ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಮೂರನೇ ಖಾಸಗಿ ದೂರಿಗೆ ಸಂಬಂಧಿಸಿದ ಜಾಮೀನು ಅರ್ಜಿಯ ವಿಚಾರಣೆಯಲ್ಲಿ ಎಲ್ಲ ಆರೋಪಿಗಳ ವಕೀಲರ ವಾದ ಮಂಡನೆ ಬಹುತೇಕ ಮುಗಿದಿದೆ. ಶನಿವಾರ ಬಾಷಾ ಪರ ವಕೀಲರ ವಾದ ಮಂಡನೆಯೊಂದಿಗೆ ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಯಡಿಯೂರಪ್ಪ ಮತ್ತು ಅವರ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಶುಕ್ರವಾರ ಕೂಡ ವಿಚಾರಣೆಗೆ ಗೈರು ಹಾಜರಾಗಿದ್ದರು. ಗುರುವಾರ ಕೆಲ ಆರೋಪಿಗಳ ಪರ ವಕೀಲರು ಜಾಮೀನು ಕೋರಿ ವಾದ ಮಂಡಿಸಿದ್ದರು. ಪ್ರಮುಖ ಆರೋಪಿಗಳ ಪರ ವಕೀಲರು ಶುಕ್ರವಾರ ವಾದ ಮಂಡನೆ ಪೂರ್ಣಗೊಳಿಸಿದರು.

ತಮ್ಮ ಕಕ್ಷಿದಾರರು ಯಾವುದೇ ತಪ್ಪು ಮಾಡದಿದ್ದರೂ ಖಾಸಗಿ ದೂರಿನಲ್ಲಿ ಆರೋಪ ಹೊರಿಸಲಾಗಿದೆ. ಆರೋಪಿಗಳ ಸ್ಥಾನದಲ್ಲಿರುವ ಬಹುತೇಕರು ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಿದ್ದಾರೆ. ಜಾಮೀನು ನಿರಾಕರಿಸಿದರೆ ಅವರ ಭವಿಷ್ಯವೇ ಅಪಾಯಕ್ಕೆ ಸಿಲುಕುತ್ತದೆ. ಆದ್ದರಿಂದ ಷರತ್ತುಬದ್ಧ ಜಾಮೀನನ್ನಾದರೂ ಮಂಜೂರು ಮಾಡಬೇಕು ಎಂದು ಆರೋಪಿಗಳ ಪರ ವಕೀಲರು ನ್ಯಾಯಾಧೀಶ ಎನ್.ಕೆ.ಸುಧೀಂದ್ರರಾವ್ ಅವರಲ್ಲಿ ಮನವಿ ಮಾಡಿಕೊಂಡರು.

ಮುರ್ಡೇಶ್ವರ ಕಂಪೆನಿ ಹೆಸರು!: ಆರಂಭದಲ್ಲಿ ವಾದ ಮಂಡಿಸಿದ ಶಾಸಕ ಡಾ.ಡಿ.ಹೇಮಚಂದ್ರ ಸಾಗರ್ ಪರ ವಕೀಲರು, `ಯಡಿಯೂರಪ್ಪ ಪುತ್ರರ ಒಡೆತನದ ಸಹ್ಯಾದ್ರಿ ಹೆಲ್ತ್ಕೇರ್ ಅಂಡ್ ಡಯಾಗ್ನಾಸ್ಟಿಕ್ಸ್ ಕಂಪೆನಿಗೆ ಹೇಮಚಂದ್ರ ಸಾಗರ್ ಅವರ ಸಾಗರ್ ಹೆಲ್ತ್ಕೇರ್ ಅಂಡ್ ಡಯಾಗ್ನಾಸ್ಟಿಕ್ಸ್ ಕಂಪೆನಿ 3.35 ಕೋಟಿ ರೂಪಾಯಿ ಪಾವತಿಸಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಈ ಮೊತ್ತವನ್ನು ಮುರ್ಡೇಶ್ವರ ಕಂಪೆನಿ ಮತ್ತು ಇಂದಿವರ ಕಂಪೆನಿ ಎಂಬ ಸಂಸ್ಥೆಗಳು ಪಾವತಿಸಿವೆ. ದಾಖಲೆಗಳ ಆಧಾರವಿಲ್ಲದೇ ಸಾಗರ್ ಅವರ ಹೆಸರನ್ನು ದೂರಿನಲ್ಲಿ ಸೇರಿಸಲಾಗಿದೆ~ ಎಂದು ವಾದಿಸಿದರು.

