ಫೆಬ್ರುವರಿ 7 ಮತ್ತು 14ರಂದು ಕೆ.ಆರ್. ರಾಘವೇಂದ್ರರಾವ್ರವರ `ಇನ್ನೊಂದು ನೇರ ಬಸ್ ಆರಂಭಿಸಿ~ ಎಂಬ ದೂರು.

ವಿದ್ಯಾಮಾನ್ಯನಗರದಿಂದ ಶಿವಾಜಿನಗರಕ್ಕೆ ಮಾರ್ಗಸಂಖ್ಯೆ: 243ಹೆಚ್ ರಲ್ಲಿ 1 ಅನುಸೂಚಿಯು ಆಚರಣೆಯಲ್ಲಿರುತ್ತದೆ ಮತ್ತು ಮಾರ್ಗಸಂಖ್ಯೆ: 244ಸಿ/6 ರಲ್ಲಿ ಬೆಳಿಗ್ಗೆ 8 ಗಂಟೆಗೆ ವಿದ್ಯಾಮಾನ್ಯನಗರದಿಂದ ಶಿವಾಜಿನಗರಕ್ಕೆ ಸುತ್ತುವಳಿಯನ್ನು ಒದಗಿಸಲಾಗಿದೆ. ಇದಲ್ಲದೆ ಕೆ.ಆರ್. ಮಾರುಕಟ್ಟೆ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದಿಂದ ವಿದ್ಯಾಮಾನ್ಯನಗರ ಮಾರ್ಗವಾಗಿಯೇ ಅಂದ್ರಹಳ್ಳಿ, ತಿಗಳರಪಾಳ್ಯಕ್ಕೆ ಒಟ್ಟು 20 ಅನುಸೂಚಿಗಳಲ್ಲಿ ಆಚರಣೆಯಲ್ಲಿದ್ದು, ಪ್ರಸ್ತುತ ಸಾರ್ವಜನಿಕ ಪ್ರಯಾಣಿಕರ ಒತ್ತಡಕ್ಕನುಗುಣವಾಗಿರುತ್ತದೆ. ಸಾರ್ವಜನಿಕ ಪ್ರಯಾಣಿಕರು ಒಂದು ಬಸ್ ಬದಲಾವಣೆ ಮಾಡುವುದರ ಮೂಲಕ ಸಹ ಶಿವಾಜಿನಗರಕ್ಕೆ ಪ್ರಯಾಣಿಸಬಹುದಾಗಿರುತ್ತದೆ.
ಫೆಬ್ರುವರಿ 14ರಂದು ಶ್ರಿನಗರ ಪ್ರಯಾಣಿಕರ `ಶ್ರಿನಗರ-ಶಿವಾಜಿನಗರ ಬಸ್ ಅವ್ಯವಸ್ಥೆ~ ಎಂಬ ದೂರು.

ಪ್ರಸ್ತುತ ಶಿವಾಜಿನಗರದಿಂದ ಶ್ರಿನಗರ, ಗಿರಿನಗರಕ್ಕೆ ಮಾರ್ಗಸಂಖ್ಯೆ: 37 ರಲ್ಲಿ 5 ಅನುಸೂಚಿಗಳಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ. ನಗರದಲ್ಲಿ ಸಂಚಾರ ದಟ್ಟಣೆಯಿಂದ ಕಾರ್ಯಾಚರಣೆಯಲ್ಲಿ ಸ್ವಲ್ಪ ವ್ಯತ್ಯಯವಿರುವ ಸಾಧ್ಯತೆಗಳಿದ್ದು, ವ್ಯವಸ್ಥಿತ ಆಚರಣೆಗೆ ಕ್ರಮ ಕೈಗೊಳ್ಳಲಾಗಿದೆ.

ಫೆಬ್ರುವರಿ 14ರಂದು ಪ್ರಯಾಣಿಕರವರ `ಬಸ್ ಮಾರ್ಗ ಬದಲಾಯಿಸಿ~ ಎಂಬ ದೂರು.
ಈಗಾಗಲೇ ಮಾರ್ಗಸಂಖ್ಯೆ: 401ಎಂಬಿ ರಲ್ಲಿ ಎರಡು ಅನುಸೂಚಿಗಳಲ್ಲಿ ಹೆಬ್ಬಾಳ ವರ್ತುಲ ರಸ್ತೆಯಿಂದ ಬಿಇಎಲ್ ಸರ್ಕಲ್, ಯಶವಂತಪುರ, ಗೋವರ್ಧನ, ಆರ್.ಎಂ.ಸಿ. ಯಾರ್ಡ್, ಗೊರಗುಂಟೆಪಾಳ್ಯ ಮಾರ್ಗವಾಗಿ ಮಲ್ಲತಹಳ್ಳಿಗೆ ಆಚರಣೆಯಲ್ಲಿದ್ದು, ಸದರಿ ಸೌಲಭ್ಯವನ್ನು ಸಾರ್ವಜನಿಕ ಪ್ರಯಾಣಿಕರು ಪಡೆಯಬಹುದಾಗಿರುತ್ತದೆ.

