ಭಾನುವಾರ, ಜನವರಿ 19, 2020
21 °C

ಬೇಗೂರು: ನಾಗನಾಥೇಶ್ವರ ಕಾರ್ತಿಕ ದೀಪೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಗೂರು: ನಾಗನಾಥೇಶ್ವರ ಕಾರ್ತಿಕ ದೀಪೋತ್ಸವ

ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ಸಮೀಪದ ಬೇಗೂರಿನ ಪಾರ್ವತಿ ಸಮೇತ ನಾಗನಾಥೇಶ್ವರಸ್ವಾಮಿ ದೇವ ಸ್ಥಾನದಲ್ಲಿ ಕಾರ್ತಿಕ ಅಮಾವಾಸ್ಯೆ ಪ್ರಯುಕ್ತ ಲಕ್ಷ ದೀಪೋತ್ಸವ ಸಂಭ್ರಮ ದಿಂದ ಸೋಮವಾರ ನಡೆಯಿತು.ಈ ದೇವಾಲಯವು ಪಂಚಲಿಂಗಗಳ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಕಾರ್ತಿಕ ಅಮಾವಾಸ್ಯೆಯ ಪ್ರಯುಕ್ತ ದೇವರಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡ ಲಾಗಿತ್ತು. ಸಹಸ್ರಾರು ಭಕ್ತರು ದೀಪೋ ತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಮಹಿಳೆಯರು ಮತ್ತು ಮಕ್ಕಳು ಸಾಲು ದೀಪಗಳನ್ನು ಹಚ್ಚಿ ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯ ವಾಗಿತ್ತು.

ಸದ್ಗುರು ಸಾಯಿನಾಥ ವಿದ್ಯಾ ಸಂಸ್ಥೆಯ ಪ್ರಭಾಕರ ರೆಡ್ಡಿ ಹಾಗೂ ಎನ್‌.ಆರ್‌.ವಿದ್ಯಾ ಸಂಸ್ಥೆಯ ನಂಜಾರೆಡ್ಡಿ ಕುಟುಂಬದವರಿಂದ ಅನ್ನ ಸಂತರ್ಪಣೆ ನಡೆಯಿತು.

ಪ್ರತಿಕ್ರಿಯಿಸಿ (+)