ಸೋಮವಾರ, ಏಪ್ರಿಲ್ 19, 2021
31 °C

ಬಾಲಕಿ ರಕ್ಷಿಸಿದ ಬ್ರಿಟನ್ ಯುವರಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್: ಸಮುದ್ರದಲ್ಲಿ ಮುಳುಗುತ್ತಿದ್ದ ಬಾಲಕಿಯನ್ನು ಬ್ರಿಟನ್ ಯುವರಾಜ ವಿಲಿಯಮ್ಸ ಹೆಲಿಕಾಪ್ಟರ್ ಮೂಲಕ ಮಿಂಚಿನ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ...ಇದು ಯಾವುದೊ ಸಿನಿಮಾ ಕಥೆಯಲ್ಲ, ನೈಜ ಘಟನೆ.ಇಲ್ಲಿನ ವೇಲ್ಸ್ ಸಮುದ್ರದಲ್ಲಿ ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಿಸುವಂತೆ ಆಕೆಯ ಕುಟುಂಬದವರು ರಕ್ಷಣಾ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಕೂಡಲೇ ಯುವರಾಜ ವಿಲಿಯಮ್ಸ ಅಧಿಕಾರಿಗಳೊಂದಿಗೆ ಹೆಲಿಕಾಪ್ಟರ್‌ನಲ್ಲಿ ಸ್ಥಳಕ್ಕೆ ಧಾವಿಸಿ ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಿಸಿದ್ದಾರೆ ಎಂದು `ಡೈಲಿ ಎಕ್ಸ್‌ಪ್ರೆಸ್~ ವರದಿ ಮಾಡಿದೆ.ಬಾಲಕಿಯ ಕುಟುಂಬದವರು ಇಲ್ಲಿಗೆ ಪ್ರವಾಸಕ್ಕೆ ಬಂದ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಯುವರಾಜನ ರಕ್ಷಣಾ ಕಾರ್ಯಕ್ಕೆ ಬ್ರಿಟನ್‌ನಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.