ಲಂಡನ್: ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸೋಲು ಎದುರಾಗಲು `ಬೌಲಿಂಗ್ ವೈಫಲ್ಯ~ ಕಾರಣ ಎಂದು ಮಹೇಂದ್ರ ಸಿಂಗ್ ದೋನಿ ನುಡಿದಿದ್ದಾರೆ. ಆದರೆ ಇನ್ನುಳಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ಹೊಂದಿದ್ದಾರೆ.

ಓವಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಡಕ್ವರ್ಥ್ ಲೂಯಿಸ್ ನಿಯಮದಂತೆ ಮೂರು ವಿಕೆಟ್ಗಳ ಗೆಲುವು ಪಡೆದಿತ್ತು. ಸೋಲು ಅನುಭವಿಸುವ ಮುನ್ನ ಅಲ್ಪ ಪೈಪೋಟಿ ನೀಡಿದ್ದು ಮಾತ್ರ ಭಾರತದ ಸಾಧನೆ.

`ಮೊದಲ 10 ಓವರ್ಗಳು ಮಹತ್ವದ್ದು. ಈ ಹಂತದಲ್ಲಿ ನಾವು ಹೆಚ್ಚಿನ ರನ್ಗಳನ್ನು ಬಿಟ್ಟುಕೊಟ್ಟೆವು. ಇಲ್ಲದಿದ್ದರೆ ಸ್ಪಿನ್ನರ್ಗಳಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸುವ ಅವಕಾಶವಿತ್ತು~ ಎಂದು ಪಂದ್ಯದ ಬಳಿಕ ದೋನಿ ಪ್ರತಿಕ್ರಿಯಿಸಿದ್ದಾರೆ.

ಮೊದಲ 10 ಓವರ್ಗಳಲ್ಲಿ ಭಾರತ 60 ರನ್ಗಳನ್ನು ಬಿಟ್ಟುಕೊಟ್ಟಿತು. ಗೆಲುವಿಗೆ 235 ರನ್ಗಳ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ನ ಇನಿಂಗ್ಸ್ಗೆ ಮಳೆ ಅಡ್ಡಿಪಡಿಸಿತ್ತು. ಇದರಿಂದ ಡಕ್ವರ್ಥ್ ಲೂಯಿಸ್ ನಿಯಮದಂತೆ ಗೆಲುವಿಗೆ 43 ಓವರ್ಗಳಲ್ಲಿ 218 ರನ್ ಗಳಿಸುವ ಪರಿಷ್ಕೃತ ಗುರಿ ನೀಡಲಾಗಿತ್ತು.

ಆರ್. ಅಶ್ವಿನ್ (40ಕ್ಕೆ 3) ಮತ್ತು ರವೀಂದ್ರ ಜಡೇಜ (42ಕ್ಕೆ 2) ಅವರ ಪ್ರಭಾವಿ ಬೌಲಿಂಗ್ ಕಾರಣ ಒಂದು ಹಂತದಲ್ಲಿ ಭಾರತ ಜಯದ ಕನಸು ಕಂಡಿತ್ತು. ಆದರೆ ರವಿ ಬೋಪಾರ (40) ಹಾಗೂ ಟಿಮ್ ಬ್ರೆಸ್ನನ್ ಆರನೇ ವಿಕೆಟ್ಗೆ 60 ರನ್ಗಳನ್ನು ಸೇರಿಸಿ ಇಂಗ್ಲೆಂಡ್ನ ಗೆಲುವಿಗೆ ಕಾರಣರಾಗಿದ್ದರು.

`ಬೌಲರ್ಗಳ ಕೆಟ್ಟ ಪ್ರದರ್ಶನದಿಂದ ಸೋಲು ಎದುರಾದದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡಾ ಇದು ನಡೆದಿತ್ತು. ಆರಂಭದಲ್ಲಿ ನಾವು ಅಧಿಕ ರನ್ಗಳನ್ನು ನೀಡಿದೆವು~ ಎಂದರು ದೋನಿ.ಆದರೆ ಸರಣಿಯ ಇನ್ನುಳಿದ ಎರಡು ಪಂದ್ಯಗಳಲ್ಲಿ ಪುಟಿದೆದ್ದು ನಿಲ್ಲುವ ವಿಶ್ವಾಸವನ್ನು ಭಾರತ ತಂಡದ ನಾಯಕ ಹೊಂದಿದ್ದಾರೆ.

