ಕಾರವಾರ: ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಪ್ರತಿಯೊಂದು ಹೆಜ್ಜೆಯನ್ನು ಎಚ್ಚರಿಕೆಯಿಂದಲೇ ಇಡಬೇಕು. ಇಲ್ಲದಿದ್ದರೆ ಬಂಡೆಯಿಂದ ಉರುಳಿ ಬೀಳುವ ಸ್ಥಿತಿ. ಇಂತಹ ಭಯಾನಕ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾಗಿದೆ.

ಅಂಕೋಲಾ ಪಟ್ಟಣದಿಂದ ಕೇವಲ ಎಂಟು ಕಿಲೋ ಮೀಟರ್ ದೂರದಲ್ಲಿರುವ ಬಿಳೇಹೊಯ್ಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗಬೇಕು ಎಂದರೆ ವಿದ್ಯಾರ್ಥಿಗಳು ಹರಸಾಹಸ ಪಡಬೇಕು.

ಬಿಳೇಹೊಯ್ಗಿ ಶಾಲೆಗೆ ಉತ್ತಮ ಕಟ್ಟಡವಿದೆ. ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಚೆನ್ನಾಗಿದೆ. ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಆದರೆ, ಶಾಲೆಗೆ ಹೋಗುವ ದಾರಿ ಮಾತ್ರ ಭಯಾನಕವಾಗಿದೆ. ದಾರಿಯಲ್ಲಿ ದೊಡ್ಡ ಬಂಡೆಯೊಂದಿದ್ದು ಅದನ್ನು ದಾಟಿಯೇ ವಿದ್ಯಾಥಿಗಳು ಶಾಲೆಗೆ ಹೋಗಬೇಕು. ಇದು ಎಷ್ಟು ಅಪಾಯಕಾರಿಯಾಗಿದೆ ಎಂದರೆ ಸ್ವಲ್ಪ ಯಾಮಾರಿದರೂ ವಿದ್ಯಾರ್ಥಿಗಳು ಬಂಡೆಯಿಂದ ಉರುಳಿ ಬೀಳುತ್ತಾರೆ.
ಮಳೆಗಾಲದಲ್ಲಂತೂ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿರುತ್ತದೆ. ಸತತವಾಗಿ ಮಳೆ ಬೀಳುವುದರಿಂದ ಬಂಡೆಯ ಮೇಲೆ ಪಾಚಿ ಬೆಳೆದಿರುತ್ತದೆ. ಇಂಥ ಸಂದರ್ಭದಲ್ಲಿ ಜಾರಿ ಬೀಳುವ ಸಂಭವ ಹೆಚ್ಚು. ಇಷ್ಟೆಲ್ಲ ಅಪಾಯಗಳ ಮಧ್ಯೆಯೂ ವಿದ್ಯಾರ್ಥಿಗಳು ಶಾಲೆಗೆ ಹೋಗುವುದು ಅನಿವಾರ್ಯ.

ವಿದ್ಯಾರ್ಥಿಗಳು ಬಿದ್ದು ಗಾಯ ಮಾಡಿಕೊಂಡಿರುವ ಘಟನೆಗಳು ಸಾಕಷ್ಟಿವೆ. ಅದೃಷ್ಟವಶಾತ್ ಗಂಭೀರ ಪ್ರಕರಣಗಳು ನಡೆದಿಲ್ಲ. ಆಶ್ಚರ್ಯದ ಸಂಗತಿ ಎಂದರೆ ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳೂ ಬಂಡೆಯಿಂದ ಬಿದ್ದು ಗಾಯ ಮಾಡಿಕೊಂಡಿದ್ದಾರೆ.

ಇಂತಹ ಘಟನೆಗಳು ಪದೇಪದೇ ಸಂಭವಿಸುತ್ತಿದ್ದರೂ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸರಿಯಾದ ದಾರಿ ನಿರ್ಮಿಸಲು ಶಿಕ್ಷಣ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ. ಶಾಲೆಗೆ ಹೋಗುವ ದಾರಿ ನಿರ್ಮಿಸಿಕೊಡುವುದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅನೇಕ ಸಲ ಮನವಿ ನೀಡಿದ್ದಾರೆ. ಗ್ರಾಮಸ್ಥರ ಪ್ರಯತ್ನ ಬೊರಗಲ್ಲ ಮೇಲೆ ನೀರು ಸುರಿದಂತಾಗಿದೆ.

`ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಅನುಕೂಲವಾಗುವಂತೆ ದಾರಿ ಮಾಡಿಕೊಡಿ ಎಂದು ಸಾಕಷ್ಟು ಬಾರಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದೇವೆ ಆದರೆ, ಇಲ್ಲಿಯವರೆಗೆ ದಾರಿ ನಿರ್ಮಾಣ ಮಾಡಿಲ್ಲ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ನಾವೇ ಅಲ್ಲಲ್ಲಿ ದಾರಿ ಮಾಡಿದ್ದೇವೆ~ ಎನ್ನುತ್ತಾರೆ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.