ಅಂತರಜಾಲ ತಾಣದ ಒಂದು ಪುಟ ತೆರೆಯಲು ನಿಮಿಷಗಟ್ಟಲೇ ಸಮಯ ಬೇಕಾಗಿದ್ದ ಕಾಲ ನೆನಪಿದೆಯೇ? ಬೇಕೆನಿಸಿದ ವೆಬ್ಸೈಟ್ನ ಕೊಂಡಿಗೆ ಹೋಗಿ, `ಕ್ಲಿಕ್~ ಮಾಡಿದರೆ ಒಂದೆರಡು ನಿಮಿಷಗಳ ಬಳಿಕ ನಿಧಾನವಾಗಿ ಆ ಪುಟ ತೆರೆದುಕೊಳ್ಳುತ್ತಿತ್ತು. ತಾಳ್ಮೆಗೆ ಹೇಳಿ ಮಾಡಿಸಿದಂಥ ಸಮಯವದು!

ಈಗೆಲ್ಲ ಆ ಸ್ಥಿತಿ ಇಲ್ಲ. ಒಂದೆರಡು ಸೆಕೆಂಡ್ಗಳಷ್ಟೇ ಸಾಕು- ನಿಮಗೆ ಬೇಕೆನಿಸಿದ ವೆಬ್ಸೈಟ್ಗೆ ಕರೆದೊಯ್ಯಲು. ಕಣ್ರೆಪ್ಪೆ ಮುಚ್ಚಿ ತೆಗೆಯುವಷ್ಟು ಸಮಯದಲ್ಲಿ ಬೇಕೆನಿಸಿದ ಪುಟ ತೆರೆದಿರುತ್ತದೆ. ಇಷ್ಟಿದ್ದರೂ ಎಷ್ಟೋ ಬಳಕೆದಾರರಿಗೆ ಅಸಮಾಧಾನ.

`ಇಲ್ಲ ಕಣ್ರೀ... ಫಾಸ್ಟೇ ಇಲ್ಲ ಎಂಬ ದೂರು! `ಗೂಗಲ್~ನ ಎಂಜಿನಿಯರ್ಗಳು ನಡೆಸಿದ ಅಧ್ಯಯನದಲ್ಲಿ, ವೆಬ್ಸೈಟ್ ತೆರೆದುಕೊಳ್ಳಲು 400 ಮಿಲಿಸೆಕೆಂಡ್ನಷ್ಟು ಮಾತ್ರ ಅತ್ಯಲ್ಪ ಅವಧಿ ಕಾಯಬೇಕಾಗಿರುವುದಕ್ಕೆ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ! ಇದೇ ಒಂದು ಕಾರಣದಿಂದಾಗಿ, `ಹುಡುಕಾಟ~ (ಸರ್ಚ್) ನಡೆಸುವುದನ್ನು ಎಷ್ಟೋ ಬಳಕೆದಾರರು ಆ ಕ್ಷಣಕ್ಕೆ ಕೈಬಿಡುತ್ತಾರಂತೆ! `ಹಾಗೆ ನೋಡಿದರೆ, ಕಾಯುವುದನ್ನು ಯಾರೂ ಬಯಸುವುದಿಲ್ಲ.

ಪ್ರತಿ ಸೆಕೆಂಡ್ ಅಥವಾ ಮಿಲಿ ಸೆಕೆಂಡ್ ಕೂಡ ಅತಿ ಮುಖ್ಯವಲ್ಲವೇ?~ ಎಂದು ಪ್ರಶ್ನಿಸುತ್ತಾರೆ, ಗೂಗಲ್ನಲ್ಲಿ ಎಂಜಿನಿಯರ್ ಆಗಿರುವ ಅರವಿಂದ್ ಜೈನ್.
`ವೇಗ~ವನ್ನೇ ಗುರಿಯಾಗಿಟ್ಟುಕೊಂಡು, ಬಳಕೆದಾರರಿಗೆ ಕ್ಷಿಪ್ರ ಅವಧಿಯಲ್ಲಿ ಸಂಪರ್ಕ ಒದಗಿಸಲು ಗೂಗಲ್ ಸೇರಿದಂತೆ ಹಲವು ಕಂಪೆನಿಗಳು ಸಂಶೋಧನೆ ನಡೆಸುತ್ತಿವೆ.