`ಎಲ್ಲ ಆಟಗಾರರು ಅಂಗಳದಲ್ಲಿ ಸಂಪೂರ್ಣ ಸಾಮರ್ಥ್ಯ ತೋರಿಸುವ ಉತ್ಸಾಹದಲ್ಲಿದ್ದಾರೆ. ನಾವು ಹಿನ್ನಡೆ ಅನುಭವಿಸಿದ್ದು ನಿಜ. ಏಕೆಂದರೆ ಅದೃಷ್ಟ ನಮ್ಮ ಪರವಾಗಿರಲಿಲ್ಲ. ಆದರೂ ಆಟಗಾರರು ಆತ್ಮವಿಶ್ವಾಸ ಕಳೆದುಕೊಂಡಿಲ್ಲ~ ಎಂದು ಹೇಳಿದ್ದಾರೆ.

ಆಲ್ರೌಂಡ್ ಪ್ರದರ್ಶನ ನೀಡಿದ ರವೀಂದ್ರ ಜಡೇಜ ಮತ್ತು ಆರ್. ಅಶ್ವಿನ್ ಬಗ್ಗೆ ನಾಯಕ ಮೆಚ್ಚುಗೆ ವ್ಯಕ್ತಪಡಿಸಿದರು. `ಜಡೇಜ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಬೌಲಿಂಗ್ನಲ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅವರ ಬ್ಯಾಟಿಂಗ್ ಮಾತ್ರ ಕಳವಳಕ್ಕೆ ಕಾರಣವಾಗಿತ್ತು. ಆದರೆ ಈ ಪಂದ್ಯದಲ್ಲಿ ಸೊಗಸಾದ ಇನಿಂಗ್ಸ್ ಕಟ್ಟಿದರು. ಬ್ಯಾಟಿಂಗ್ನಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ~ ಎಂದರು.

ಸ್ಕೋರ್ ವಿವರ

ಭಾರತ: 50 ಓವರ್ಗಳಲ್ಲಿ 7 ವಿಕೆಟ್ಗೆ 234
ಇಂಗ್ಲೆಂಡ್: 41.5 ಓವರ್ಗಳಲ್ಲಿ 7 ವಿಕೆಟ್ಗೆ 218
(ಡಕ್ವರ್ಥ್ ಲೂಯಿಸ್ ನಿಯಮದಂತೆ ಗೆಲುವಿನ ಗುರಿ 43 ಓವರ್ಗಳಲ್ಲಿ 218)

ಅಲಸ್ಟರ್ ಕುಕ್ ಎಲ್ಬಿಡಬ್ಲ್ಯು ಬಿ ಮುನಾಫ್ 23
ಕ್ರೆಗ್ ಕೀಸ್ವೆಟರ್ ಬಿ ರವೀಂದ್ರ ಜಡೇಜ 51
ಜೊನಾಥನ್ ಟ್ರಾಟ್ ಬಿ ಆರ್. ಅಶ್ವಿನ್ 11

ಇಯಾನ್ ಬೆಲ್ ರನೌಟ್ 23
ಬೆನ್ ಸ್ಟೋಕ್ಸ್ ಬಿ ಆರ್. ಅಶ್ವಿನ್ 20
ರವಿ ಬೋಪಾರ ಬಿ ಆರ್. ಅಶ್ವಿನ್ 40
ಟಿಮ್ ಬ್ರೆಸ್ನನ್ ಬಿ ರವೀಂದ್ರ ಜಡೇಜ 28

ಸ್ಟುವರ್ಟ್ ಬ್ರಾಡ್ ಔಟಾಗದೆ 05
ಗ್ರೇಮ್ ಸ್ವಾನ್ ಔಟಾಗದೆ 09

ಇತರೆ: (ಬೈ-2, ಲೆಗ್ಬೈ-3, ವೈಡ್-3) 08

ವಿಕೆಟ್ ಪತನ: 1-63 (ಕುಕ್; 9.6), 2-87 (ಕೀಸ್ವೆಟರ್; 16.6), 3-89 (ಟ್ರಾಟ್; 17.5), 4-131 (ಬೆಲ್; 26.2), 5-133 (ಸ್ಟೋಕ್ಸ್; 27.4), 6-193 (ಬ್ರೆಸ್ನನ್; 38.5), 7-208 (ಬೋಪಾರ; 40.5)
ಬೌಲಿಂಗ್: ಪ್ರವೀಣ್ ಕುಮಾರ್ 4-0-20-0, ಆರ್.ಪಿ ಸಿಂಗ್ 6-0-32-0, ಮುನಾಫ್ 8.5-0-63-1, ರವೀಂದ್ರ ಜಡೇಜ 9-0-42-2, ಆರ್. ಅಶ್ವಿನ್ 9-0-40-3, ಸುರೇಶ್ ರೈನಾ 5-0-16-0
ಫಲಿತಾಂಶ: ಇಂಗ್ಲೆಂಡ್ಗೆ 3 ವಿಕೆಟ್ ಜಯ; ಪಂದ್ಯಶ್ರೇಷ್ಠ: ರವೀಂದ್ರ ಜಡೇಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.