ಗುರುವಾರ , ಮೇ 6, 2021
26 °C

ಬಾರದ ಮಳೆ, ಪಾಳು ಬಿದ್ದ ಜಮೀನು

ವಿಶೇಷ ವರದಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾರದ ಮಳೆ, ಪಾಳು ಬಿದ್ದ ಜಮೀನು

ಗಜೇಂದ್ರಗಡ: ಜೂನ್ ತಿಂಗಳ ಅರ್ಧ ದಿನಗಳು ಉರುಳಿದರೂ ಮಳೆ ಧರೆಗುರುಳಿಲ್ಲ. ನಿರೀಕ್ಷೆ ಯಲ್ಲೆ ಬಸವಳಿದ ಅನ್ನದಾತ ಕೊನೆ ಪ್ರಯತ್ನವಾಗಿ ದೇವರ ಮೊರೆ ಹೋಗಿದ್ದಾನೆ. ಎಲ್ಲ ಕಡೆ ವಿಶೇಷ ಪೂಜೆ-ಹೋಮ-ಹವನ ಬಿರುಸಿನಿಂದ ನಡೆಯುತ್ತಿವೆ. ಆದರೂ ಕಪ್ಪು ಮೋಡಗಳು ಹನಿಯಾಗಿ ಸುರಿಯದಿರುವುದು ಕೃಷಿಕರ ಜಂಘಾಬಲವನ್ನೇ ಕಸಿದಿದೆ.ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗೆ ಪೂರಕವಾದ ಮಳೆಯೂ ಇಲ್ಲ. ವಾಡಿಕೆಯಂತೆ ಕನಿಷ್ಠ ಪ್ರಮಾಣದ ಮಳೆಯೂ ಸುರಿದಿಲ್ಲ. ಆದರೆ, ಮುಂಗಾರು ಆರಂಭಗೊಂಡು ತಿಂಗಳು ಗತಿಸಿದರೂ ಕೇವಲ 152.53 ಮೀಲಿ ಮೀಟರ್ ಮಳೆ ಭೂತಾಯಿಯನ್ನು ಸ್ಪರ್ಶಿಸಿದೆ. ಇದ ರಿಂದಾಗಿ ನೇಗಿಲಯೋಗಿಗೆ ಮರ್ಮಾಘಾತ ವಾಗಿದೆ.ಕೃಷಿ ಪ್ರಧಾನ ತಾಲ್ಲೂಕು ಎಂಬ ಹೆಗ್ಗಳಿಕೆ ಹೊಂದಿರುವ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ 72 ಹೆಕ್ಟೇರ್ ಹೈಬ್ರಿಡ್ ಜೋಳ, 72 ಹೆಕ್ಟೇರ್ ಹೈಬ್ರಿಡ ಜೋಳ, 660 ಹೆಕ್ಟೇರ್ ಮೆಕ್ಕೆಜೋಳ, 118 ಹೆಕ್ಟೇರ್ ಸಜ್ಜಿ, 15,760 ಹೆಕ್ಟೇರ್ ಹೆಸರು ಒಟ್ಟು 16,760 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ.ಹುಸಿಯಾದ ಇಲಾಖೆ ನಿರೀಕ್ಷೆ: ಕೃಷಿ ಇಲಾ ಖೆಯ ನಿರೀಕ್ಷೆಯಂತೆ ಒಟ್ಟು 68,000 ಹೆಕ್ಟೇರ್ ನಲ್ಲಿ ಮುಂಗಾರು ಹಂಗಾಮಿನ ಬೆಳೆಗಳ ಬಿತ್ತನೆ ಯಾಗಬೇಕಿತ್ತು. 2,000 ಹೆಕ್ಟೇರ್ ಹೈಬ್ರಿಡ್ ಜೋಳ, 13,000 ಹೆಕ್ಟೇರ್ ಮೆಕ್ಕೆಜೋಳ, 1,500 ಹೆಕ್ಟೇರ್ ಸಜೆ, 32,000 ಹೆಕ್ಟೇರ್ ಹೆಸರು ಬಿತ್ತನೆಯಾಗಬೇಕಿತ್ತು. ಆದರೆ, ವರುಣನ ಮುನಿಸನ್ನು ಅರಿತ ನೇಗಿಲಯೋಗಿ ಸಮರ್ಪಕ ತೇವಾಂಶ ಲಭ್ಯವಾಗುವವರಿಗೂ ಭೂತಾಯಿಯ ಮಡಿಲಿಗೆ ಬೀಜ ಸುರಿಯದಿರಲು ನಿರ್ಧರಿಸಿದ್ದಾನೆ. ಇದರಿಂದಾಗಿ ಕೃಷಿ ಇಲಾಖೆಯ ಲೆಕ್ಕಾಚಾರಗಳು ತಲೆ ಕೆಳಗಾಗಿವೆ.ತಾಲ್ಲೂಕಿನ 1,20,588 ಹೆಕ್ಟೇರ್ ಸಾಗುವಳಿ ಕ್ಷೇತ್ರದಲ್ಲಿ 86,235 ಹೆಕ್ಟೇರ್ ಪ್ರದೇಶವನ್ನು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಮೀಸಲಿರಿಸಲಾಗಿದೆ. ಇದರಲ್ಲಿ 30,200 ಹೆಕ್ಟೇರ್ ಮಸಾರಿ (ಜವಗು ಮಿಶ್ರಿತ ಕೆಂಪು) ಪ್ರದೇಶ. 56,035 ಹೆಕ್ಟೇರ್ ಎರಿ (ಕಪ್ಪು ಮಣ್ಣಿನ) ಪ್ರದೇಶವಿದೆ. ಆದರೆ, ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭದಲ್ಲಿ ವರುಣ ತೋರಿದ ಉತ್ಸಾಹ ನಂತರದ ದಿನಗಳಲ್ಲಿ ಕಣ್ಮರೆಯಾಯಿತು.ಪರಿಣಾಮ ಸಮರ್ಪಕ ಮಳೆ ಸುರಿಯ ಬಹುದು ಎಂಬ ಅನ್ನದಾತನ ನಿರೀಕ್ಷೆಗಳೆಲ್ಲ ಹುಸಿಗೊಂಡವು. ಆದರೆ, ಬಿತ್ತನೆ ಕಾರ್ಯದ ಆರಂಭದಲ್ಲಿ 152.53 ಮಿಲಿ ಮೀಟರ್ ಮಳೆ ಪ್ರಮಾಣದಿಂದ ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡಲು ಮಾತ್ರ ಸಾಧ್ಯವಾಯಿತು. ಆದರೆ, ಬಿತ್ತನೆ ಮಾಡಿದ ಬೀಜಗಳು ಸಸಿಗಳಾಗಿ ನಿಂತಿವೆ. ಸದ್ಯ ಸಸಿಗಳಿಗೆ ಜೀವಜಲದ ಚಿಂತೆ ಎದುರಾಗಿದೆ. ಕಪ್ಪು ಮೋಡಗಳು ರೈತನ ಭರವಸೆಗಳೊಂದಿಗೆ ಚಲ್ಲಾಟವಾಡುತ್ತಿವೆ. ಹೀಗಿದ್ದರೂ ಮಳೆರಾಯ ಮುನಿಸು ತೊರೆದು ಕರುಣೆ ತೋರುತ್ತಾನೆಎಂಬ ವಿಶ್ವಾಸದಲ್ಲಿ ರೈತ ಸಮೂಹ ಆಗಸದತ್ತ ನೋಟ ಬೀರಿದ್ದಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.