ಅಷ್ಟಕ್ಕೂ ವೆಬ್ಸೈಟ್ಗಳು ತೆರೆದುಕೊಳ್ಳುವ ಸಮಯ ಏಕೆ ಹೆಚ್ಚಾಗುತ್ತಿದೆ ಎಂಬ ಪ್ರಶ್ನೆಗೆ, ತಂತ್ರಜ್ಞರು ನೀಡುವ ಉತ್ತರ- ಹೆಚ್ಚುತ್ತಿರುವ ಸ್ಮಾರ್ಟ್ಫೋನ್ ಹಾಗೂ ಟ್ಯಾಬ್ಲೆಟ್ಗಳ ಬಳಕೆ! ವಿಡಿಯೊ, ಫೋಟೋ, ಕಡತ, ವಿವಿಧ ಸಿನಿಮಾ ದೃಶ್ಯ, ಪತ್ರಿಕೆ, ತಾಜಾ ಸಮಾಚಾರಗಳನ್ನು ಪಡೆಯಲು ಅಷ್ಟೇ ಅಲ್ಲ; ಪ್ರಯಾಣದ ಅವಧಿಯಲ್ಲಿ ಸಮೀಪವಿರುವ ರೆಸ್ಟೊರೆಂಟ್, ಪೆಟ್ರೋಲ್ ಪಂಪ್, ಪಬ್, ಬಾರ್ಗಳ ಮಾಹಿತಿ ಪಡೆಯಲು ಸಹ ಸ್ಮಾರ್ಟ್ಫೋನ್ ಹಾಗೂ ಟ್ಯಾಬ್ಲೆಟ್ ಬಳಕೆಯಾಗುತ್ತಿವೆ. ಇಂಟರ್ನೆಟ್ ಸೌಲಭ್ಯವುಳ್ಳ ಈ ಎರಡು ಬಗೆಯ ಉಪಕರಣಗಳು, `ಡಿಜಿಟಲ್ ಟ್ರಾಫಿಕ್ ಜಾಮ್~ಗೆ ಕಾರಣವಾಗಿವೆ.ಹಲವಾರು ಸರ್ಚ್ ಎಂಜಿನ್ಗಳೂ ಈಗ ಲಭ್ಯವಿವೆ.

ಬಳಕೆದಾರನು ಯಾವ ಸರ್ಚ್ ಎಂಜಿನ್ನಲ್ಲಿ `ವೇಗ~ ಲಭ್ಯವಿದೆಯೋ, ಅದರತ್ತ ಒಲವು ತೋರುತ್ತಾನೆ. ಈ ಬಗ್ಗೆ ನಡೆಸಿದ ಅಧ್ಯಯನವು ಕುತೂಹಲಕರ ಸಂಗತಿ ತೆರೆದಿಟ್ಟಿದೆ. ಒಂದು ಸರ್ಚ್ ಎಂಜಿನ್ಗಿಂತಲೂ 250 ಮಿಲಿಸೆಕೆಂಡ್ನಷ್ಟು ಕಡಿಮೆ ಅವಧಿಯಲ್ಲಿ ವೆಬ್ಸೈಟ್ ತೆರೆದು ಒದಗಿಸುವ ಇನ್ನೊಂದು ಪ್ರತಿಸ್ಪರ್ಧಿ ಸರ್ಚ್ ಎಂಜಿನ್ನತ್ತ ಬಳಕೆದಾರ ಸುಲಭವಾಗಿ ಹೋಗಿ ಬಿಡುತ್ತಾನೆ.

