ಭಾನುವಾರ, ಜೂನ್ 20, 2021
22 °C

ಬೆಂಗಳೂರು ಅಭಿವೃದ್ಧಿಗೆ ವಿಷನ್‌ ಗ್ರೂಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಮಹಾ­ನಗರದ ಅಭಿವೃದ್ಧಿಗೆ ಸಾರಿಗೆ ಸಚಿವ ರಾಮ­ಲಿಂಗಾ ರೆಡ್ಡಿ ಅವರ ಅಧ್ಯ­ಕ್ಷತೆಯಲ್ಲಿ ವಿಷನ್‌ ಗ್ರೂಪ್‌ ರಚಿಸಿ ನಗರಾ­ಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.ಸಚಿವರಾದ ಆರ್‌. ರೋಷನ್‌ ಬೇಗ್‌, ಕೃಷ್ಣ ಬೈರೇಗೌಡ, ದಿನೇಶ್‌ ಗುಂಡೂ­ರಾವ್‌ ವಿಷನ್‌ಗ್ರೂಪ್‌ಗೆ ಉಪಾ­ಧ್ಯಕ್ಷರಾಗಿದ್ದು,  ಜನಾಗ್ರಹ ಸಂಸ್ಥೆಯ ರಮೇಶ್‌ ರಮಾನಾಥನ್‌ ಅವ­ರನ್ನು ಕಾರ್ಯನಿರ್ವಾಹಕ ಅಧ್ಯಕ್ಷ­ರನ್ನಾಗಿ ನೇಮಿಸಲಾಗಿದೆ.ಬಾಷ್‌ ಸಂಸ್ಥೆಯ ಮಾಜಿ ಉದ್ಯೋಗಿ ಲಕ್ಷ್ಮೀ ನಾರಾಯಣ್‌, ಸಾಮಾಜಿಕ ಕಾರ್ಯ­ಕರ್ತೆ ರುತ್‌ ಮನೋರಮಾ, ಡಾ. ನರೇಂದ್ರ ಪಾಣಿ ಮತ್ತು ಮೈಕ್ರೋ­ಲ್ಯಾಂಡ್‌ನ ಕಲ್ಪನಾ ಕರ್‌ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.ಮಹಾನಗರವನ್ನು ಸಮಗ್ರವಾಗಿ ಅಭಿ­ವೃ­ದ್ಧಿಪಡಿಸುವ ದೃಷ್ಟಿಯಿಂದ ವಿಷನ್‌ ಗ್ರೂಪ್‌ ರಚಿಸಲಾಗಿದೆ ಎಂದು ನಗರಾ­ಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎನ್‌. ಗೋಪಾಲಯ್ಯ ಅವರು ಹೊರಡಿ­ಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.