ಬೆಂಗಳೂರು: ಪ್ರೇರಣಾ ಶಿಕ್ಷಣ ಮತ್ತು ಸಾಮಾಜಿಕ ಟ್ರಸ್ಟ್ಗೆ (ಪಿಇಎಸ್) ದೇಣಿಗೆ ಸಂದಾಯ ವಿವಾದವು ಬುಧವಾರವೂ ವಿಧಾನಮಂಡಲದ ಉಭಯ ಸದನಗಳಲ್ಲಿ ಗದ್ದಲಕ್ಕೆ ಕಾರಣವಾಯಿತು. ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ಧರಣಿ ಇಡೀ ದಿನದ ಕಲಾಪವನ್ನು ನುಂಗಿ ಹಾಕಿತು.

ಬೆಳಿಗ್ಗೆ ವಿಧಾನಸಭೆ ಸೇರುತ್ತಿದ್ದಂತೆ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದರು. ಆ ವೇಳೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಜಾಗಕ್ಕೆ ತೆರಳಿ ಪ್ರತಿಭಟನೆ ಆರಂಭಿಸಿದರು. ‘ಸಿಬಿಐ ತನಿಖೆಗೆ ಒಪ್ಪಿಗೆ ನೀಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ.

ಪ್ರೇರಣಾ ಟ್ರಸ್ಟ್ಗೆ ಕೋಟ್ಯಂತರ ರೂಪಾಯಿ ದೇಣಿಗೆ ಸಂದಾಯವಾಗಿದ್ದು, ಈ ಕುರಿತು ತನಿಖೆ ನಡೆಸಲೇಬೇಕು’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು ಹಿಡಿದರು.

ಪ್ರತಿಭಟನೆ ತೀವ್ರಗೊಂಡಾಗ ಸದನವನ್ನು ಒಂದು ಗಂಟೆ ಕಾಲ ಮುಂದೂಡಲಾಯಿತು. ಪುನಃ ಸೇರಿದಾಗಲೂ ಧರಣಿ ಮುಂದುವರೆದ ಕಾರಣ ಮಧ್ಯಾಹ್ನಕ್ಕೆ ಸದನವನ್ನು ಮುಂದೂಡಲಾಯಿತು. ಮಧ್ಯಾಹ್ನ ನಂತರ ಸೇರಿದಾಗಲೂ ಧರಣಿ ಮುಂದುವರೆಯಿತು. ಕೊನೆಗೆ ತರಾತುರಿಯಲ್ಲಿ 11 ಮಸೂದೆಗಳನ್ನು ಚರ್ಚೆ ಇಲ್ಲದೆ ಅಂಗೀಕರಿಸಿ, ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಇದಕ್ಕೂ ಮುನ್ನ ಸಿದ್ದರಾಮಯ್ಯ ಮಾತನಾಡಿ, ‘ತೋರಣಗಲ್ ಸೇರಿದಂತೆ ಬಳ್ಳಾರಿಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಅದಕ್ಕೆ ಒಂದು ಪೈಸೆ ನೆರವು ನೀಡದ ಜಿಂದಾಲ್ ಸಂಸ್ಥೆಯವರು ಪ್ರೇರಣಾ ಟ್ರಸ್ಟ್ಗೆ ಏಕೆ ಕೋಟಿಗಟ್ಟಲೆ ಹಣ ಕೊಟ್ಟರು? ಇದಕ್ಕೆ ಏನಾದರೂ ಕಾರಣ ಇರಲೇಬೇಕು. ನಮ್ಮ ಪ್ರಕಾರ ಜಿಂದಾಲ್ ಸಂಸ್ಥೆಗೆ ಅಕ್ರಮವಾಗಿ ಅನುಕೂಲ ಮಾಡಿಕೊಟ್ಟಿರುವುದರಿಂದಲೇ ದೇಣಿಗೆ ಕೊಟ್ಟಿರುವುದು’ ಎಂದು ಛೇಡಿಸಿದರು.

ಈ ಹಂತದಲ್ಲಿ ಸದನ ಪ್ರವೇಶಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ‘ಪ್ರೇರಣಾ ಟ್ರಸ್ಟ್ ಒಂದು ಸಾರ್ವಜನಿಕರ ಸಂಸ್ಥೆಯಾಗಿದ್ದು, ದೇಣಿಗೆ ಕೊಟ್ಟಿರುವವರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ’ ಎಂದು ಸಮರ್ಥಿಸಿಕೊಂಡರು.

