ರಾಮೋತ್ಸವದ ನಾದಗಾಳಿ ರಾಜಧಾನಿಯನ್ನೆಲ್ಲಾ ಪಸರಿಸಿದೆ. ರಾಮೋತ್ಸವದ ಎರಡನೆಯ ವಾರವೂ ಸಂಗೀತ ಕಾರ್ಯಕ್ರಮಗಳು ಎಲ್ಲೆಡೆ ಮುಂದುವರಿಯುತ್ತಿವೆ.
ಚಾಮರಾಜಪೇಟೆಯ ರಾಮ ಸೇವಾ ಮಂಡಳಿಯ್ಲ್ಲಲೇ ಹಾಡಿದ ಪದ್ಮಶ್ರೀ ಸುಧಾ ರಘುನಾಥನ್ ಅವರಿಗೆ ಸೇರಿದ್ದ ಅಭಿಮಾನಿಗಳ ಸಂಖ್ಯೆಯೇ ಅವರ ಜನಪ್ರಿಯತೆಯನ್ನು ಸಾರುತ್ತಿತ್ತು.

ಸರ್ವ ಜನಪ್ರಿಯವಾದ `ಎಂದರೊ ಮಹಾನುಭಾವುಲು~ ಕೀರ್ತನೆಯನ್ನು ಕಛೇರಿಯ ಪೂರ್ವಾರ್ಧದಲ್ಲಿ ಹಾಡಿದಾಗ ಕೇಳುಗರ ಸಂತೋಷಕ್ಕೆ ಪಾರವೇ ಇರಲಿಲ್ಲ. ಭಾವಪೂರ್ಣವಾದ ಕೃತಿ `ಜನನೀ ನಿನುವಿನಾ~ ಲಾಲಿತ್ಯಪೂರ್ಣವಾಗಿ ಮೂಡಿತು.

ಸಂಗೀತ, ನೃತ್ಯಗಳೆರಡರಲ್ಲೂ ಪ್ರಸಿದ್ಧವಾಗಿದ್ದ ಕನ್ನಡ ದೇವರನಾಮ `ಮೆಲ್ಲ ಮೆಲ್ಲನೆ ಬಂದನೆ~ ಇನಿದನಿಯಲ್ಲಿ ಹಾಡಿ, ಇನ್ನೊಂದು ಸುಪರಿಚಿತ ಕೀರ್ತನೆ `ನಗುಮೋಮು~ ಹಸನಾಗಿ ನಿರೂಪಿಸಿದರು. ಬಹಳ ದಶಕಗಳಿಂದ ವಿಸ್ತಾರಕ್ಕೆ `ಏತವುನರಾ ನಿಲಕಡನೀಕು~ ಆರಿಸುವುದು ವಾಡಿಕೆ.

`ಶ್ರೀರಾಮಾ! ನಿನ್ನ ಆವಾಸ ಸ್ಥಾನ ಯಾವುದು? ಎಷ್ಟು ಹುಡುಕಿದರೂ ನೀನು ಸುಲಭವಾಗಿ ದೊರಕುವುದಿಲ್ಲ~ ಎಂದು ಬೇಡುವ ತ್ಯಾಗರಾಜರು ಈ ಕೃತಿಯಲ್ಲಿ ಭಗವಸ್ವರೂಪ ಮತ್ತು ತತ್ವವನ್ನು ಕುರಿತು ಹಾಡಿದ್ದಾರೆ. ಸುಧಾ ಅವರು ಕಲ್ಯಾಣಿ ರಾಗದಲ್ಲಿ ಘನವಾಗಿ ಆಲಾಪನೆ ಮಾಡಿ, ಕೃತಿಗೆ ಸುಭದ್ರ ಅಡಿಪಾಯ ಹಾಕಿದರು. ಪಿಟೀಲಿನಲ್ಲಿ ಎಂ.ಆರ್. ಗೋಪಿನಾಥ್, ಮೃದಂಗದಲ್ಲಿ ನೈವೇಲಿ ಸ್ಕಂದ ಸುಬ್ರಹ್ಮಣ್ಯ ಹಾಗೂ ಮೋರ್ಚಿಂಗ್ನಲ್ಲಿ ರಾಮನ್ ಉತ್ತಮ ನೆರವಿತ್ತರು.

ಪ್ರೌಢ ಗಾಯನ
ಬಸವೇಶ್ವರ ನಗರದ ವಾಣಿ ವಿದ್ಯಾ ಕೇಂದ್ರದ ರಾಮೋತ್ಸವದಲ್ಲಿ ಹಾಡಿದ ಎಂ.ಎಸ್. ಶೀಲಾ ಅವರು ರಾಜ್ಯದ ಪ್ರತಿಷ್ಠಿತ ಗಾಯಕಿ. ಸಹಜವಾಗೇ ಸಹೃದಯರ ದೊಡ್ಡ ವರ್ಗವನ್ನೇ ಆಕರ್ಷಿಸಿದರು. `ವನಜಾಕ್ಷ~ ವರ್ಣವನ್ನು ಬಿಗಿ ಹಂದರದಲ್ಲಿ ಹಾಡಿ ಕಾರ್ಯಕ್ರಮಕ್ಕೆ ದಕ್ಷ ಚಾಲನೆ ನೀಡಿದರು.

