ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್‌ಗೆ ವೆಂಕಟೇಶ್

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್‌ಗೆ ವೆಂಕಟೇಶ್

Published:
Updated:

ಬೆಂಗಳೂರು: ಗಮನಾರ್ಹ ಪ್ರದರ್ಶನ ನೀಡಿದ ವೆಂಕಟೇಶ್ ಪ್ರಸಾದ್ ಇಲ್ಲಿ ನಡೆಯುತ್ತಿರುವ ಎಂ.ಎಸ್. ರಾಮಯ್ಯ-ಆನಂದ ಶರ್ಮ ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದಲ್ಲಿ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.ಭಾನುವಾರ ನಡೆದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ವೆಂಕಟೇಶ್ 21-18, 17-21, 21-18ರಲ್ಲಿ ಇರ್ಷಾದ್ ಖಾನ್ ವಿರುದ್ಧ ಗೆಲುವು ಪಡೆದು ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು.ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಧಾರವಾಡದ ಅಭಿಷೇಕ್ ಯಲಿಗಾರ್ 21-12, 21-6ರಲ್ಲಿ ಎಸ್‌ಎಐನ ಗೌತಮ್ ಭಟ್ ಮೇಲೂ, ಜಗದೀಶ್ ಯಾದವ್ 21-18, 21-14ರಲ್ಲಿ ಬಿ. ಪ್ರವೀಣ್ ವಿರುದ್ಧವೂ, ಸೋನಿಕ್ ಪ್ರಭುದೇಸಾಯಿ 21-16, 21-18ರಲ್ಲಿ ಉಡುಪಿಯ ವೆಂಕಟೇಶ್ ಕಾಮತ್ ಮೇಲೂ, ಆದಿತ್ಯ ಆರ್. ಪ್ರಕಾಶ್ 21-9, 21-14ರಲ್ಲಿ ಕಮಲದೀಪ್ ಸಿಂಗ್ ವಿರುದ್ಧವೂ, ಬೆಳಗಾವಿಯ ರಜಸ್ ಜಾವಲ್ಕರ್ 21-15, 21-15ರಲ್ಲಿ ಬಿ.ಆರ್. ಸಂಕೀರ್ತ್ ಮೇಲೂ, ರಿಷಿಕೇಶ್ ಯಲಿಗಾರ್ 21-13, 21-13ರಲ್ಲಿ ಎಂ. ಕಾರ್ತಿಕ್ ವಿರುದ್ಧವೂ, ಅಭಿಜಿತ್ ನಿಂಪಳ್ಳಿ 21-19, 21-16ರಲ್ಲಿ ಆದರ್ಶ್ ಕುಮಾರ್ ಮೇಲೂ ಗೆಲುವು ಪಡೆದು ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟರು.ಸೆಮಿಫೈನಲ್‌ಗೆ ಸಿಂಧು ಭಾರದ್ವಾಜ್: ಇದೇ ಟೂರ್ನಿಯ ಮಹಿಳೆಯರ ವಿಭಾಗದ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸಿಂಧು ಭಾರದ್ವಾಜ್ 21-11, 21-19ರಲ್ಲಿ ಪಿ. ಹರ್ಷಿತಾ ಮೇಲೂ, ಉತ್ತರಾ ಪ್ರಕಾಶ್ 21-10, 21-2ರಲ್ಲಿ ಕೀರ್ತನಾ ವಿರುದ್ಧವೂ, ವಿ. ರುತು ಮಿಶಾ 21-19, 21-18ರಲ್ಲಿ ದೇವಿಕಾ ರವೀಂದ್ರ ವಿರುದ್ಧವೂ ಜಯ ಪಡೆದು ಸೆಮಿಫೈನಲ್ ಪ್ರವೇಶಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry