ಸೋಮವಾರ, ಮೇ 23, 2022
26 °C

ಬೇತು: ಮುಗಿಯದ ನೀರಿನ ಬವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ನಾಪೋಕ್ಲು ಪಟ್ಟಣದಿಂದ ಒಂದು ಕಿ.ಮೀ. ಅಂತರದಲ್ಲಿರುವ ಬೇತು ಗ್ರಾಮದ ಮಂದಿ ನೀರಿಲ್ಲದೇ ಪರದಾಡುತ್ತಿದ್ದಾರೆ. ಈ ಗ್ರಾಮದ ಸುತ್ತ ನೀರಿನ ಸೆಲೆ ಸಾಕಷ್ಟಿದ್ದರೂ ಗ್ರಾಮದ ಮಂದಿಗೆ ನೀರಿಗೆ ತತ್ವಾರ!ಸಮರ್ಪಕ ನೀರು ಸರಬರಾಜು ಯೋಜನೆ ಇಲ್ಲದೇ ಬೇಸಿಗೆಯಲ್ಲಿ ಇಡೀ ಗ್ರಾಮದ ಮಂದಿ ನೀರಿನ ಬವಣೆಯಿಂದ ಬಳಲಿದೆ. ನೀರಿಗಾಗಿ ಕೊಳವೆ ಬಾವಿಯನ್ನು, ದೂರದ ಹೊಳೆಯನ್ನು ಅವಲಂಬಿಸುವಂತಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ನೀರು ಸರಬರಾಜಿಗಾಗಿ  ಸಾಕಷ್ಟು ಯೋಜನೆ ರೂಪಿಸಿದ್ದರೂ ನೀರು ಪೂರೈಕೆಯ ಸಮಸ್ಯೆಗಳು ಮುಗಿಯುತ್ತಿಲ್ಲ.ನೀರು ಹರಿಯುವ ಕೊಳವೆ, ಪಂಪ್ ದುರಸ್ತಿ, ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಹೀಗೆ ಹತ್ತಾರು ಸಮಸ್ಯೆಗಳೊಂದಿಗೆ ಗ್ರಾಮಸ್ಥರಿಗೆ ತಿಂಗಳಿಗೆ ಮೂರು ದಿನ ನೀರು ಸಿಕ್ಕರೆ ಅದೇ ಭಾಗ್ಯ ಎಂಬಂತಾಗಿದೆ.ಈ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ನೀರು ಸಂಗ್ರಹಣಾ ತೊಟ್ಟಿ ಇದೆ. ಗ್ರಾಮದ ಮಕ್ಕಿ ದೇವಾಲಯಕ್ಕೆ ತೆರಳುವ ರಸ್ತೆ ಬದಿಯಲ್ಲಿ ಸ್ವಜಲಧಾರಾ ಯೋಜನೆಯಡಿ ನಿರ್ಮಿಸಲಾದ ಬೃಹತ್ ನೀರಿನ ಟ್ಯಾಂಕ್ ಇದೆ. ಆದರೆ ನೀರು ಪೂರೈಕೆಯ ಯೋಜನೆಗಳು ವಿಫಲಗೊಂಡು ಟ್ಯಾಂಕ್ ಎಂದಿಗೂ ಭರ್ತಿಯಾಗುವುದೇ ಇಲ್ಲ.ವರ್ಷದ ಆರಂಭದಲ್ಲಿ ಹತ್ತು ಅಶ್ವಶಕ್ತಿಯ ಮೋಟರ್ ಪಂಪ್ ದುರಸ್ತಿಯಾಗಿ ಬರಲು ಎರಡು ಮೂರು ತಿಂಗಳು ಸಂದಿತು. ಬಳಿಕ ಅಳವಡಿಸಲಾಗಿರುವ ಪೈಪ್‌ಗಳನ್ನು ಸರಿಪಡಿಸಲು ಸಾಕಷ್ಟು ಸಮಯ ತೆಗೆದುಕೊಂಡಿತು. ಎಲ್ಲಾ ಸರಿಯಾಗಿ ಇನ್ನೇನು ನೀರು ಪೂರೈಸಬೇಕು ಎನ್ನುವಷ್ಟರಲ್ಲಿ ವಿದ್ಯುತ್ ಸಂಪರ್ಕ ಅಡಚಣೆಯುಂಟಾಗಿ ಮತ್ತೆ ನೀರಿಗೆ ತತ್ವಾರ ಉಂಟಾಗಿದೆ.ಗ್ರಾಮಕ್ಕೆ ನೀರು ಸರಬರಾಜಿನ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿ ಮೊದಲ ಆದ್ಯತೆಯಾಗಿ ರೂಪಿಸಿಕೊಡಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.