`ಒಂದು ಮಿಲಿಸೆಕೆಂಡ್ ಅಂದರೆ, ಸೆಕೆಂಡ್ನ ಸಾವಿರದ ಒಂದನೇ ಭಾಗ. ಇನ್ನೂರೈವತ್ತು ಮಿಲಿಸೆಕೆಂಡ್... ಅದು ವೇಗವೋ, ನಿಧಾನವೋ... ಒಟ್ಟಿನಲ್ಲಿ ಇಂಟರ್ನೆಟ್ ಜಗತ್ತಿನಲ್ಲಿ ಅದೂ ಲೆಕ್ಕಕ್ಕೆ ಸೇರುತ್ತದೆ~ ಎನ್ನುತ್ತಾರೆ, ಮೈಕ್ರೊಸಾಫ್ಟ್ನ ಕಂಪ್ಯೂಟರ್ ವಿಜ್ಞಾನಿ ಹ್ಯಾರಿ ಶಮ್.ವೆಬ್ಸೈಟ್ ಕಾರ್ಯಕ್ಷಮತೆ ಆಧರಿಸಿ, ಬಳಕೆದಾರನ ನಿರೀಕ್ಷೆ ಒಂದು ರೂಪ ಪಡೆದುಕೊಳ್ಳುತ್ತವೆ.

ಸರ್ಚ್ ಎಂಜಿನ್ನಲ್ಲಿ ಯಾವುದೋ ಒಂದು ವಿಡಿಯೋ ಹುಡುಕಲು ವ್ಯಕ್ತಿಯೊಬ್ಬ ಸಾಕಷ್ಟು ಹೊತ್ತು ಕಾಯುತ್ತಾನಾದರೂ, ಆ ವಿಡಿಯೋ ಆರಂಭವಾಗುವುದಕ್ಕೆ ಮಾತ್ರ ಕಾಯಲು ಬಯಸುವುದಿಲ್ಲ. ವೆಬ್ಸೈಟ್ಗಳೆಂದರೆ, ಅಕ್ಷರ, ಫೋಟೋ, ವಿಡಿಯೋಗಳನ್ನು ಅಳವಡಿಸಿರುವ ಒಂದು ತಾಣ. ಸಂಬಂಧಿಸಿದ ಸಂಗತಿ / ಮಾಹಿತಿ ಹುಡುಕಲು ಶೋಧಯಂತ್ರಕ್ಕೆ ಸ್ವಲ್ಪ ಸಮಯ ಬೇಕಷ್ಟೇ.

ಕೆಲವು ವೆಬ್ಸೈಟ್ಗಳು ಈ ಎಲ್ಲದರ ಜತೆಗೆ, ಗ್ರಾಫಿಕ್, ನಕ್ಷೆ, ಸಂವಾದ, ಅಭಿಮತ ಸಂಗ್ರಹ (ಪೋಲ್) ಇತರ ವಿಭಾಗಗಳನ್ನೂ ಒಳಗೊಂಡಿರುತ್ತವೆ. ಇವೆಲ್ಲದರಿಂದಾಗಿ, ವೆಬ್ಸೈಟ್ನಲ್ಲಿ ವ್ಯಕ್ತಿಯು ಹುಡುಕಬೇಕಾದ ಅಂಶ ಬೇಗನೇ ಸಿಗುವುದಿಲ್ಲ.