ಮುಂದೆ ಹಾಡಿದ ಮೂರು ರಚನೆಗಳೂ ಒಂದು ಕಾಲದಲ್ಲಿ ಹೆಚ್ಚು ಬಳಕೆಯಲ್ಲಿದ್ದ ಭಾವಪೂರ್ಣ ಕೃತಿಗಳು. ಸ್ವಾಮಿನಾಥ ಪರಿಪಾಲಯ, ಸೊಗಸು ಜೂಡ ತರಮ ಹಾಗೂ `ಸಾರಸಾಕ್ಷ ಪರಿಪಾಲಯಮಾಂ~ ಎಲ್ಲವೂ ಹಿತವಾಗಿ ಮೂಡಿದವು. ಇನ್ನೊಂದು ಆಹ್ಲಾದಕರ ಕೃತಿ `ರಾಗಸುಧಾರಸ~ ಹಾಡಿ ಪರಿಪಾಹಿಮಾಂ ಶ್ರೀದಾಶರಥೆ ನಿರೂಪಿಸಿದರು.

ತ್ಯಾಗರಾಜರ ಅನುಪಮ ಕೃತಿಗಳಲ್ಲಿ ಒಂದಾದ `ನನುಪಾಲಿಂಪ ನಡಚಿ ವಚ್ಚಿತಿವೋ~ ಕೀರ್ತನೆಯನ್ನು ಪ್ರಧಾನವಾಗ ಆಯ್ದರು. ತ್ಯಾಗರಾಜರ ಕುಮಾರಿಯ ವಿವಾಹ ಸಂದರ್ಭದಲ್ಲಿ ಕೋದಂಡರಾಮನ ಸುಂದರವಾದ ಚಿತ್ರವನ್ನು ಅವರ ಶಿಷ್ಯರಾದ ವಾಲಾಜಪೇಟೆ ವೆಂಕಟರಮಣ ಭಾಗವತರು ಉಡುಗೊರೆಯಾಗಿ ನೀಡಿದರು.

ಆ ಚಿತ್ರವನ್ನು ನೋಡಿದ ಕೂಡಲೇ ತ್ಯಾಗರಾಜರು ಆನಂದದಿಂದ ಭಾವಪರವಶರಾಗಿ ಈ ಕೃತಿಯನ್ನು ಹಾಡಿದರು ಎಂಬ ಪ್ರತೀತಿ. ಜೊತೆಗೆ ಮೋಹನ ರಾಗದ ಅತ್ಯುತ್ತಮ ಕೃತಿಗಳಲ್ಲಿ ಇದೂ ಒಂದು! ಹೀಗಾಗಿ ಈ ಕೀರ್ತನೆ ಕಲಾವಿದರು-ಕೇಳುಗರು ಇಬ್ಬರಿಗೂ ಪ್ರಿಯವಾದುದು.

ಶೀಲಾರವರು ಭಾವಪೂರ್ಣವಾಗಿ ರಾಗಾಲಾಪನೆ ಮಾಡಿ, ಆಕರ್ಷಕ ಸ್ವರಪ್ರಸ್ತಾರ ಮಾಡಿದರು. ಅದರಲ್ಲೂ ಗಾಂಧಾರದ ಸುತ್ತ ಹಾಕಿದ ಸ್ವರ ಪುಂಜಗಳು ಗಾಢ ಪರಿಣಾಮ ಬೀರಿದವು. ಲಯ ವಾದ್ಯಗಳ (ತುಮಕೂರು ಬಿ. ರವಿಶಂಕರ್ ಮತ್ತು ಎ.ಎಸ್.ಎನ್. ಸ್ವಾಮಿ) ತನಿಯ ನಂತರ ಉಗಾಭೋಗದ (ದೀನ ನಾನು) ಹಿನ್ನೆಲೆಯೊಂದಿಗೆ ಕನಕದಾಸರ `ತೊರೆದು ಜೀವಿಸಬಹುದೆ ಹರಿ ನಿನ್ನ ಚರಣವನು~ ಒಳ್ಳೆಯ ಪರಿಣಾಮ ಬೀರಿತು. ಹಾಗೆಯೇ `ರಾಮಗೋವಿಂದ, ರಂಗ ಬಾರೊ ಪಾಂಡುರಂಗ ಬಾರೊ~ ಕೇಳುಗರಿಗೆ ಮೆಚ್ಚುಗೆಯಾದವು.

