ಬುಧವಾರ, ಮೇ 19, 2021
24 °C

ಬಿ.ಇಡಿ ಹೇಗೆ ಅನಿವಾರ್ಯ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪನ್ಯಾಸಕರು ಎಂದಾಗ ವಿಜ್ಞಾನ, ಕಲಾ, ವಾಣಿಜ್ಯ ಮೂರು ವಿಭಾಗದವರು ಪರಿಗಣಿಸಲ್ಪಡುತ್ತಾರೆ. ವಿಜ್ಞಾನ ಮತ್ತು ಕಲಾ ವಿಭಾಗದವರೇ ಶೇ15 ರಿಂದ 20ರಷ್ಟು ಸಹ ಬಿ.ಇಡಿ ಮಾಡಿಲ್ಲದವರು. ಅಂತಹದರಲ್ಲಿ ಉಳಿದವರ ಗತಿಯೇನು? ವಾಣಿಜ್ಯ ವಿಭಾಗದವರಿಗೆ ಬಿ.ಇಡಿ ಮಾಡಲು ಅಸಾಧ್ಯ.

 

ಹೀಗಿರುವಾಗ ಉಪನ್ಯಾಸಕರ ವೃತ್ತಿಗೆ ಬಿ.ಇಡಿ ಅವಶ್ಯಕವೇ? ಅವಶ್ಯಕ ಎಂದಾದರೆ ವಾಣಿಜ್ಯ ವಿಭಾಗದವರ ಸ್ಥಿತಿಯೇನು? ಮತ್ತು ಶೇ 80ರಷ್ಟು ಮಂದಿ ಬಿ.ಇಡಿ ಮಾಡಿಲ್ಲದ ಕಲಾ ಮತ್ತು ವಿಜ್ಞಾನ ವಿಭಾಗದವರ ಸ್ಥಿತಿಯೇನು ಎಂಬ ಪ್ರಶ್ನೆ ಮೂಡುವುದು ಸಹಜ.ಬೋಧನಾ ವಿಧಾನ ಮತ್ತು ಮಕ್ಕಳ ಮನಸ್ಥಿತಿ ಅರಿತು ಗುಣಮಟ್ಟದ ಉಪನ್ಯಾಸ ನೀಡುವಲ್ಲಿ ಬಿ.ಇಡಿ ಅಥವಾ ಎಂ.ಫಿಲ್, ಸ್ಲೆಟ್, ನೆಟ್ ಅವಶ್ಯಕ ಎನ್ನುವುದಾದರೆ ಅರೆಕಾಲಿಕ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರ ಬೋಧನಾ ಗುಣಮಟ್ಟ ತೃಪ್ತಿಕರವಾಗಿಲ್ಲವೇ? ಇವರೆಲ್ಲಾ  ಬಿ.ಇಡಿ. ಮಾಡಿ ತಮ್ಮ ವೃತ್ತಿ ನಿರ್ವಹಿಸುತ್ತಿದ್ದಾರೆಯೇ?ಇವರಿಂದ ಪಾಠ ಪ್ರವಚನ ಕೇಳಿದ ಮಕ್ಕಳೆಲ್ಲಾ ಉತ್ತೀರ್ಣರಾಗುತ್ತಿಲ್ಲವೇ?

ಉಪನ್ಯಾಸಕ ವೃತ್ತಿಗೆ ಬಿ.ಇಡಿ. ಅಥವಾ ಎಂ.ಫಿಲ್. ಒಮ್ಮೆ ಅವಶ್ಯಕ ಮತ್ತೊಮ್ಮೆ ಅವಶ್ಯಕವಿಲ್ಲ ಎಂದು ತೂಗೂಯ್ಯಾಲೆ ಸ್ಥಿತಿಯಲ್ಲಿದ್ದಾಗ ಯಾವ ಪದವಿ ಪಡೆಯಬೇಕು ಎಂಬ ಗೊಂದಲ ಮೂಡುತ್ತದೆ.

 

ಹೀಗಾಗಿ ಶಿಕ್ಷಣ ತಜ್ಞರು ಮತ್ತೊಮ್ಮೆ ಚರ್ಚಿಸಿ ಮುಂದಿನ ಸಾಲಿನಲ್ಲಿಯಾದರೂ ಒಂದು ಸೂಕ್ತವಾದ ಕ್ರಮ ಜರುಗಿಸಿದರೆ ಉಪನ್ಯಾಸಕರಿಗೆ ಅನುಕೂಲವಾಗುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಏಕಾಏಕಿ ಬಿ.ಇಡಿ. ಆಗಲೀ ಎಂ.ಫಿಲ್. ಆಗಲೀ ಅವಶ್ಯ ಎಂದಾದರೆ ಎಂ.ಎ ಮುಗಿಸಿ ಅವಕಾಶಕ್ಕಾಗಿ ಕಾದು ಕುಳಿತ ನಿರುದ್ಯೋಗಿಗಳ ಭವಿಷ್ಯಕ್ಕೆ ಅಡ್ಡಿಯಾಗುತ್ತದೆ.ಸರ್ಕಾರದ ಈ ಕ್ರಮದಿಂದ ಸಿಗುವ ಅವಕಾಶಗಳಿಗೂ ಕತ್ತರಿ ಬಿದ್ದರೆ ಸ್ನಾತಕೋತ್ತರ ಪದವೀಧರರು ನಿರುದ್ಯೋಗಿಗಳಾಗಿಯೇ ಉಳಿಯಬೇಕಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.