ಶನಿವಾರ, ಮೇ 15, 2021
24 °C

ಬಿಸಿಯೂಟ ಕೊಠಡಿಗೆ ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ: ವೀರಪುಲಿಕೇಶಿ ವಿದ್ಯಾ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಿಸಿಯೂಟದ ನೂತನ ಅಡುಗೆ ಕೊಠಡಿ ನಿರ್ಮಾಣಕ್ಕೆ ವಿದ್ಯಾ ಸಂಸ್ಥೆಯ ಕಾರ್ಯಾಧ್ಯಕ್ಷ ಎ.ಸಿ. ಪಟ್ಟಣದ ಗುರುವಾರ ಭೂಮಿ ಪೂಜೆ ನೆರವೇರಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದ ಅಕ್ಷರ ದಾಸೋಹ ಯೋಜನೆಯಡಿ ರೂ19.86ಲಕ್ಷ ವೆಚ್ಚದಲ್ಲಿ ಒಂದು ಪ್ರಾಥಮಿಕ ಮತ್ತು ಎರಡು ಪ್ರೌಢ ಶಾಲೆಗಳ ಅಡುಗೆ ಕೊಠಡಿ ನಿರ್ಮಾಣವಾಗಲಿವೆ ಎಂದರು.ಎಸ್‌ಬಿಸಿ ಬಾಲಕಿಯರ ಪ್ರೌಢ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಶಾರದಾ ಮೇಟಿ, ಜಿಎಂಕೆ ಪ್ರೌಢ ಶಾಲೆಯ ಉಪಪ್ರಾಚಾರ್ಯ ಎಆರ್‌ದಾಸರ, ಎಸ್‌ಬಿಸಿ ಬಾಲಕಿಯರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಸ್. ಎಂ. ಹಿರೇಮಠ, ಎಸ್. ಎನ್.  ಹೊಸಕೇರಿ, ಎಸ್.ಎಸ್. ಕಿತ್ತಲಿ, ಪಿ.ಎಸ್. ಚಿನಿವಾರ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.