ಬೆಂಗಳೂರು: `ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಮಾಡಲು ಅವಕಾಶ ನೀಡಿ ಅಥವಾ ರಸ್ತೆ ನಿರ್ಮಿಸಿ ಎಂದು ಒತ್ತಾಯಿಸಿ ಜ. 9ರಂದು ಬಿಡಿಎ ಕಚೇರಿ ಎದುರು ರೈತರು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ~ ಎಂದು ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ತುಮಕೂರು ರಸ್ತೆಯಿಂದ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಸರ್ಕಾರ 1995ರಲ್ಲಿ ರೈತರ ಜಮೀನನ್ನು ಅಧಿಸೂಚನೆಯ ಮೂಲಕ ವಶಪಡಿಸಿಕೊಂಡಿತ್ತು. ಆದರೆ, ಇದುವರೆಗೂ ರಸ್ತೆ ನಿರ್ಮಾಣ ಕಾರ್ಯವೂ ನಡೆದಿಲ್ಲ ಹಾಗೂ ರೈತರಿಗೆ ಪರಿಹಾರವೂ ಸಿಕ್ಕಿಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ರೈತರು ಅಭಿವೃದ್ಧಿಯ ವಿರೋಧಿಗಳಲ್ಲ. ಅವರಿಗೂ ಕುಟುಂಬವಿದೆ ಅದನ್ನು ಸಾಕುವ ಹೊಣೆಗಾರಿಕೆ ಅವರ ಮೇಲಿದೆ. ಅವರಿಗೆ ಸಿಗಬೇಕಾದ ಹಕ್ಕನ್ನು ಅವರಿಗೆ ನೀಡಿದರೆ ಅವರು ಎಲ್ಲರಂತೆ ಬದುಕುವುದು ಸಾಧ್ಯವಾಗುತ್ತದೆ~ ಎಂದರು.

`ಬಿಡಿಎ ಕಚೇರಿಯನ್ನು ಸಂಪರ್ಕಿಸಿದರೆ, ಏಳೂವರೆ ವರ್ಷದಿಂದ ಬರೀ ಸಬೂಬು ಹೇಳುತ್ತಾರೆ ಹೊರತು ಏನೂ ಪರಿಹಾರ ದೊರೆತಿಲ್ಲ. ದೇಶದ ಬೆನ್ನೆಲುಬು ರೈತ ಎಂದು ಹೇಳುತ್ತಾರೆ. ಆದರೆ, ಅದೇ ರೈತ ಇಂದು ವಿಷ ಕುಡಿಯುತ್ತಿದ್ದಾನೆ. ಅವನನ್ನು ವಿಚಾರಿಸುವವರು ಯಾರೂ ಇಲ್ಲ~ ಎಂದರು.

`ಸಬೂಬು ಹೇಳುವುದನ್ನು ಬಿಟ್ಟು ಶೀಘ್ರವಾಗಿ ರಸ್ತೆ ನಿರ್ಮಾಣ ಮಾಡಬೇಕು ಇಲ್ಲವಾದರೆ, ರೈತರ ಭೂಮಿಯನ್ನು ರೈತರಿಗೆ ವಾಪಸ್ಸು ನೀಡಬೇಕು~ ಎಂದು ಒತ್ತಾಯಿಸಿದರು. ವಕೀಲ ಸಿ.ಎಸ್.ದ್ವಾರಕನಾಥ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.