ಬ್ರಿಟನ್ ಶಾಲೆಗಳಲ್ಲಿ ಚಾಕು, ಚೂರಿ

ಬುಧವಾರ, ಮೇ 22, 2019
29 °C

ಬ್ರಿಟನ್ ಶಾಲೆಗಳಲ್ಲಿ ಚಾಕು, ಚೂರಿ

Published:
Updated:

ಲಂಡನ್ (ಐಎಎನ್‌ಎಸ್): ಬ್ರಿಟನ್‌ನ ಹಲವಾರು ಶಾಲಾ ಮಕ್ಕಳು ಆತ್ಮರಕ್ಷಣೆಗಾಗಿ ಚಾಕು, ಚೂರಿಗಳನ್ನು ತಮ್ಮಂದಿಗೆ ಶಾಲೆಗೆ ಕೊಂಡೊಯ್ಯುವ ಪ್ರವೃತ್ತಿ ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚಾಗುತ್ತಿದೆ.ಶಾಲಾ ಆವರಣ ಮತ್ತು ಶಾಲೆಗೆ ಹೋಗಿ ಬರುವ ಮಾರ್ಗ ಮಧ್ಯೆ ತಾವು ಸುರಕ್ಷಿತವಾಗಿಲ್ಲ ಎಂಬ ಭಾವನೆ ಮಕ್ಕಳಲ್ಲಿ ಮನೆ ಮಾಡಿರುವುದೇ ಈ ಆತಂಕಕಾರಿ ಬೆಳವಣಿಗೆಗೆ ಕಾರಣ ಎಂದು ತಿಳಿದು ಬಂದಿದೆ.ತಮ್ಮ ಸುರಕ್ಷೆಯ ಬಗ್ಗೆ ಭಯಭೀತರಾದ ಕೆಲವು ಮಕ್ಕಳು ಶಾಲೆಯನ್ನೇ ತೊರೆದಿದ್ದಾರೆ ಎಂಬ ಆತಂಕಕಾರಿ ಬೆಳವಣಿಗೆಯನ್ನು `ಚಿಂತಕರ ಚಾವಡಿ~ಯೊಂದು ನಡೆಸಿದ ಅಧ್ಯಯನ ವರದಿಯು ಬಹಿರಂಗಗೊಳಿಸಿದೆ.

ವಿದ್ಯಾರ್ಥಿಗಳಲ್ಲಾಗುತ್ತಿರುವ ಆತಂಕಕಾರಿ ಬೆಳವಣಿಗೆಗೆ ಕಾರಣಗಳನ್ನೂ ಈ ಅಧ್ಯಯನವು ಪತ್ತೆ ಮಾಡಿದೆ.ಮಕ್ಕಳ ವರ್ತನೆಗೆ ಮುಖ್ಯವಾಗಿ ಅವರು ಬೆಳೆಯುತ್ತಿರುವ ಪರಿಸರ ಮತ್ತು ಕೌಟುಂಬಿಕ ಸಂಸ್ಕೃತಿಯೇ ಕಾರಣ ಎಂದು ಗುರುತಿಸಲಾಗಿದೆ. ಪ್ರತ್ಯೇಕವಾಗಿ ವಾಸಿಸುವ ತಂದೆ, ತಾಯಿ, ಕೌಟುಂಬಿಕ ಕಲಹ ಮತ್ತು ದೌರ್ಜನ್ಯ ಎಳೆಯ ವಯಸ್ಸಿನ ಮಕ್ಕಳ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತಿವೆ.ಹಲವಾರು ಕಾರಣಗಳಿಂದ ಪತಿ ಹಾಗೂ ಪತ್ನಿ ಪ್ರತ್ಯೇಕವಾಗಿ ವಾಸಿಸುವುದರಿಂದ ಶೇ 75ರಷ್ಟು ಮಕ್ಕಳು ಪೋಷಕರ ಪ್ರೀತಿಯನ್ನು ಒಟ್ಟಿಗೆ ಅನುಭವಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಇದರ ಪರಿಣಾಮ ಅವರ ಸಹಜ ವರ್ತನೆಯಲ್ಲಿ ವ್ಯಾಪಕ ಬದಲಾವಣೆ ತಂದಿದೆ. ಎಳೆ ವಯಸ್ಸಿನಲ್ಲಿಯೇ ತಾವು ಅಸುರಕ್ಷಿತ ಎಂಬ ಭಾವನೆಯಿಂದ ಬಳಲುವಂತಾಗಿದೆ ಎನ್ನುತ್ತದೆ ವರದಿ.ಪ್ರಾಥಮಿಕ ಶಾಲೆಗಳ ಮಕ್ಕಳಲ್ಲೂ `ಗ್ಯಾಂಗ್ ಸಂಸ್ಕೃತಿ~ ಮಿತಿ ಮೀರಿದೆ. ಸಮವಸ್ತ್ರದ ಬದಲು ಮಕ್ಕಳು ತಮ್ಮ ಗಲ್ಲಿಗಳ ಗ್ಯಾಂಗ್ ಉಡುಪು ಧರಿಸಿ ಶಾಲೆಗೆ ಬರುತ್ತಿದ್ದಾರೆ. ಏಳರಿಂದ ಹನ್ನೊಂದು ವರ್ಷದ ವಯೋಮಿತಿಯ ಮಕ್ಕಳು ಹೆಚ್ಚಾಗಿ `ಗ್ಯಾಂಗ್ ಸಂಸ್ಕೃತಿ~ಯ ಪ್ರಭಾವಕ್ಕೆ ಮಾರು ಹೋಗುತ್ತಿದ್ದಾರೆ. ಬಹುತೇಕ ಶಿಕ್ಷಣ ಸಂಸ್ಥೆಗಳು ಈ ವಿಷಯವನ್ನು ಗೌಪ್ಯವಾಗಿ ಇಟ್ಟಿವೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry