ಬೆಂಗಳೂರು: ದೇಶದ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ತಂತ್ರಜ್ಞಾನ ಮತ್ತು ಆಧುನಿಕ ಯುದ್ಧ ಸಲಕರಣೆ ಪೂರೈಸುವ ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾ ನಿಕ್ಸ್ ಲಿ.(ಬಿಇಎಲ್), 2011-12ನೇ ಹಣಕಾಸು ವರ್ಷದ ವರಮಾನದಲ್ಲಿ ಸಣ್ಣ ಪ್ರಮಾಣದ ಹೆಚ್ಚಳ ಕಂಡಿದ್ದರೂ, ತೆರಿಗೆ ಪೂರ್ವ ಲಾಭದಲ್ಲಿ ಶೇ. 16ರಷ್ಟು ಕುಸಿತ ಕಂಡಿದೆ.

ಮಾರ್ಚ್ 31ಕ್ಕೆ ಕೊನೆಗೊಂಡ 2011-12ನೇ ಹಣಕಾಸು ವರ್ಷದ ತಾತ್ಕಾಲಿಕ ಲೆಕ್ಕಪತ್ರವನ್ನು ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಬಿಇಎಲ್ ಅಧ್ಯಕ್ಷ-ವ್ಯವಸ್ಥಾಪಕ ನಿರ್ದೇಶಕ ಅನಿಲ್ ಕುಮಾರ್, ಈ ಸಾಲಿನಲ್ಲಿ ರೂ 5710 ಕೋಟಿ(ಹಿಂದಿನ ವರ್ಷ ರೂ 5529.69) ವರಮಾನ ಬಂದಿದ್ದು, ರೂ 975 ತೆರಿಗೆ ಪೂರ್ವ ಲಾಭವಾಗಿದೆ ಎಂದರು. 2010-11ರಲ್ಲಿ ಸಂಸ್ಥೆ ರೂ 1161.15 ಕೋಟಿ ತೆರಿಗೆ ಪೂರ್ವ ಲಾಭ ಗಳಿಸಿತ್ತು.

ರಫ್ತು ವಹಿವಾಟಿನಲ್ಲಿ 30.80 ಲಕ್ಷ ಅಮೆರಿಕನ್ ಡಾಲರ್ನಷ್ಟು ಇಳಿಕೆಯಾಗಿದ್ದರಿಂದ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕೋರಿಕೆ ಮೇರೆಗೆ ಸಾಮಾಜಿಕ-ಆರ್ಥಿಕ-ಜಾತಿ ಗಣತಿಗಾಗಿ 6 ಲಕ್ಷ ಟ್ಯಾಬ್ಲೆಟ್ ಪಿಸಿ(ಪರ್ಸನಲ್ ಕಂಪ್ಯೂಟರ್)ಗಳನ್ನು ಕಡಿಮೆ ಬೆಲೆಗೆ ತಯಾರಿಸಿಕೊಟ್ಟಿದ್ದರಿಂದ ಲಾಭದಲ್ಲಿ ಕುಸಿತವಾಗಿದೆ ಎಂದು ವಿವರಿಸಿದರು.

2010-11ರಲ್ಲಿ 4.15 ಕೋಟಿ ಡಾಲರ್(ಅಂದಾಜು ್ಙ 211.65 ಕೋಟಿ) ಮೊತ್ತದ ಸಲಕರಣೆ-ತಂತ್ರಜ್ಞಾನ ರಫ್ತು ಮಾಡಲಾಗಿದ್ದರೆ, 2011-12ರಲ್ಲಿ ರಫ್ತಿನಿಂದ ಕಂಪನಿಗೆ 3.84 ಕೋಟಿ ಡಾಲರ್(ಅಂದಾಜು ರೂ 195.84 ಕೋಟಿ) ಮಾತ್ರ ವರಮಾನ ಬಂದಿದೆ.

ಇದರ ನಡುವೆಯೂ ಬಿಇಎಲ್ ಪ್ರಸಕ್ತ ಸಾಲಿನಲ್ಲಿ ಷೇರುದಾರರಿಗೆ ಶೇ. 100ರಷ್ಟು ಮಧ್ಯಂತರ ಲಾಭಾಂಶವನ್ನೂ ಘೋಷಿಸಿದ್ದು, ಕೇಂದ್ರ ಸರ್ಕಾರಕ್ಕೆ ರೂ 60.68 ಕೋಟಿ ಲಾಭಾಂಶ ಹಸ್ತಾಂತರಿಸಿದೆ.

