ಮಂಗಳವಾರ, ಮೇ 11, 2021
26 °C

ಬಿಎಂಟಿಸಿಗೆ ಹುಡ್ಕೊ ಪ್ರಶಸ್ತಿ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ನಿಗಮದ (ಹುಡ್ಕೊ) 2012 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಯ್ಕೆಯಾಗಿದೆ.ನಗರ ಪ್ರದೇಶಗಳ ಜನರ ಜೀವನ ಪರಿಸರವನ್ನು ಉತ್ತಮಪಡಿಸಲು ಕೈಗೊಂಡ ಅತ್ಯುತ್ತಮ ಸೇವೆಗಾಗಿ ಪ್ರತಿ ವರ್ಷ ಈ ಪ್ರಶಸ್ತಿಯನ್ನು ಹುಡ್ಕೊ ನೀಡುತ್ತಿದೆ.ಬಿಎಂಟಿಸಿಯು ಬೆಂಗಳೂರು ನಗರದ ಪ್ರಮುಖ 10 ಸ್ಥಳಗಳಲ್ಲಿ ಸಂಚಾರ ಮತ್ತು ಸಾರಿಗೆ ನಿರ್ವಹಣಾ ಕೇಂದ್ರಗಳನ್ನು (ಟಿಟಿಎಂಸಿ) ನಿರ್ಮಿಸಿರುವ ಯೋಜನೆಯನ್ನು, ನಗರ ಪ್ರದೇಶಗಳ ಸಾರಿಗೆ ಸೇವೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿರುವುದು ಅತ್ಯುತ್ತಮ ಕಾರ್ಯವೆಂದು ಪರಿಗಣಿಸಲಾಗಿದೆ.ಪ್ರಶಸ್ತಿಯು 1 ಲಕ್ಷ ರೂ ನಗದು ಬಹುಮಾನ ಹೊಂದಿದ್ದು, ಹುಡ್ಕೊ ವಾರ್ಷಿಕ ದಿನವಾದ ಏ. 25 ರಂದು ನವದೆಹಲಿಯ ಇಂಡಿಯನ್ ಹ್ಯಾಬಿಟಾಟ್ ಸೆಂಟರ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವೆ ಸೆಲ್ಜಾ ಪ್ರಶಸ್ತಿ ನೀಡುವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.