ಶನಿವಾರ, ಜನವರಿ 18, 2020
20 °C
ಐ ಲೀಗ್‌ ಫುಟ್‌ಬಾಲ್‌

ಬಿಎಫ್‌ಸಿ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಫ್‌ಸಿ ಜಯಭೇರಿ

ಬೆಂಗಳೂರು: ರಾಬಿನ್‌ ಸಿಂಗ್‌ ಕೊನೆಯ ಕ್ಷಣದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಐ-ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 2_1 ಗೋಲುಗಳಿಂದ ಗೋವಾದ ಸಲಗಾಂವ್ಕರ್‌ ತಂಡವನ್ನು ಮಣಿಸಿತು.ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂ ಗಣದಲ್ಲಿ ಶನಿವಾರ ನಡೆದ ಪಂದ್ಯದ 27ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್‌ ಅವ ಕಾಶದಲ್ಲಿ ಗೋಲು ಗಳಿಸಿದ ಸುನಿಲ್‌ ಚೆಟ್ರಿ ಬಿಎಫ್‌ಸಿಗೆ ಮುನ್ನಡೆ ತಂದಿತ್ತರು.85ನೇ ನಿಮಿಷದಲ್ಲಿ ಫ್ರಾನ್ಸಿಸ್‌ ಫೆರ್ನಾಂಡಿಸ್‌ ಪೆನಾಲ್ಟಿ ಅವಕಾಶದಲ್ಲಿ ತಂದಿತ್ತ ಗೋಲಿನ ನೆರವಿನಿಂದ ಸಲಗಾಂವ್ಕರ್‌ ಸಮಬಲ ಸಾಧಿಸಿತು.ನೆರೆದ 8 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಪಂದ್ಯ ಇನ್ನೇನು ಡ್ರಾದಲ್ಲಿ ಕೊನೆಗೊಳ್ಳಲಿದೆ ಎಂದು ಭಾವಿಸಿದ ಸಂದರ್ಭದಲ್ಲೇ ಬಿಎಫ್‌ಸಿಗೆ ಪೆನಾಲ್ಟಿ ಕಿಕ್‌ ಲಭಿಸಿತು. ಇಂಜುರಿ ಅವಧಿಯಲ್ಲಿ (90+3) ದೊರೆತ ಪೆನಾಲ್ಟಿ ಕಿಕ್‌ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ ರಾಬಿನ್‌ ಸಿಂಗ್‌ ಆತಿಥೇಯ ತಂಡದ ಗೆಲುವಿನ ರೂವಾರಿ ಎನಿಸಿದರು.ಈ ಗೆಲುವಿನ ಮೂಲಕ ಬಿಎಫ್‌ಸಿ 15 ಪಂದ್ಯಗಳಿಂದ ತನ್ನ ಪಾಯಿಂಟ್‌ಗಳನ್ನು 30ಕ್ಕೆ ಹೆಚ್ಚಿಸಿಕೊಂಡಿದ್ದು, ಅಗ್ರ ಸ್ಥಾನವನ್ನು ಮತ್ತಷ್ಟು ಬಲಪಡಿಸಿ­ಕೊಂಡಿತು.

 

ಪ್ರತಿಕ್ರಿಯಿಸಿ (+)