‘ದೇಣಿಗೆ ಸಲುವಾಗಿ ಏನಾದರೂ ಅನುಕೂಲ ಮಾಡಿಕೊಟ್ಟಿದ್ದಕ್ಕೆ ದಾಖಲೆ ಇದ್ದರೂ ಅದನ್ನು ಸದನದಲ್ಲಿ ಮಂಡಿಸುವಂತೆ ನಾನು ಹೇಳಿದ್ದೆ. ಆದರೆ ಪ್ರತಿಪಕ್ಷಗಳ ಮುಖಂಡರು ಕೇವಲ ಆರೋಪ ಮಾಡಿ ನುಣುಚಿಕೊಳ್ಳುತ್ತಿದ್ದಾರೆ. ಯಾರೂ ತಮ್ಮ ಅಪ್ಪನ ಮನೆಯ ಆಸ್ತಿ ತಂದು ಶಿಕ್ಷಣ ಸಂಸ್ಥೆ ಕಟ್ಟುವುದಿಲ್ಲ. ಎಲ್ಲರೂ ದೇಣಿಗೆಯಿಂದಲೇ ಸಂಸ್ಥೆಗಳನ್ನು ಕಟ್ಟಿಸಿರುವುದು. ಬೇಕಾದರೆ ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರರನ್ನು ಕೇಳಿ’ ಎಂದು ಪ್ರತಿಪಕ್ಷ ಮುಖಂಡರತ್ತ ಕೈತೋರಿಸಿದರು. ಸದನದಲ್ಲಿ ಹಾಜರಿದ್ದ ಶಿವಕುಮಾರ್ ಮಾತನಾಡಿ, ‘ಆ ರೀತಿಯ ದೇಣಿಗೆ ಹಣದಿಂದ ನಾವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ನಂತರ ಮುಖ್ಯಮಂತ್ರಿ ಮಾತನಾಡಿ, ‘ಜಿಂದಾಲ್ ಸಂಸ್ಥೆಯವರು ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆ ಆರಂಭಿಸಿದ್ದರೂ ಇದುವರೆಗೂ ಅವರಿಗೆ ಗಣಿಗಾರಿಕೆ ಮಾಡಲು ಅನುಮತಿ ನೀಡಿರಲಿಲ್ಲ. ಬದಲಿಗೆ, ಹಿಂದಿನ ಸರ್ಕಾರಗಳು ಹಗಲು ದರೋಡೆ ಮಾಡಿವೆ. ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಉಕ್ಕು ಕೈಗಾರಿಕೆಗಳನ್ನು ಸ್ಥಾಪಿಸಿದವರಿಗೆ ಮಾತ್ರ ಗಣಿಗಾರಿಕೆಗೆ ಅವಕಾಶ ನೀಡಿ ಉದ್ಯೋಗ ಸೃಷ್ಟಿಗೆ ಸಹಾಯ ಮಾಡಿದೆ. ಈ ಕೆಲಸವನ್ನು ಹಿಂದಿನ ಸರ್ಕಾರಗಳು ಏಕೆ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

‘ಹಳದಿ ಕನ್ನಡಕ ಹಾಕಿಕೊಂಡಿರುವವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ’ ಎಂದು ಪ್ರತಿಪಕ್ಷಗಳ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ, ‘ಪ್ರೇರಣಾ ಟ್ರಸ್ಟ್ಗೆ ದೇಣಿಗೆ ಸಂದಾಯ ಆಗಿರುವ ಕುರಿತು ಯಾವ ತನಿಖೆಗೂ ಆದೇಶಿಸುವುದಿಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದರು.

‘ಈ ಕುರಿತು ವಿನಾಕಾರಣ ಆರೋಪ ಮಾಡಿ, ನನ್ನನ್ನು ಅಲುಗಾಡಿಸಲು ಸಾಧ್ಯ ಇಲ್ಲ. ಯಾವುದೊ ಒಂದು ಕೋಮನ್ನು ಉದ್ದೇಶವಾಗಿ ಇಟ್ಟುಕೊಂಡು ಇಷ್ಟೆಲ್ಲ ಆರೋಪಗಳನ್ನು ಮಾಡಲಾಗುತ್ತಿದೆ’ ಎಂದು ಆಕ್ಷೇಪಿಸಿದರು. ಪ್ರತಿಪಕ್ಷಗಳು ಕೇವಲ ಪ್ರಚಾರಕ್ಕಾಗಿ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುತ್ತಿವೆ ಎಂದೂ ಟೀಕಿಸಿದರು.

ಸಿದ್ದರಾಮಯ್ಯ ಮಾತನಾಡಿ, ‘ಯಾವುದೇ ತನಿಖೆಗೆ ಸಿದ್ಧ ಎಂದು ಹೇಳಿದ್ದ ಮುಖ್ಯಮಂತ್ರಿ ಈಗ ಯಾವ ತನಿಖೆಗೂ ಆದೇಶ ನೀಡುವುದಿಲ್ಲ ಎನ್ನುವ ಮೂಲಕ ಭಂಡತನ ಪ್ರದರ್ಶಿಸಿದ್ದಾರೆ. ಇಂತಹ ಭಂಡ, ಮೊಂಡ ಮುಖ್ಯಮಂತ್ರಿಯಿಂದ ರಾಜ್ಯಕ್ಕೆ ಉಳಿಗಾಲವಿಲ್ಲ’ ಎಂದು ಟೀಕಿಸಿದರು.

ವಿಧಾನ ಪರಿಷತ್ತು: ಬುಧವಾರ ಪರಿಷತ್ತಿನ ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗೆ ನುಗ್ಗಿದ ಪ್ರತಿಪಕ್ಷಗಳ ಸದಸ್ಯರು ‘ಪ್ರೇರಣಾ’ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪಟ್ಟು ಹಿಡಿದವು.

ಪ್ರಶ್ನೋತ್ತರ ನಡೆಸಲು ಪ್ರತಿಪಕ್ಷಗಳು ಅವಕಾಶ ನೀಡಬೇಕು ಎಂದು ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾಡಿಕೊಂಡ ಮನವಿ ವ್ಯರ್ಥವಾಯಿತು. ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು. ಆದರೂ ಧರಣಿ ಹಿಂತೆಗೆದುಕೊಳ್ಳಲು ಪ್ರತಿಪಕ್ಷಗಳು ಒಪ್ಪದ ಕಾರಣ ಸದನವನ್ನು ಗುರುವಾರಕ್ಕೆ ಮುಂದೂಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.