ಭಾನುವಾರ, ಜೂನ್ 20, 2021
21 °C

ಬ್ಯಾಡ್ಮಿಂಟನ್: ಕಶ್ಯಪ್, ಅಜಯ್‌ಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಪಿ. ಕಶ್ಯಪ್, ಅಜಯ್ ಜಯರಾಮನ್ ಹಾಗೂ ಸೌರಭ್ ವರ್ಮ ಸ್ವಿಟ್ಜರ್‌ಲೆಂಡ್‌ನ ಬಾಸೆಲ್‌ನಲ್ಲಿ ನಡೆಯುತ್ತಿರುವ ಸ್ವಿಸ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೋಲು ಕಂಡರು.



ಎರಡನೇ ಸುತ್ತಿನ ಪಂದ್ಯದಲ್ಲಿ ಈ ಸ್ಪರ್ಧಿಗಳು ನಿರಾಸೆ ಅನುಭವಿಸಿದರು. ಈ ಮೂಲಕ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಭಾರತದ ಹೋರಾಟ ತೆರೆ ಕಂಡಿತು.



ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಪೆಡ್ರಾ ಮಾರ್ಟಿನ್ಸ್ 21-16, 21-16ರಲ್ಲಿ ಅಜಯ್ ಎದುರು ಗೆಲುವು ಸಾಧಿಸಿದರು. ಈ ಗೆಲುವಿಗಾಗಿ ಪೆಡ್ರಾ ಒಂದು ಗಂಟೆ 30 ನಿಮಿಷ ಹೋರಾಟ ನಡೆಸಿದರು.



ಪಿ. ಕಶ್ಯಪ್ 13-21, 18-21ರಲ್ಲಿ ಏಳನೇ ಶ್ರೇಯಾಂಕದ ವಿಯೆಟ್ನಾಂನ ತೇಯಿನ್ ಮಿನ್ಹಾ ನುಗ್ವಾಯಿನ್ ಎದುರು ಪರಾಭವಗೊಂಡರು.



ಇನ್ನೊಂದು ಪಂದ್ಯದಲ್ಲಿ ರಾಷ್ಟ್ರೀಯ ಚಾಂಪಿಯನ್ ಸೌರಭ್ ಸಹ ನಿರಾಸೆ ಅನುಭವಿಸಿದರು. ಈ ಆಟಗಾರ 10-21, 9-21ರಲ್ಲಿ 13ನೇ ಶ್ರೇಯಾಂಕದ ವಾನ್ ಹೂ ಶೋನ್ ಎದುರು ಸೋತರು. ಈ ಪಂದ್ಯ 30 ನಿಮಿಷ ನಡೆಯಿತು.



ಮಹಿಳೆಯರ  ವಿಭಾಗದ ಸಿಂಗಲ್ಸ್‌ನಲ್ಲಿ ಹೈದರಾಬಾದ್‌ನ ಆಟಗಾರ್ತಿ ಸೈನಾ ನೆಹ್ವಾಲ್ ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ. ಡಬಲ್ಸ್‌ನಲ್ಲಿ ರೂಪೇಶ್ ಕುಮಾರ್ ಹಾಗೂ ಸನಾವೇ ಥಾಮಸ್ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.