ಅಕ್ಷರಶಃ ಅದೊಂದು ಕಲ್ಲು-ಮುಳ್ಳಿನ ಹೊಲ, ಆ ಭೂಮಿಯನ್ನು ಉತ್ತಿ-ಬಿತ್ತುವುದು ಸವಾಲಿನ ಕೆಲಸವೇ ಸರಿ. ಅದರಲ್ಲೂ ಮಳೆ ನಂಬಿ ಕೃಷಿ ಮಾಡುವುದು ಅಸಾಧ್ಯದ ಮಾತು. ಇಂತಹ ಬೆಟ್ಟದಲ್ಲೇ ಸಾಹಸಿಗ ಕೃಷಿಕರೊಬ್ಬರು ಆರೇಳು ವರ್ಷದಿಂದ ದ್ರಾಕ್ಷಿ ಕೃಷಿಯಲ್ಲಿ ತೊಡಗಿದ್ದು, ಉತ್ತಮ ಇಳುವರಿ ಪಡೆದುಕೊಳ್ಳುತ್ತಿದ್ದಾರೆ.

ಬಾಗಲಕೋಟೆ ನಗರದ ಹೊರವಲಯದ ಮುಚಖಂಡಿ ಕೆರೆ ಸಮೀಪ ಬೋಳು ಬೆಟ್ಟ-ಗುಡ್ಡದ ನಡುವೆ ಕೃಷಿಕ ಚಂದ್ರಕಾಂತ ಶಿವಲಿಂಗಪ್ಪ ಕೇಸನೂರ ಅವರು ದ್ರಾಕ್ಷಿಯನ್ನು ಸಮೃದ್ಧವಾಗಿ ಬೆಳೆದು ಇತರೆ ರೈತರಿಗೆ ಮಾದರಿ ಎನಿಸಿದ್ದಾರೆ.

ಬಾಗಲಕೋಟೆಯಿಂದ ಬಾದಾಮಿಗೆ ಹೋಗುವ ಮಾರ್ಗದಲ್ಲಿ ಸೀಮಿಕೇರಿ ಆರ್.ಸಿ. ನಂ1 ವ್ಯಾಪ್ತಿಯಲ್ಲಿರುವ ಈ ಹೊಲವನ್ನು ಒಮ್ಮೆ ನೋಡಿದರೆ ಕೃಷಿ ಮಾಡುವುದು ಅಸಾಧ್ಯದ ಮಾತಾಗುತ್ತದೆ. ಕಾರಣ ಹೊಲದ ತುಂಬ ಕಲ್ಲಿನ ರಾಶಿ ಬಿದ್ದಿದೆ. ಅಲ್ಲದೇ ಜಾಲಿ ಪೊದೆಗಳು ದಟ್ಟವಾಗಿ ಹಬ್ಬಿದೆ. ಇಂತಹ ಹೊಲವನ್ನು ಹಗಲಿರುಳು ಸ್ವಚ್ಛಗೊಳಿಸಿ, ಕೊಳವೆ ಬಾವಿ ತೆಗೆಸಿ ಕಳೆದ ಆರೇಳು ವರ್ಷದಿಂದ ಕೃಷಿ ಮಾಡುತ್ತಿದ್ದಾರೆ. ಇದರ ಫಲವಾಗಿ ಇದೀಗ ಹೊಲದ ತುಂಬ ದ್ರಾಕ್ಷಿ ಹಣ್ಣಿನ ರಾಶಿ ಕಂಡುಬರುತ್ತಿದೆ.

ಬಾಗಲಕೋಟೆ ಹಾಪ್ಕಾಮ್ಸ ಸದಸ್ಯ ರಾಗಿರುವ ಚಂದ್ರಕಾಂತ ಶಿವಲಿಂಗಪ್ಪ ಒಬ್ಬ ಪ್ರಗತಿಪರ ಕೃಷಿಕರಾಗಿದ್ದಾರೆ. ಮೂಲತ: ಸಾಳಗುಂದಿ ಗ್ರಾಮದವರು. ಆಲಮಟ್ಟಿ ಹಿನ್ನೀರಿನಲ್ಲಿ ಸಾಳಗುಂದಿ ಮುಳುಗಡೆಯಾದ ಬಳಿಕ ಬಂದ ಪರಿಹಾರದ ಹಣದಲ್ಲಿ ಸೀಮಿಕೇರಿ ಪುನರ್ವಸತಿ ಕೇಂದ್ರದ ಬಳಿ ಆರು ಎಕರೆ ಹೊಲವನ್ನು ಖರೀದಿಸಿ ಕೃಷಿಯಲ್ಲಿ ತೊಡಗಿದ್ದಾರೆ.

ದ್ರಾಕ್ಷಿ ಕೃಷಿ ಮಾಡಬೇಕೆಂಬ ತಮ್ಮ ತಂದೆ ಶಿವಲಿಂಗಪ್ಪನವರ ಆಶಯದಂತೆ ನಾಲ್ಕು ಎಕರೆ ಹೊಲದಲ್ಲಿ `ಥಾಮ್ಸನ್~ ದ್ರಾಕ್ಷಿಯನ್ನು ಬೆಳೆಸಿದ್ದಾರೆ. ಕಳೆದ ನಾಲ್ಕು ವರ್ಷದಿಂದ ದ್ರಾಕ್ಷಿ ಫಸಲು ಬರುತ್ತಿದ್ದು, ಗದಗ ಮಾರುಕಟ್ಟೆಗೆ ಹಣ್ಣು ಪೂರೈಕೆ ಮಾಡುತ್ತಿದ್ದಾರೆ.

