ಅಬ್ಬ ಬೇಸಿಗೆ ಶುರುವಾಯಿತು. ಯಾವ ಬಟ್ಟೆ ತೊಡುವುದು ಎಂಬ ಚಿಂತೆ ನಿಮ್ಮನ್ನು ಆವರಿಸಿದ್ದರೆ ನಿಮಗಿರುವ ಒಂದೇ ಆಯ್ಕೆ ಹತ್ತಿಯ ಬಟ್ಟೆ. ಸೂರ್ಯನ ಪ್ರಖರ ಕಿರಣ ಮೈ ಸುಡುತ್ತಿದೆ. ಎಲ್ಲರ ಮುಖದಲ್ಲೂ ಬೆವರಿಳಿಸುವಂಥ ಸೂರ್ಯನನ್ನು ಎದುರಿಸಲು ನಾವು ಸಿದ್ಧರಾಗಬೇಕಿದೆ.

ಬೇಸಿಗೆಯಲ್ಲಿ ತೊಡಲು ಹಿತಕರವಾದ ಬಟ್ಟೆಗಳ ಸಂಗ್ರಹ ನಿಮ್ಮಲ್ಲಿದ್ದರೆ ಕಚೇರಿ ಅಥವಾ ಕಾಲೇಜಿಗೆ ಇವತ್ತು ಯಾವ ಬಟ್ಟೆ ತೊಡಲಿ ಎಂಬ ತೊಳಲಾಟದಿಂದ ಮುಕ್ತರಾಗಬಹುದು.

*ಸೂರ್ಯನ ಶಾಖದಿಂದ ಚರ್ಮವನ್ನು ರಕ್ಷಿಸಲು ತುಂಬು ತೋಳಿನ ತೆಳುಬಟ್ಟೆಗಳನ್ನು ಧರಿಸಿ.

*ಬೇಸಿಗೆ ಕಾಲದಲ್ಲಿ ಸಡಿಲವಾದ ಹತ್ತಿ ಉಡುಪುಗಳನ್ನು ಬಳಸಿದರೆ ದೇಹಕ್ಕೆ ವಾಯು ಸಂಚಾರ ಸೂಕ್ತ ರೀತಿಯಲ್ಲಿ ಆಗಿ, ಆರೋಗ್ಯ ಉತ್ತಮವಾಗುತ್ತದೆ.

*ಹತ್ತಿ ಅಥವಾ ನಾರಿನಿಂದ ನೇಯ್ದ ಬಟ್ಟೆಗಳು ಬೇಸಿಗೆಯಲ್ಲೂ ನಿಮ್ಮನ್ನು ಖುಷಿಯಿಂದ ಇಡುತ್ತವೆ.

*ನಮ್ಮ ದೇಹದ ಆಕಾರಕ್ಕೆ ಹೊಂದುವ ಮತ್ತು ಉತ್ತಮ ಬಣ್ಣದ ಆಯ್ಕೆ ಮಾಡುವುದು ಬೇಸಿಗೆಯಲ್ಲಿ ಅತಿ ಮುಖ್ಯ. ಜರಿ ಬಟ್ಟೆಗಳು ಬೇಸಿಗೆಗೆ ಒಪ್ಪದು. ಸೀರೆ, ಚೂಡಿದಾರ್ ಯಾವುದೇ ಇರಲಿ ಹತ್ತಿ ಬಟ್ಟೆಯೇ ಸೊಗಸು.

*ಉರಿಯುವ ಬಿಸಿಲಿನಿಂದ ಬೆವರುವುದು ಹೆಚ್ಚುತ್ತದೆ. ಸದಾ ಕರ್ಚೀಫ್ನಿಂದ ಬೆವರು ಒರೆಸಿಕೊಳ್ಳುವುದು ಕಿರಿಕಿರಿ ಉಂಟುಮಾಡುತ್ತದೆ. ಅದಕ್ಕೇ ನಾವು ಧರಿಸುವ ಬಟ್ಟೆ ಕಾಲಕ್ಕೆ ತಕ್ಕಂತೆ ಇದ್ದಲ್ಲಿ ಈ ಕಿರಿಕಿರಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ.

*ಬೇಸಿಗೆಯಲ್ಲಿ ಕಡುವರ್ಣದ ಉಡುಪು ಕಣ್ಣಿಗೆ ಹಿತವಾಗಿರುವುದಿಲ್ಲ. ಆದಷ್ಟೂ ತಿಳಿಬಣ್ಣದ ಉಡುಪು ಹೆಚ್ಚು ಖುಷಿ ಕೊಡುತ್ತದೆ. ಬಿಳಿ, ತಿಳಿನೀಲಿ, ತಿಳಿ ಹಸಿರು, ಗುಲಾಬಿ ವರ್ಣಗಳು ಹೆಚ್ಚು ಆಕರ್ಷಕ.

*ಬೇಸಿಗೆಯಲ್ಲಿ ರೌಂಡ್ ನೆಕ್ ಹೆಚ್ಚು ಸೂಕ್ತ. ಅದರೆ ಆ ಡಿಸೈನ್ ನಿಮ್ಮ ದೇಹಕ್ಕೆ ಒಪ್ಪುವಂತಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.