆಗಳ ಸರಮಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿಯಲ್ಲಿ ಸಮಸ್ಯೆಗಳ ಸರಮಾಲೆ

ಬಾಗೇಪಲ್ಲಿ: ಜಿಲ್ಲೆಯ ಹಿಂದುಳಿದ ತಾಲ್ಲೂಕು ಆಗಿರುವ ಬಾಗೇಪಲ್ಲಿ ಮೂಲಸೌಕರ್ಯ ಒಳಗೊಂಡಂತೆ ಒಂದಿಲೊಂದು ಸಮಸ್ಯೆಗಳನ್ನು ಎದುರಿಸುತ್ತಿದೆ. ಬಾಗೇಪಲ್ಲಿ ಪಟ್ಟಣದಲ್ಲಂತೂ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ರಸ್ತೆಯ ಎರಡು ಬದಿಗಳಲ್ಲಿ ಮರಗಳಿಲ್ಲ, ರಸ್ತೆಯುದ್ದಕ್ಕೂ ದೂಳು-ಮಣ್ಣು ಆವರಿಸಿಕೊಂಡಿದೆ, ಪಾದ ಚಾರಿ ಮಾರ್ಗಗಳು ಅತಿಕ್ರಮಣ ಗೊಂಡಿದ್ದು, ಸಾರ್ವಜನಿಕರು ಸುಗಮ ವಾಗಿ ನಡೆದಾಡಲು ಕಷ್ಟಸಾಧ್ಯವಾಗಿದೆ.  ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಸಂಕಷ್ಟಗಳಿಂದ ಯಾವಾಗ ಪಾರಾಗುತ್ತದೆ ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ.ಬಿಸಿಲಿನ ಬೇಗೆ ಅನುಭವಿಸುತ್ತಿರುವ ಜನರು ವಿಶ್ರಾಂತಿ ಪಡೆಯಲು ಸರ್ಕಾರಿ ಕಚೇರಿಗಳ ಆವರಣದಲ್ಲಿರುವ ಮರ ಗಳನ್ನೇ ಆಶ್ರಯಿಸಬೇಕು. ದೂಳು- ಮಣ್ಣು ವ್ಯಾಪಕವಾಗಿದ್ದರೂ ಎಲ್ಲವ ನ್ನೂ ಸಹಿಸಿಕೊಂಡೇ ಸಾರ್ವಜನಿಕರು ಮುನ್ನಡೆಯಬೇಕು. ಉಸಿರಾಟಕ್ಕೂ ತೊಂದರೆಯಾಗಿದೆ.ಕೆಲಸಗಳಿಗಾಗಿ ನಾವು ದೂರದ ಹಳ್ಳಿಯಿಂದ ಪಟ್ಟಣಕ್ಕೆ ಬರಬೇಕು. ಬಿಸಿಲಿನಲ್ಲಿ ಆಯಾಸಗೊಳ್ಳುವ ನಮಗೆ ವಿಶ್ರಾಂತಿ ಪಡೆಯಲು ನರಳು ಬೇಕು. ಆದರೆ ರಸ್ತೆಬದಿಗಳಲ್ಲಿ ಮರಗಳಿಲ್ಲ. ಹೀಗಾಗಿ ವಿಶ್ರಾಂತಿ ಪಡೆಯಲು ನಾವು ಸರ್ಕಾರಿ ಕಚೇರಿಗಳ ಆವರಣದಲ್ಲಿರುವ ಮರಗಳ ಬಳಿ ಬರಬೇಕು. ಇಲ್ಲಿ ಬರದಿದ್ದರೆ ನಾವು ದೂಳು-ಮಣ್ಣಿನಲ್ಲಿ ಮಿಂದು ಹೋಗುತ್ತೇವೆ. ಅಲ್ಲಿ ಮಾತ್ರ ಉಸಿರಾಟದಿಂದ ಪಾರಾಗಲು ಸಾಧ್ಯ’ ಎಂದು ರೈತರು ಹೇಳುತ್ತಾರೆ.‘ನೀರಿನ ಸಮಸ್ಯೆಯು ತೀವ್ರ ಸ್ವರೂಪದಲ್ಲಿ ಕಾಡುತ್ತಿದೆ. ಪರಗೋಡು ಚಿತ್ರಾವತಿ ಬ್ಯಾರೇಜಿ ನಿಂದ ಸರಬರಾಜು ಮಾಡಲಾಗುತ್ತಿ ರುವ ನೀರನ್ನು ಶುದ್ದಿಕರಣ ಘಟಕದಲ್ಲಿ ಶುದ್ದಿಕರಿಸದೆ ನೇರವಾಗಿ ಹರಿಸ ಲಾಗುತ್ತಿದೆ. ಪಟ್ಟಣ ಪ್ರದೇಶದಲ್ಲಿ ಈಗ ವಾರಕ್ಕೂಮ್ಮೆ ನೀರಿನ ಸರಬರಾಜು ಆಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸಹ ಕುಡಿಯುವ ನೀರಿನ ಸಮಸ್ಯೆಯಾಗಿದೆ.

ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ನೀರಿನಲ್ಲಿ ವಿಷಯುಕ್ತ ಪ್ಲೋರೈಡ್ ಅಂಶವಿದೆ’ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸು ತ್ತಾರೆ.ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ವಿದ್ಯಾರ್ಥಿಗಳು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿ ್ದದಾರೆ. ರೈತರ ಕೃಷಿ ಚಟುವಟಿಕೆಗೆ ಒಂದೆಡೆ ಹಿನ್ನಡೆಯಾಗಿದ್ದರೆ, ಮತ್ತೊಂದೆಡೆ ವಿದ್ಯಾರ್ಥಿಗಳ ವಿದ್ಯಾ ಭ್ಯಾಸಕ್ಕೆ ತೊಂದರೆಯಾಗಿದೆ. ಪರೀಕ್ಷೆ ಗಳು ನಡೆಯುತ್ತಿದ್ದು, ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಸಾಧ್ಯ ವಾಗುತ್ತಿಲ್ಲ. ವಿದ್ಯುತ್ ಕಡಿತ ಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಸೇರಿದಂತೆ ಸಚಿವರೆಲ್ಲ ಹೇಳುತ್ತಾರೆ. ಆದರೆ ಹಗಲು-ರಾತ್ರಿಯನ್ನೆದೇ ವಿದ್ಯುತ್ ಪೂರೈಕೆ ಸ್ಥಗಿತ ಗೊಳಿಸಲಾಗುತ್ತಿದೆ. ಇಂಥ ಪರಿಸ್ಥಿತಿ ಯಲ್ಲಿ ನಾವು ಜೀವನ ಮಾಡುವು ದಾದರೂ ಹೇಗೆ’ ಎಂದು ಸಾರ್ವ ಜನಿಕರು ಪ್ರಶ್ನಿಸುತ್ತಾರೆ.ಬಾಗೇಪಲ್ಲಿ ಮುಖ್ಯರಸ್ತೆಯನ್ನು ವಿಸ್ತರಣೆಗೊಳಿಸಲಾಗಿದೆ. ಆದರೆ ರಸ್ತೆ ಯನ್ನು ಅಭಿವೃದ್ಧಿಪಡಿಸಲಾಗಿಲ್ಲ. ಬಾಗೇಪಲ್ಲಿಗೆ ಬರುವ ಸಚಿವರು, ಶಾಸಕರು ಹವಾನಿಯಂತ್ರಿತ ವಾಹನ ಗಳಲ್ಲಿ ಸಂಚರಿಸುತ್ತಾರೆ. ಅವರಿಗೆ ದೂಳು-ಮಣ್ಣಿನ ಸಮಸ್ಯೆ ಕಾಡುವು ದಿಲ್ಲ. ರಸ್ತೆಯು ಹದ ಗೆಟ್ಟಿರುವ ಬಗ್ಗೆಯೂ ಅವರಿಗೆ ಗೊತ್ತಾ ಗುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸಚಿವರ ಉತ್ತಮ ಸಂಪರ್ಕ ಹೊಂದಿರುವ ಶಾಸಕರು ಹೆಚ್ಚಿನ ಅನು ದಾನ ತರಿಸಿಕೊಳ್ಳುವುದರ ಮೂಲಕ ಬಾಗೇಪಲ್ಲಿ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಭಾರತ ಪ್ರಜಾ ಸತ್ತಾತ್ಮಕ ಯುವಜನ ಫೆಡರೇಷನ್ ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಪಿ.ಮುನಿ ವೆಂಕಟ ಪ್ಪ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.