ಬೆಳಗಾವಿ: ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್ಟಿಇ) ಪ್ರವೇಶ ಪಡೆಯಲು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ಆರ್ಟಿಇ ಅಡಿ ಲಭ್ಯ ಇರುವ 7,091 ಸೀಟುಗಳ ಪ್ರವೇಶಕ್ಕಾಗಿ 9,646 ಅರ್ಜಿಗಳು ಸಲ್ಲಿಕೆಯಾಗಿವೆ. ಮಾ. 3ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ಬಹುತೇಕ ಎಲ್ಲ ಸೀಟುಗಳು ಭರ್ತಿಯಾಗುವ ನಿರೀಕ್ಷೆಯಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಆರ್ಟಿಇ ಅಡಿ ಎಲ್ಕೆಜಿಗೆ 1,942, 1ನೇ ತರಗತಿಗೆ 761 ಸೇರಿದಂತೆ 2,703 ಸೀಟುಗಳು ಲಭ್ಯ ಇದ್ದು, ಎಲ್ಕೆಜಿಗೆ 2,479 ಹಾಗೂ 1ನೇ ತರಗತಿಗೆ 1,329 ಸೇರಿದಂತೆ 3,808 ಅರ್ಜಿಗಳು ಸಲ್ಲಿಕೆಯಾಗಿವೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಆರ್ಟಿಇ ಅಡಿ ಎಲ್ಕೆಜಿಗೆ 1,270, 1ನೇ ತರಗತಿಗೆ 2,529 ಸೇರಿದಂತೆ 4,388 ಸೀಟುಗಳು ಲಭ್ಯ ಇದ್ದು, ಕ್ರಮವಾಗಿ 2,529 ಹಾಗೂ 3,309 ಸೇರಿದಂತೆ 5,838 ಅರ್ಜಿಗಳು ಸಲ್ಲಿಕೆಯಾಗಿವೆ.

ರಾಯಬಾಗದಲ್ಲಿ ನೀರಸ ಪ್ರತಿಕ್ರಿಯೆ: ಆರ್ಟಿಇ ಅಡಿ ಪ್ರವೇಶ ಪಡೆಯಲು ಅತಿ ಹೆಚ್ಚು ಅರ್ಜಿ ಸಲ್ಲಿಕೆಯಾದ ಪಟ್ಟಿಯಲ್ಲಿ ಗೋಕಾಕ ವಲಯ ಮುಂಚೂಣಿಯಲ್ಲಿದ್ದರೆ, ರಾಯಬಾಗ ವಲಯ ಕೊನೆಯ ಸ್ಥಾನದಲ್ಲಿದೆ. ರಾಯಬಾಗ ಹೊರತುಪಡಿಸಿ ಜಿಲ್ಲೆಯ ಎಲ್ಲ ವಲಯಗಳಲ್ಲೂ ಲಭ್ಯ ಇರುವ ಸೀಟುಗಳಿಗಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ರಾಯಬಾಗದಲ್ಲಿ 1ನೇ ತರಗತಿಗೆ 984 ಸೀಟುಗಳು ಲಭ್ಯ ಇದ್ದು, ಕೇವಲ 672 ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಕೆಜಿ ವಿಭಾಗದಲ್ಲಿ ರಾಯಬಾಗ ಶೂನ್ಯ ಸಾಧನೆ ಮಾಡಿದೆ.

ಕಟ್ಟುನಿಟ್ಟಿನ ಆದೇಶ: ಆರ್ಟಿಇ ಅಡಿ ಮೀಸಲಿರುವ ಶೇ. 25ರಷ್ಟು ಸೀಟುಗಳನ್ನು ಖಾಸಗಿ ಶಾಲೆಗಳು ಕಡ್ಡಾಯವಾಗಿ ಭರ್ತಿ ಮಾಡಲೇಬೇಕು. ಶೇ. 25ರಷ್ಟು ಸೀಟುಗಳ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಕೆಯಾಗದಿದ್ದರೆ, ಸುತ್ತಲಿನ ಕೊಳಚೆ ಪ್ರದೇಶ, ವಲಸೆ ಹಾಗೂ ಭಿಕ್ಷುಕರ ಮಕ್ಕಳ ಪಾಲಕರನ್ನು ಸಂಪರ್ಕಿಸಿ ಆ ಮಕ್ಕಳನ್ನು ಶಾಲೆಗೆ ಕರೆ ತರಲು ಶ್ರಮಿಸಬೇಕು. ಇಲ್ಲದಿದ್ದರೆ ಅಂತಹ ಶಾಲೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಖಾಸಗಿ ಶಾಲೆಗಳ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಲಾಟರಿ ಮೂಲಕ ಆಯ್ಕೆ: ‘ಜಿಲ್ಲೆಯಲ್ಲಿ ರಾಯಬಾಗ ಹೊರತುಪಡಿಸಿ ಎಲ್ಲ ವಲಯಗಳಲ್ಲೂ ಆರ್ಟಿಇ ಅಡಿ ಲಭ್ಯ ಇರುವ ಸೀಟುಗಳಿಗಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಹೀಗಾಗಿ ಲಭ್ಯ ಇರುವ ಸೀಟುಗಳಿಗಿಂತ ಹೆಚ್ಚು ಅರ್ಜಿ ಸಲ್ಲಿಕೆಯಾದ ವಲಯಗಳಲ್ಲಿ ಲಾಟರಿ ಮೂಲಕ ಸೀಟು ಹಂಚಿಕೆ ಮಾಡಲು ಇಲಾಖೆಯು ತೀರ್ಮಾನಿಸಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ದಿವಾಕರ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆರ್ಟಿಇ ಅಡಿ ಪ್ರವೇಶ ಬಯಸಿ ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬಂದಿದೆ. ಹೀಗಾಗಿ ಬಹುತೇಕ ಎಲ್ಲ ಸೀಟುಗಳ ಭರ್ತಿಯಾಗುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಈಗಿನಿಂದಲೇ ಕಾರ್ಯೋನ್ಮುಖವಾಗಬೇಕು. ಆರ್ಟಿಇ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಇಲಾಖೆಯೊಂದಿಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು’ ಎಂದು ಅವರು ಕೋರಿದ್ದಾರೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆ
ವಲಯ (ಪೂರ್ವ ಪ್ರಾಥಮಿಕ) (1ನೇ ತರಗತಿ)

ಲಭ್ಯ ಸೀಟು ಸಲ್ಲಿಕೆಯಾದ ಅರ್ಜಿ ಲಭ್ಯ ಸೀಟು ಸಲ್ಲಿಕೆಯಾದ ಅರ್ಜಿ
ಬೆಳಗಾವಿ (ನ) 911 932 90 180
ಬೆಳಗಾವಿ (ಗ್ರಾ) 139 206 191 227
ಬೈಲಹೊಂಗಲ 400 574 109 295
ಖಾನಾಪುರ 53 97 175 191
ರಾಮದುರ್ಗ 184 305 164 228
ಸವದತ್ತಿ 255 365 122 208
ಒಟ್ಟು 1,942 2,479 761 1,329

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ

ಅಥಣಿ 289 309 295 313
ಕಾಗವಾಡ 000 316 190 257
ಚಿಕ್ಕೋಡಿ 41 54 329 550
ನಿಪ್ಪಾಣಿ 31 31 365 512
ಗೋಕಾಕ 596 1,486 50 89
ಮೂಡಲಗಿ 20 20 763 763
ಹುಕ್ಕೇರಿ 293 313 142 153
ರಾಯಬಾಗ 0 0 984 672
ಒಟ್ಟು 1,270 2,529 3,118 3 ,309

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.