ನವದೆಹಲಿ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಏಳು ವಿಕೆಟ್ ಅಂತರದ ಜಯ ಗಳಿಸಿದೆ. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.

ಈ ಮೊದಲು ಅಹಮದಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 140 ರನ್ ಅಂತರದ ಜಯ ಗಳಿಸಿತ್ತು.

ರಾಹುಲ್ ಅರ್ಧಶತಕ...

ವಿಂಡೀಸ್ ಒಡ್ಡಿದ 121 ರನ್ಗಳ ಗುರಿ ಬೆನ್ನಟ್ಟಿದ ಭಾರತ ಅಂತಿಮ ದಿನದಾಟದ ಮೊದಲ ಅವಧಿಯಲ್ಲಿ ಗೆಲುವಿನ ನಗೆ ಬೀರಿತು. 35.2 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು.

ಆರಂಭಿಕ ಬ್ಯಾಟರ್, ಕನ್ನಡಿಗ ಕೆ.ಎಲ್. ರಾಹುಲ್ ಅಜೇಯ ಅರ್ಧಶತಕ (58*) ಗಳಿಸಿದರು. ಸಾಯಿ ಸುದರ್ಶನ್ 39 ರನ್ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು.

ಮೊದಲ ಇನಿಂಗ್ಸ್ನಲ್ಲಿ ಶತಕ ಗಳಿಸಿದ್ದ ಯಶಸ್ವಿ ಜೈಸ್ವಾಲ್ 8 ಹಾಗೂ ನಾಯಕ ಶುಭಮನ್ ಗಿಲ್ 13 ರನ್ ಗಳಿಸಿ ಔಟ್ ಆದರು.

ಯಶಸ್ವಿ (175) ಹಾಗೂ ಗಿಲ್ (129*) ಶತಕದ ಬಲದೊಂದಿಗೆ ಭಾರತ ಮೊದಲ ಇನಿಂಗ್ಸ್ನಲ್ಲಿ ಐದು ವಿಕೆಟ್ ನಷ್ಟಕ್ಕೆ 518 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತ್ತು.

ಬಳಿಕ ಕುಲದೀಪ್ ಯಾದವ್ (82ಕ್ಕೆ 5 ವಿಕೆಟ್) ದಾಳಿಗೆ ಸಿಲುಕಿದ್ದ ವಿಂಡೀಸ್ 248 ರನ್ನಿಗೆ ಆಲೌಟ್ ಆಗಿತ್ತು. ಆ ಮೂಲಕ ಭಾರತ ಮೊದಲ ಇನಿಂಗ್ಸ್ನಲ್ಲಿ 270 ರನ್ಗಳ ಮುನ್ನಡೆ ಗಳಿಸಿತ್ತಲ್ಲದೆ ಎದುರಾಳಿ ತಂಡದ ಮೇಲೆ ಫಾಲೋ ಆನ್ ಹೇರಿತ್ತು.

ದ್ವಿತೀಯ ಇನಿಂಗ್ಸ್ನಲ್ಲಿ ಪ್ರತಿರೋಧ ತೋರಿದ್ದ ವಿಂಡೀಸ್ 390 ರನ್ ಪೇರಿಸಿತ್ತು. ಜಾನ್ ಕ್ಯಾಂಪ್ಬೆಲ್ (115) ಹಾಗೂ ಶಾಯ್ ಹೋಪ್ (103) ಅಮೋಘ ಶತಕಗಳನ್ನು ಬಾರಿಸಿದ್ದರು.

ಭಾರತದ ಪರ ದ್ವಿತೀಯ ಇನಿಂಗ್ಸ್ನಲ್ಲಿ ಕುಲದೀಪ್ ಯಾದವ್ ಹಾಗೂ ಜಸ್ಪ್ರೀತ್ ಬೂಮ್ರಾ ತಲಾ ಮೂರು ವಿಕೆಟ್ಗಳನ್ನು ಗಳಿಸಿದ್ದರು.
.IND vs WI 2nd Test | ಜಯದ ಸನಿಹ ಶುಭಮನ್ ಪಡೆ.ODI WC 2027 | ‘ರೋಕೊ’ ಭವಿಷ್ಯ ಫಾರ್ಮ್, ಫಿಟ್ನೆಸ್ ಅವಲಂಬಿಸಿದೆ: ರವಿಶಾಸ್ತ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.