ಸೋಮವಾರ, ಜನವರಿ 27, 2020
16 °C

ಬೆಂಗಳೂರು ಹಬ್ಬದಲ್ಲಿ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಗೀತ ಸಂಭ್ರಮ, ಪಂಡಿತ್ ಭೀಮಸೇನ ಜೋಶಿ ವೇದಿಕೆ: `ವಚನ ಗಾಯನ~ ಕಾರ್ಯಕ್ರಮವನ್ನು ಮಾಲಾಶ್ರೀ ಕಣವಿ ಮತ್ತು ಕುಮಾರ ಕಣವಿ ಅವರು ಸಂಜೆ 6.30ಕ್ಕೆ ನಡೆಸಿಕೊಡಲಿದ್ದಾರೆ. ನಂತರ 7.30ಕ್ಕೆ ಜನಪದ ಮತ್ತು ಯುವಜನತೆ ಕಾರ್ಯಕ್ರಮವನ್ನು ಮೈಸೂರಿನ ಚಿಂತನ್ ವಿಕಾಸ್ ಮತ್ತು ತಂಡದವರು ನಡೆಸಿಕೊಡಲಿದ್ದಾರೆ. ಸ್ಥಳ: ಕರ್ನಾಟಕ ಚಿತ್ರಕಲಾಪರಿಷತ್ತು.ಕರ್ನಾಟಕ ಕಲಾ ಸಂಭ್ರಮ: ರಂಗಗೀತೆ ಕಾರ್ಯಕ್ರಮವನ್ನು ರಂಗ ಗಾಯಕರಾದ ಆರ್.ಪರಮಶಿವನ್, ನಾಗರಾಜಚಾರ್, ಲಕ್ಷ್ಮಣ್ ದಾಸ್ (ತುಮಕೂರು), ಪ್ರತಿಭಾ, ಭಾಗ್ಯಶ್ರೀ, ಶೀಲಾ ನಾಯ್ಡು, ರಮಾ ಬಾಯಿ, ರವೀಂದ್ರ ಸೊರಗಾವಿ, ಸಿದ್ಧರಾಮ ಕೊಸಪುರ ಮತ್ತು ಸಂಗೀತ ಕಾಖಂಡಕಿ ನಡೆಸಿಕೊಡಲಿದ್ದಾರೆ. ಕೊಲ್ಲೂರು ಶ್ರೀನಿವಾಸ್ ಅವರಿಂದ ಹಾರ್ಮೋನಿಯಂ, ಶೊಕೇಶ್ ಕುಮಾರ್ ಸ್ಯಾಕ್ಸಫೋನ್, ನರಸಿಂಹಯ್ಯ ಕ್ಯಾಸಿಯೊ, ರಾಮಕೃಷ್ಣ ತಬಲ ಮತ್ತು ಸಹಾಯಕರಾಗಿ ಮಲ್ಲಿಕಾರ್ಜುನ್ ಮಹಾಮನೆ ಭಾಗವಹಿಸಲಿದ್ದಾರೆ. ಸ್ಥಳ: ಸಂಸ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6.30.ರಂಗ ಸಂಭ್ರಮ: ಕಂಬಾರ ನಾಟಕೋತ್ಸವದಲ್ಲಿ ಸಮಷ್ಠಿ ತಂಡದವರಿಂದ `ನಾಯಿಕತೆ~ ನಾಟಕ ಪ್ರದರ್ಶನ. ನಿರ್ದೇಶನ-ರವೀಂದ್ರ ಪೂಜಾರಿ, ಸ್ಥಳ: ಸೇವಾಸದನ, 14ನೇ ಕ್ರಾಸ್, ಮಲ್ಲೇಶ್ವರಂ. ಸಂಜೆ 6.30.ಇಂಡಿಯನ್ ಆರ್ಟ್ ಟ್ರಯಲ್: `ಸಬ್‌ಲೈಮ್ ಗ್ಯಾಲರಿಯಾ~ ಸ್ಥಳ: ತಾಜ್ ವೆಸ್ಟ್ ಅಂಡ್ ಆರ್ಟ್ ಕಾರಿಡಾರ್. ಮಧ್ಯಾಹ್ನ 11.ನೃತ್ಯ ಸಂಭ್ರಮ: ಸಂಜೆ 6.15ಕ್ಕೆ ಮಂಜುಳ ಮತ್ತು ತಂಡದವರಿಂದ ಮೋಹಿನಿಯಾಟ್ಟಂ ನೃತ್ಯ. ಹಾಗೂ ಪ್ರವೀಣ್ ಕುಮಾರ್ ಅವರಿಂದ ಸಂಜೆ 7.30ಕ್ಕೆ ಭರತನಾಟ್ಯ. ಸ್ಥಳ: ಭಾರತೀಯ ವಿದ್ಯಾ ಭವನ, ರೇಸ್ ಕೋರ್ಸ್ ರಸ್ತೆ.ರಾಷ್ಟ್ರೀಯ ನಾಟಕೋತ್ಸವ: ಸಂಜೆ 7ಕ್ಕೆ ಗಿರೀಶ್ ಕಾರ್ನಾಡ್ ಅವರ `ಹಯವದನ~, ನಿರ್ದೇಶನ- ಪುಶನ್ ಕೃಪಲಾನಿ, ಸ್ಥಳ: ಚೌಡಯ್ಯ ಸ್ಮಾರಕ ಭವನ, 16ನೇ ಅಡ್ಡ ರಸ್ತೆ, ಮಲ್ಲೇಶ್ವರಂ.

ಪ್ರತಿಕ್ರಿಯಿಸಿ (+)