ಫೆಬ್ರುವರಿ 28ರಂದು ನೊಂದ ಪ್ರಯಾಣಿಕರವರ ಚಾಲಕನ ಬೇಜವಾಬ್ದಾರಿ ಎಂಬ ದೂರು.
ಮೆಜೆಸ್ಟಿಕ್ನಿಂದ ಮಾರುಕಟ್ಟೆವರೆಗೆ ಮೊಬೈಲ್ನಲ್ಲಿ ಮಾತನಾಡಿಕೊಂಡು ಯಾವುದೇ ಬಸ್ ನಿಲುಗಡೆಗಳಲ್ಲಿ ಬಸ್ ನಿಲ್ಲಿಸದೇ ವಾಹನ ಚಾಲನೆ ಮಾಡಿಕೊಂಡು ಹೋಗಿರುವ ಸೂಕ್ತ ಸೂಚಿಸಿ ಕ್ರಮ ಕೈಗೊಳ್ಳಲಾಗಿದೆ.

ಮಾರ್ಚ್ 6ರಂದು ನೊಂದ ಪ್ರಯಾಣಿಕರವರ `ಇದೆಂಥಾ ವಜ್ರ ಸೇವೆ?~ ಎಂಬ ದೂರು.
ಶ್ರಿನಗರದಿಂದ ಬನಶಂಕರಿಗೆ ಆಚರಣೆಯಲ್ಲಿರುವ ವಾಹನವನ್ನು ಬನಶಂಕರಿ ಬಸ್ ನಿಲ್ದಾಣಕ್ಕೆ ಹೋಗದೇ ಬನಶಂಕರಿ ಹುಣಸೇಮರದ 40ನೇ ಕ್ರಾಸ್ ಪ್ರಭಾ ನೇತ್ರಾಲಯದ ಬಳಿಯೇ ಪ್ರಯಾಣಿಕರನ್ನು ಇಳಿಸಿ ಹೋಗಿರುವ ಬಗ್ಗೆ ಸದರಿ ಚಾಲಕ/ನಿರ್ವಾಹಕರನ್ನು ವಿಚಾರಣೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಮಾರ್ಚ್ 6ರಂದು ಮಾಗಡಿ ರಸ್ತೆ ನಾಗರಿಕರವರ `ಮಿನಿ ಬಸ್ ವ್ಯವಸ್ಥೆ ಮಾಡಿ~ ಎಂಬ ದೂರು.

ಮಾಗಡಿ ರಸ್ತೆ ಪ್ರಸನ್ನ ವೃತ್ತದಿಂದ 1ನೇ ಕ್ರಾಸ್ವರೆಗೆ ಮೆಟ್ರೋ ಕಾಮಗಾರಿ ಹಾಗೂ 1ನೇ ಕ್ರಾಸ್ನಿಂದ ಬಿನ್ನಿಮಿಲ್ ವೃತ್ತದವರೆಗೆ ಬಿನ್ನಿಮಿಲ್ ರೈಲ್ವೆಬ್ರಿಡ್ಜ್ ಅಡಿಯಲ್ಲಿ ಮೋರಿ ಕಾಮಗಾರಿಯಿಂದಾಗಿ ಬಸ್ ಸೌಲಭ್ಯವಿಲ್ಲದರ ಬಗ್ಗೆ ಸಂಬಂಧಿಸಿದಂತೆ, ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಕಲ್ಪಿಸುವ ಸಲುವಾಗಿ ಕೆ.ಆರ್. ಮಾರುಕಟ್ಟೆಯಿಂದ ಗೂಡ್ಸ್ಶೆಡ್ ರಸ್ತೆ, ಸಿಟಿ ರೈಲ್ವೆ ನಿಲ್ದಾಣ, ಓಕಳಿಪುರ, ಮಾಗಡಿ ರಸ್ತೆ 1ನೇ ಕ್ರಾಸ್ ಮಾರ್ಗವಾಗಿ ಮಾಗಡಿ ರಸ್ತೆ 10ನೇ ಕ್ರಾಸ್ವರೆಗೆ ಮಾರ್ಗಸಂಖ್ಯೆ: 55ಸಿ ನಲ್ಲಿ 1 ಅನುಸೂಚಿಯನ್ನು ಆಚರಣೆ ಮಾಡಲಾಗುತ್ತಿದ್ದು, ಈ ಸೇವೆಗಳ ಸೌಲಭ್ಯವನ್ನು ಪ್ರಯಾಣಿಕರು ಪಡೆದುಕೊಳ್ಳಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.