ಸೋಮವಾರ, ಜೂನ್ 14, 2021
21 °C

ಬಿಎಂಎಸ್‌ನಲ್ಲಿ ಇ-–ಸಪ್ತಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿ.ಎಂ. ಶ್ರೀನಿವಾಸಯ್ಯ (ಬಿಎಂಎಸ್) ಎಂಜಿನಿಯರಿಂಗ್‌ ಕಾಲೇಜಿನ ಉದ್ಯಮಶೀಲತಾ ಅಭಿವೃದ್ಧಿ ಘಟಕವು ‘ನಾವೀನ್ಯ ಹಾಗೂ ಕ್ರಿಯಾಶೀಲತೆ’ ವಿಷಯ ಕುರಿತುಇ-–ಸಪ್ತಾಹ ಆಯೋಜಿಸಿತ್ತು.ದೊಡ್ಡ ಬಸವನಗುಡಿ ರಸ್ತೆಯಲ್ಲಿರುವ ಕಾಲೇಜಿನ ಆವರಣದಲ್ಲಿ ನಡೆದ ಸಪ್ತಾಹದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಪೊರೇಟ್ ಜಗತ್ತಿನ ಅವಶ್ಯಕತೆಗಳ ಬಗ್ಗೆ ಮಾಹಿತಿ ನೀಡಲಾಯಿತು. ವ್ಯಕ್ತಿಗಳ ನಡುವಿನ ಪರಸ್ಪರ ಅರ್ಥೈಸುವಿಕೆ ಹಾಗೂ ಮಾರುಕಟ್ಟೆ ಕೌಶಲಗಳನ್ನು ಉತ್ತಮಪಡಿಸಿಕೊಳ್ಳಲು ನೆರವಾಯಿತು.‘ವಿದ್ಯಾರ್ಥಿಗಳ ಸ್ವತಂತ್ರ ಹಾಗೂ ಕ್ರಿಯಾತ್ಮಕ ಆಲೋಚನೆಗಳಿಗೆ ಕಾಲೇಜು ಸದಾ ಪ್ರೋತ್ಸಾಹ ಹಾಗೂ ಪ್ರಾಮುಖ್ಯ ನೀಡುತ್ತಿದ್ದು, ಆ ನಿಟ್ಟಿನಲ್ಲಿ ಕಾಲೇಜು ಮಟ್ಟದಲ್ಲೇ ಉದ್ಯಮಶೀಲತಾ ಪರಿಕಲ್ಪನೆಯನ್ನು ಅವರ ಮನಸ್ಸುಗಳಲ್ಲಿ ತುಂಬುವುದು ನಮ್ಮ ಉದ್ದೇಶ ಹಾಗೂ ಇ–-ಸಪ್ತಾಹದ  ಉದ್ದೇಶವೂ ಇದೇ ಆಗಿದೆ’ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಬಾಬು.ಆರ್ಥಿಕ ಕುಸಿತ ಹಾಗೂ ನಿರುದ್ಯೋಗ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ವಿಚಾರ ಗೋಷ್ಠಿಯನ್ನು ಕೂಡ ಏರ್ಪಡಿಸಲಾಗಿತ್ತು. ಕಾಲೇಜಿನ ನಾಟಕ ತಂಡ ‘ಪ್ರವೃತ್ತಿ’ ಸದಸ್ಯರಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.