ಸಿಡ್ನಿ: ಮುಂದಿನ (2027ರ) ಏಕದಿನ ವಿಶ್ವಕಪ್ನಲ್ಲಿ ಆಡುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ವಿಶ್ವಾಸವು ‘ಫಾರ್ಮ್, ಫಿಟ್ನೆಸ್ ಮತ್ತು ಆಡಬೇಕೆಂಬ ಹಸಿವು’ ಇವುಗಳನ್ನು ಅವಲಂಬಿಸಿದೆ ಎಂದು ಭಾರತ ತಂಡದ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಸರಣಿಯು ಈ ಮೂರು ವಿಷಯಗಳಲ್ಲಿ ರೋಹಿತ್ ಮತ್ತು ಕೊಹ್ಲಿ (ರೋಕೊ) ಅವರಿಗೆ ಪರೀಕ್ಷೆಯಾಗಲಿದೆ ಎಂದಿದ್ದಾರೆ ರವಿ ಶಾಸ್ತ್ರಿ. ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಸರಣಿಯಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದಲ್ಲಿ ಇಬ್ಬರೂ ದಿಗ್ಗಜರು ತಮ್ಮ ಸ್ಥಾನ ಗಟ್ಟಿಗೊಳಿಸಬಹುದು ಎಂದು 63 ವರ್ಷ ವಯಸ್ಸಿನ ಶಾಸ್ತ್ರಿ ಹೇಳಿದ್ದಾರೆ. ಶಾಸ್ತ್ರಿ 2017 ರಿಂದ 2021ರವರೆಗೆ ಕೋಚ್ ಆಗಿದ್ದರು.

‘ಇದೇ ಕಾರಣಕ್ಕೆ ಇವರಿಬ್ಬರು (ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ) ಆಡಲು ಮನಸ್ಸು ಮಾಡಿದ್ದಾರೆ’ ಎಂದು ಶಾಸ್ತ್ರಿ ಅವರನ್ನು ಉದ್ಧರಿಸಿ ಕ್ರಿಕೆಟ್.ಕಾಂ.ಎಯು ವರದಿ ಮಾಡಿದೆ.

ಕೊಹ್ಲಿ ಮತ್ತು ರೋಹಿತ್ ಅವರು ಉಳಿದೆರಡು ಮಾದರಿಗಳಿಂದ ನಿವೃತ್ತಿ ಪಡೆದಿದ್ದಾರೆ. ಏಕದಿನ ವಿಶ್ವಕಪ್ ಇನ್ನೆರಡು ವರ್ಷ ದೂರ ಇದೆ. ಆ ವೇಳೆಗೆ ರೋಹಿತ್ ಅವರಿಗೆ 40 ವರ್ಷ ಮತ್ತು ಕೊಹ್ಲಿ ಅವರಿಗೆ 38 ವರ್ಷ ವಯಸ್ಸು ಆಗಲಿದೆ. ಏಕದಿನ ಮಾದರಿಯಲ್ಲಿ ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಶುಭಮನ್ ಗಿಲ್ ಅವರಿಗೆ ಸಾರಥ್ಯ ವಹಿಸಲಾಗಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಇವರಿಬ್ಬರು ಕೊನೆಯ ಬಾರಿ ತಂಡದಲ್ಲಿ ಆಡಿದ್ದರು. ರೋಹಿತ್ ಅವರು ಫೈನಲ್ನಲ್ಲಿ ‘ಪಂದ್ಯದ ಪುರುಷೋತ್ತಮ’ರಾಗಿದ್ದರು. ಕೊಹ್ಲಿ ಅಗ್ರ ಐವರು ಬ್ಯಾಟರ್ಗಳಲ್ಲಿ ಸ್ಥಾನ ಪಡೆದಿದ್ದರು. ‘ಆದರೆ ಮಹತ್ವದ ಪಂದ್ಯಗಳ ವಿಷಯಕ್ಕೆ ಬದಾಗ ಅನುಭವಕ್ಕೆ ಪರ್ಯಾಯ ಇಲ್ಲ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.