ಶನಿವಾರ, ಮೇ 21, 2022
22 °C

ಬಿಇಎಂಎಲ್ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ಸ್ವಾಮ್ಯದ  ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಹೂಳೆತ್ತುವ ಯಂತ್ರೋಪಕರಣಗಳ ತಯಾರಿಕೆ, ವಿನ್ಯಾಸಕ್ಕೆ ಸಂಬಂಧಿಸಿದಂತೆ ನೆದರ್‌ಲೆಂಡ್ ಮೂಲದ ವೋಸ್ಟ್ ಎಲ್‌ಎಂಜಿ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡಿದೆ.

ಈ ಜಂಟಿ ಒಪ್ಪಂದದ ಅನ್ವಯ ದೇಶದಲ್ಲಿ ತಯಾರಿಸಲಾಗುವ ಹೂಳೆತ್ತುವ ಯಂತ್ರಗಳನ್ನು `ಬಿಇಎಂಎಲ್~ ಆಗ್ನೇಯ ಏಷ್ಯಾ ಮಾರುಕಟ್ಟೆಗಳಿಗೆ ರಫ್ತು ಮಾಡಲಿದೆ. ಈ ಉಪಕರಣಗಳ ತಯಾರಿಕೆಗಾಗಿ ವೋಸ್ಟ್ ಎಲ್‌ಎಂಜಿ ಕಂಪೆನಿಯಿಂದ ತಂತ್ರಜ್ಞಾನ ನೆರವು ಪಡೆದುಕೊಳ್ಳಲಾಗುವುದು ಎಂದು ಬಿಇಎಂಎಲ್ ಪ್ರಕಟಣೆ ತಿಳಿಸಿದೆ.

ವೋಸ್ಟ್  ಎಲ್‌ಎಂಜಿ ಜತೆಗಿನ ಒಪ್ಪಂದವು ಭಾರತ-ನೆದರ್‌ಲೆಂಡ್ ನಡುವಿನ ವಾಣಿಜ್ಯ ಸಂಬಂಧವನ್ನು ಇನ್ನಷ್ಟು ಬಲಪಡಿಸಲಿದ್ದು, ಇದರಿಂದ ದೇಶೀಯ ಮತ್ತು ಆಗ್ನೇಯ ಏಷ್ಯಾ ಮಾರುಕಟ್ಟೆಗಳಲ್ಲಿ ಇರುವ ಹೂಳೆತ್ತುವ ಯಂತ್ರಗಳ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಬಿಇಎಂಎಲ್ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.