ಇದೀಗ ಶಿವಲಿಂಗಪ್ಪ ಅವರು ತಮ್ಮ ಹೊಲದಲ್ಲಿ ಬೆಳೆದಿರುವ ದ್ರಾಕ್ಷಿ ಹಣ್ಣನ್ನು ಮಾರಾಟ ಮಾಡದೇ ತಮ್ಮ ಹೊಲದಲ್ಲೇ 120 ್ಡ 25 ಅಳತೆಯ 6 ಜಾಳಿಗೆ(ಖಾಣೆ) ಇರುವ ತತ್ಕಾಲಿಕ ಶೆಡ್ ನಿರ್ಮಾಣ ಮಾಡಿ ಒಣ ದ್ರಾಕ್ಷಿ(ಮಣುಕ)ಯನ್ನು ಸ್ವಂತ ತಯಾರಿಸುತ್ತಿದ್ದಾರೆ.

ಎಕರೆಗೆ ಸರಾಸರಿ 15 ಟನ್ ಹಸಿ ದ್ರಾಕ್ಷಿ ಹಣ್ಣು ಬೆಳೆಯುವ ಚಂದ್ರಕಾಂತ ಅವರು, ವಾರ್ಷಿಕ ಸುಮಾರು 14 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇದೀಗ ಒಣದ್ರಾಕ್ಷಿಯನ್ನು ತಯಾರಿಸುತ್ತಿರು ವುದರಿಂದ ಆದಾಯ ಎರಡರಷ್ಟು ಹೆಚ್ಚುವ ನಿರೀಕ್ಷೆಯಲ್ಲಿದ್ದಾರೆ.

ಮತ್ತೆ ಸಂತ್ರಸ್ಥರಾಗುವ ಆತಂಕ:
ಆಲಮಟ್ಟಿ ಆಣೆಕಟ್ಟೆ ನಿರ್ಮಾಣದಿಂದ ಒಮ್ಮೆ ಸಂತ್ರಸ್ಥರಾಗಿರುವ ಚಂದ್ರಕಾಂತ ಕುಟುಂಬ ಕಳೆದ ಆರೇಳು ವರ್ಷದಲ್ಲಿ ಕಷ್ಟಪಟ್ಟು ಜಮೀನು ಖರೀದಿಸಿ ದ್ರಾಕ್ಷಿ ಬೆಳೆದು ಹೊಸ ಬದುಕನ್ನು ಕಟ್ಟಿಕೊಂಡಿರುವಾಗಲೇ ಮತ್ತೆ ಸಂತ್ರಸ್ಥರಾಗುವ ಆತಂಕ ಎದುರಾಗಿದೆ.

ಕುಡುಚಿ-ಬಾಗಲಕೋಟೆ ನೂತನ ರೈಲು ಮಾರ್ಗ ಚಂದ್ರಕಾಂತ ಅವರ ದ್ರಾಕ್ಷಿ ತೋಟದ ನಡುವೆ ಹಾದುಹೋಗಲಿರುವುದರಿಂದ ಮತ್ತೆ ಸಂತ್ರಸ್ಥರಾಗಲಿದ್ದಾರೆ.

ಬರಡು ಭೂಮಿಗೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದು, ಇದೀಗ ಆದಾಯದ ನಿರೀಕ್ಷೆಯಲ್ಲಿರುವಾಗಲೇ ರೈಲು ಮಾರ್ಗ ತಂದಿರುವ ಆತಂಕ ಜೀವನದಲ್ಲಿ ಮುಂದೆದೂ ಕೃಷಿಯಲ್ಲಿ ತೊಡಗುವುದೇ ಬೇಡ ಎಂಬ ಪರಿಸ್ಥಿತಿ ನಿರ್ಮಿಸಿದೆ ಎನ್ನುತ್ತಾರೆ ಚಂದ್ರಕಾಂತ.

ಹತ್ತಾರು ಕೂಲಿ ಕಾರ್ಮಿಕರ ಕೈಗೆ ಕೆಲಸವನ್ನು ನೀಡಿ, ಲಕ್ಷಾಂತರ ರೂಪಾಯಿ ಆದಾಯ ತಂದುಕೊಡುವ ಭೂಮಿಯನ್ನು ಕಳೆದುಕೊಂಡು ಮತ್ತೆ ಸಂತ್ರಸ್ಥರಾಗಬೇಕಾದ ಸ್ಥಿತಿ ಎದುರಿಸುವುದು ಕಷ್ಟಕರವಾಗಿದೆ, ಸರ್ಕಾರ ನೀಡುವ ಪರಿಹಾರ ಕೇವಲ ಸಮಾದಾನಕ್ಕೆ ಮಾತ್ರ ಆದರೆ ಬದುಕು ಕಟ್ಟಿಕೊಳ್ಳುವುದು ಅಸಾಧ್ಯ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.