ಭರವಸೆಯ ಗಾಯಕಿ
ಇಂದಿನ ಯುವ ಗಾಯಕಿಯರಲ್ಲಿ ಪ್ರತಿಭಾನ್ವಿತೆ ಹಾಗೂ ತುಂಬು ಭರವಸೆ ಮೂಡಿಸಿರುವವರಲ್ಲಿ ಮಾನಸೀ ಪ್ರಸಾದ್ ಸಹ ಒಬ್ಬರು. ನೃತ್ಯ, ಗಾಯನ, ಅಭಿನಯ, ನಿರೂಪಣೆ, ಅವಧಾನ - ಹೀಗೆ ಬಹು ಮಾಧ್ಯಮಗಳ ಅಭಿವ್ಯಕ್ತಿಯಿಂದ ಗಮನ ಸೆಳೆದಿರುವ ಮಾನಸೀ ಸಂಗೀತ ಕ್ಷೇತ್ರದಲ್ಲೂ ದಾಪುಗಾಲು ಹಾಕುತ್ತಿದ್ದಾರೆ.

ಶೇಷಾದ್ರಿಪುರಂ ರಾಮ ಸೇವಾ ಸಮಿತಿಯಲ್ಲಿ ಮಾನಸೀ ಪ್ರಸಾದ್ ಅವರ ಗಾಯನಕ್ಕೆ ಬಿ.ಯು. ಗಣೇಶ ಪ್ರಸಾದ್, ತುಮಕೂರು ಬಿ. ರವಿಶಂಕರ್ ಹಾಗೂ ಸುಕನ್ಯಾ ರಾಂಗೋಪಾಲ್ ಚೇತೋಹಾರಿಯಾಗಿ ಪಕ್ಕವಾದ್ಯ ನುಡಿಸಿದರು.

ಕಾರ್ಯಕ್ರಮದ ಪೂರ್ವಾರ್ಧದಲ್ಲಿ ರಸವತ್ತಾದ ರಾಗ-ಕೃತಿಗಳನ್ನು ನಿರೂಪಿಸುತ್ತಾ ಕಾವು ಭರಿಸಿದರು. ಉದಾಹರಣೆಗೆ `ನೀದಯರಾದ~ ಕೃತಿಯನ್ನೇ ಪರಿಶೀಲಿಸಬಹುದು. ತಳಮಳಗೊಂಡ ತ್ಯಾಗರಾಜರ ಮನಸ್ಸು ಆರ್ತಭಾವದಿಂದ ರಾಮನನ್ನು ಅನುಗ್ರಹಿಸಬೇಕೆಂದು ಪ್ರಾರ್ಥಿಸಿರುವ ರಚನೆ.

ನಂತರ ಲತಾಂಗಿ ರಾಗದ ಜನಪ್ರಿಯ ಕೃತಿ `ಅಪರಾಧಮುಲ~ ಆಲಾಪನೆ, ನೆರವಲ್, ಸ್ವರ ಪ್ರಸ್ತಾರಗಳ ಹಿತಮಿತ ಸಂಯೋಜನೆಯೊಂದಿಗೆ ಬೆಳಗಿತು. ದೀಕ್ಷಿತರ ಇನ್ನೊಂದು ಘನವಾದ ಕೃತಿ `ಶ್ರೀ ಸೌಂದರಾಜಕುಮಾರ~ ಸೊಗಸಾಗಿ ನಿರೂಪಿತವಾಯಿತು. ವಿಸ್ತಾರಕ್ಕೆ ಬಹು ಬಳಕೆಯ ರಾಗವನ್ನೇ ಆಯ್ದರೂ, ಅರ್ಥಪೂರ್ಣವಾದ ಕೃತಿಯನ್ನು ಆಯ್ದು, ಕಛೇರಿಯ ಸ್ವಾರಸ್ಯವನ್ನು ಹೆಚ್ಚಿಸಿದರು.

ನೀರಿನಲ್ಲಿ ಮುಳುಗಿ, ಜಪ, ಉಪವಾಸಗಳನ್ನು ಮಾಡುವುದರಿಂದ ದೇವರನ್ನು ಕಾಣಲಾಗುವುದಿಲ್ಲ! ರಾಮನಲ್ಲಿ ನಿಜಭಕ್ತಿ ಇಡದೆ, ಭಕ್ತರ ವೇಷ ಹಾಕಿ ನಟಿಸುವವರನ್ನು ತ್ಯಾಗರಾಜರು ಈ `ನಡಚಿ ನಡಚಿ~ ಕೀರ್ತನೆಯಲ್ಲಿ ಖಂಡಿಸಿದ್ದಾರೆ. ಖರಹರಪ್ರಿಯ ರಾಗದ ಆಲಾಪನೆ, ಸ್ವರ ಪ್ರಸ್ತಾರಗಳು ಸ್ವಾದಿಷ್ಟವಾಗಿದ್ದವು. ಹೆಚ್ಚಿನ ಅನುಭವದಿಂದ ಮಾನಸೀ ಪ್ರಸಾದರ ಭವಿಷ್ಯ ಆಶಾದಾಯಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.