ಹೀಗಿದ್ದರೂ, ಇದೆಲ್ಲ ಅಂತರ್ಜಾಲ ಲೋಕದಲ್ಲಿ ಪರಿಗಣನೆ ಆಗುವುದೇ ಇಲ್ಲ. ಎಲ್ಲವೂ ವೇಗವಾಗಿ ಸಿಗಬೇಕು. ಪ್ರತಿ ಐದು ಮಂದಿ ಆನ್ಲೈನ್ ಬಳಕೆದಾರರ ಪೈಕಿ ನಾಲ್ವರು, ತಮ್ಮ ಕಂಪ್ಯೂಟರ್ನಲ್ಲಿ ವಿಡಿಯೋ ಬೇಗನೇ ಆರಂಭವಾಗದಿದ್ದರೆ ಬೇರೆ ವೆಬ್ಸೈಟ್ಗೆ ಹೋಗಿ ಬಿಡುತ್ತಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಸ್ಮಾರ್ಟ್ಫೋನ್ಗಳಲ್ಲಿ ವೇಗದಿಂದ ಅಂತರ್ಜಾಲ ಸೇವೆ ನೀಡುವುದು ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಇಂಟರ್ನೆಟ್ನಲ್ಲಿ ವೇಗದ ಸೇವೆ ಕಲ್ಪಿಸುವ ಕುರಿತು ಗಮನಹರಿಸಿರುವ ಅಮೆರಿಕದ ಸರ್ಕಾರ, ಹೊಸ ಮಸೂದೆ ಜಾರಿಗೊಳಿಸಿದೆ.

ಟೆಲಿವಿಜನ್ ಪ್ರಸಾರಕರಿಗೆ ನೀಡಿರುವ ತರಂಗಾಂತರಗಳನ್ನು ಇಂಟರ್ನೆಟ್ ಸೌಲಭ್ಯ ನೀಡುವ ಕಂಪೆನಿಗಳಿಗೂ ವಿಸ್ತರಿಸಲು ಇದು ಅವಕಾಶ ಕಲ್ಪಿಸಲಿದೆ. 1990ರ ನಂತರದ ಸಮಯದಲ್ಲಿ `ವರ್ಲ್ಡ್ ವೈಡ್ ವೆಬ್~ (WWW) ಅತ್ಯಂತ ಜನಪ್ರಿಯವಾಯಿತು. ಆದರೆ, ಕೆಲವೇ ಸಮಯದಲ್ಲಿ ದಟ್ಟಣೆ ಹೆಚ್ಚಾದಾಗ, ಒಂದೊಂದು ವೆಬ್ಸೈಟ್ ತೆರೆಯಲೂ ಸಾಕಷ್ಟು ಸಮಯ ಬೇಕಾಗುತ್ತಿತ್ತು. ಆಗ ಇದನ್ನು `ವರ್ಲ್ಡ್ ವೈಡ್ ವೇಟ್~ ಎಂದು ಗೇಲಿ ಮಾಡಿದವರೇ ಹೆಚ್ಚು.

ಕಂಪ್ಯೂಟರ್ ಜತೆಜತೆಗೆ ಈಗ ಮೊಬೈಲ್ನಲ್ಲೂ ಇಂಟರ್ನೆಟ್ ಸೌಲಭ್ಯ ಸಿಗುತ್ತಿರುವುದು ಹಲವು ಕಂಪೆನಿಗಳು ಈ ಕ್ಷೇತ್ರಕ್ಕೆ ಕಾಲಿಡಲು ಕಾರಣವಾಗಿದೆ. ~ಅತಿ ಶೀಘ್ರ ಅವಧಿಯಲ್ಲಿ ಹೆಚ್ಚು ಮಾಹಿತಿ ಸಂಗ್ರಹಿಸುವಂತೆ ಮೊಬೈಲ್ ಫೋನ್ ಅನ್ನು ರೂಪಿಸುವುದು ನಮ್ಮ ಮುಂದಿರುವ ಸವಾಲು~ ಎಂದು ಅಕಮಾಯ್ ಟೆಕ್ನಾಲಜೀಸ್ನ ಮುಖ್ಯ ವಿಜ್ಞಾನಿ ಟಾಮ್ ಲೇಟನ್ ಹೇಳುತ್ತಾರೆ.

* ವಿವಿಧ ಮೂಲಗಳಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.