ಹೇಮಚಂದ್ರ ಸಾಗರ್ ಒಡೆತನದ ಸಾಗರ್ ಹೆಲ್ತ್ಕೇರ್ ಸಂಸ್ಥೆಯು ಸಹ್ಯಾದ್ರಿ ಹೆಲ್ತ್ಕೇರ್ ಸಂಸ್ಥೆಯಲ್ಲಿ ಶೇಕಡ 50ರಷ್ಟು ಷೇರುಗಳನ್ನು ಖರೀದಿಸಿತ್ತು. ಆದರೆ, 2010ರ ಮಾರ್ಚ್ 2ರಂದು ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಪೂರ್ಣ ಷೇರುಗಳನ್ನು ಹಿಂದಿರುಗಿಸಲಾಗಿತ್ತು. ಉತ್ತರಹಳ್ಳಿಯಲ್ಲಿ ಸಾಗರ್ ಹೆಸರಿನಲ್ಲಿದ್ದ ಭೂಮಿಯ ಡಿನೋಟಿಫಿಕೇಷನ್ನಲ್ಲೂ ಅಕ್ರಮ ನಡೆದಿಲ್ಲ. ದೂರು ಸಲ್ಲಿಸಿರುವವರು ನ್ಯಾಯಾಲಯಕ್ಕೆ ಸಮರ್ಪಕ ದಾಖಲೆಗಳನ್ನು ಒದಗಿಸಿಲ್ಲ ಎಂದು ದೂರಿದರು.

`ತಪ್ಪು ನಡೆದಿಲ್ಲ~: ಯಡಿಯೂರಪ್ಪ ಪರ ವಾದಿಸಿದ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ರವಿ ಬಿ.ನಾಯಕ್, ದೂರಿನಲ್ಲಿ ಉಲ್ಲೇಖಿಸಿರುವ ಎಲ್ಲ ಸರ್ವೇ ನಂಬರ್ಗಳ ಭೂಮಿಯನ್ನು 2007ರಲ್ಲೇ ಡಿನೋಟಿಫೈ ಮಾಡಲಾಗಿತ್ತು. ಆಗ ತಮ್ಮ ಕಕ್ಷಿದಾರರು ಮುಖ್ಯಮಂತ್ರಿ ಹುದ್ದೆಯಲ್ಲಿ ಇರಲಿಲ್ಲ. ಹಿಂದಿನ ಮುಖ್ಯಮಂತ್ರಿಯ ಅವಧಿಯಲ್ಲಿ ಡಿನೋಟಿಫೈ ಮಾಡಲಾಗಿತ್ತು. ಅವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ವಾದಿಸಿದರು.

`ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಹಲವು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿ ಇದ್ದಾರೆ. ಅವರಿಗೆ ಜಾಮೀನು ನಿರಾಕರಿಸಿದರೆ ಅವರ ಭವಿಷ್ಯಕ್ಕೆ ತೊಂದರೆ ಆಗುತ್ತದೆ. ಈಗಾಗಲೇ ಒಂದು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್ ನಮ್ಮ ಕಕ್ಷಿದಾರರ ಬಗ್ಗೆ ಒಳ್ಳೆಯ ಮಾತನಾಡಿದೆ. ಅವರಿಗೆ ಕನಿಷ್ಠ ಷರತ್ತುಗಳನ್ನು ಒಳಗೊಂಡ ಜಾಮೀನು ನೀಡಬೇಕು~ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.