ಲಾಭ ಗಳಿಕೆಯಲ್ಲಿ ಹಿನ್ನಡೆ ಕಂಡಿದ್ದರೂ, ಪ್ರಸಕ್ತ ವರ್ಷದಲ್ಲಿ ದೇಶದ ರಕ್ಷಣಾ ಪಡೆಗೆ ನೆಲದಿಂದ ಗಗನಕ್ಕೆ ಚಿಮ್ಮುವ ಮಧ್ಯಮ ಶ್ರೇಣಿಯ ಆಕಾಶ್ ವೆಪನ್ ಸಿಸ್ಟೆಂ(ಸಂಪೂರ್ಣ ದೇಶಿ ತಂತ್ರಜ್ಞಾನ), 3ಡೈಮನ್ಷೆನ್ನಲ್ಲಿ ಪರಿಶೋಧನೆ ನಡೆಸುವ ಸೆಂಟ್ರಲ್ ಅಕ್ವಿಸಿಷನ್ ರಾಡಾರ್(ರೋಹಿಣಿ), ಯುಎಚ್ಎಫ್ ಬ್ಯಾಂಡ್ನ ಡಿಜಿಟಲ್ ರೇಡಿಯೊ ಟ್ರಂಕಿಂಗ್ ಸಿಸ್ಟೆಂ ಹಾಗೂ ಕರಾವಳಿ ಕಾವಲು ಪಡೆಗೆ ಅಗತ್ಯವಾದ ಸಾಧನ ಸೇರಿದಂತೆ 17ಕ್ಕೂ ಅಧಿಕ ವಿವಿಧ ಸಾಧನಗಳನ್ನು ಅಭಿವೃದ್ಧಿಪಡಿಸಿಕೊಟ್ಟಿದ್ದೇವೆ ಎಂದು ಅನಿಲ್ ಕುಮಾರ್ ವಿವರಿಸಿದರು.

ಜತೆಗೆ, ಇದೇ ಸಾಲಿನಲ್ಲಿ ನೌಕಾಪಡೆಗೆ ಶಕ್ತಿ ತುಂಬುವಂತಹ ಐಎಸಿ ಮಾಡ್ ಸಿ(ಇಂಟಿಗ್ರೇಟೆಡ್ ಆಂಟಿ ಸಬ್ಮೆರೀನ್ ವಾರ್ಫೇರ್ ಕಾಂಪ್ಲೆಕ್ಸ್), ನೆಲ-ಸಮುದ್ರದಾಳದಲ್ಲಿನ ಶತ್ರುಪಡೆಯ ಆಯುಧಗಳನ್ನು ಪತ್ತೆಹಚ್ಚಬಲ್ಲ `ಅಡ್ವಾನ್ಸಡ್ ಟಾರ್ಪೆಡೊ ಡಿಫೆನ್ಸ್ ಸಿಸ್ಟೆಂ~, ಕಡಲಿನಲ್ಲಿ ಗಸ್ತು ನಡೆಸುವ ವಾಹನಕ್ಕೆ ಅಗತ್ಯವಾದ `ಎಲೆಕ್ಟ್ರೊ ಆಪ್ಟಿಕ್ ಫೈರ್ ಕಂಟ್ರೋಲ್ ಸಿಸ್ಟೆಂ~ ಸಾಧನಗಳನ್ನೂ ಸಂಶೋಧಿಸಿ-ಅಭಿವೃದ್ಧಿಪಡಿಸಿಕೊಟ್ಟಿದ್ದೇವೆ. 2011-12ರಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿಯೇ ರೂ 400 ಕೋಟಿ ವಿನಿಯೋಜಿಸಿದ್ದೇವೆ ಎಂದರು.

2010-11ರಲ್ಲಿ 11188ರಷ್ಟಿದ್ದ ಸಿಬ್ಬಂದಿ ಸಂಖ್ಯೆ ಪ್ರಸಕ್ತ ಸಾಲಿನಲ್ಲಿ 10,700ಕ್ಕೆ ಇಳಿಕೆಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

`ಆಕಾಶ್ ಕ್ಷಿಪಣಿ ಪೂರೈಕೆ ಸಮಸ್ಯೆ~
ಭಾರತೀಯ ವಾಯುಪಡೆಗೆ 2011-12ರಲ್ಲಿ `ಆಕಾಶ್ ವೆಪನ್ ಸಿಸ್ಟೆಂ~ ಪೂರೈಕೆಯಲ್ಲಿ ನಿಗದಿತ ಗುರಿ ಸಾಧಿಸಲಾಗಲಿಲ್ಲ ಎಂದು ಬಿಇಎಲ್ ಹೇಳಿದೆ.

ಬಿಇಎಲ್ನ ಸಹಯೋಗದ ಕಂಪನಿಯೊಂದ ರಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿತ್ತು. ಹಾಗಾಗಿ ಕಳೆದ ವರ್ಷ 96 ಕ್ಷಿಪಣಿಗಳನ್ನು ಪೂರೈಸುವುದಕ್ಕೆ ಬದಲಾಗಿ 15 ಕ್ಷಿಪಣಿ ಸರಬರಾಜು ಮಾಡಲಷ್ಟೇ ಸಾಧ್ಯವಾಯಿತು. ಇದೂ ಕೂಡ ನಿರೀಕ್ಷಿತ ವರಮಾನ ಬಾರದೇ ಇರಲು, ಲಾಭದಲ್ಲಿ ಕುಸಿತವಾಗಲು ಕಾರಣ ಎಂದು ಪ್ರಶ್ನೆಯೊಂದಕ್ಕೆ ಅನಿಲ್ ಕುಮಾರ್ ಉತ್ತರಿಸಿದರು. ಈ ವರ್ಷ ಹೀಗಾಗದು.

ಆಕಾಶ್ ಕ್ಷಿಪಣಿಗಳಿಗಾಗಿ ರಕ್ಷಣಾ ಇಲಾಖೆಯಿಂದ ರೂ16 ಸಾವಿರ ಕೋಟಿಯ ಕೋರಿಕೆ ಬರಲಿದ್ದು, ವರಮಾನ-ಲಾಭ ಎರಡೂ ಹೆಚ್ಚಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.