ಭಾನುವಾರ, ಮೇ 16, 2021
26 °C

ಬ್ಲೂ ಟೈಗರ್‌ನ ಜೀವನ ಕೌಶಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೌಕರಿಗೆ ಕರೆ ಬಂದಾಗ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ. ಭವಿಷ್ಯ ನಿರ್ಧಾರವಾಗುವುದು ಅಲ್ಲಿಯೇ. ಆದರೆ ಬಹುತೇಕ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಸರಿಯಾಗಿ ಎದುರಿಸುವ ಕಲೆಯೇ ಗೊತ್ತಿರುವುದಿಲ್ಲ. ಹೀಗಾಗಿ ಶೈಕ್ಷಣಿಕ ಅರ್ಹತೆ ಇದ್ದರೂ ಸೋಲುತ್ತಾರೆ. ಇಂಥವರಿಗಾಗಿಯೇ 6 ವಾರಗಳ `ಮಾರ್ಗದರ್ಶನ ಮತ್ತು ಜೀವನ ಕೌಶಲ ಕಾರ್ಯಕ್ರಮ~ ರೂಪಿಸಿದೆ ತರಬೇತಿ ಮತ್ತು ಸಲಹಾ ಸೇವೆಗಳನ್ನು ಒದಗಿಸುವ ಬ್ಲೂ ಟೈಗರ್.

`ಫಾಸ್ಟ್ ಟ್ರಾಕ್- ಉದ್ಯೋಗ ಖಾತರಿ~ ಎಂಬ ಈ ಕಾರ್ಯಕ್ರಮ ಉದ್ಯೋಗಾಕಾಂಕ್ಷಿಗಳು ತಮ್ಮ ಇಷ್ಟದ ಉದ್ಯೋಗ ಪಡೆಯಲು ಬೇಕಾದ ಪೂರ್ವ ಸಿದ್ಧತೆ, ಸಂದರ್ಶನ ಎದುರಿಸುವುದು ಮುಂತಾದ ವಿಷಯದಲ್ಲಿ ತರಬೇತಿ ನೀಡಲಿದೆ.

ಉದ್ಯೋಗ ಕ್ಷೇತ್ರದಲ್ಲಿ ಯಶಸ್ವಿಯಾಗಲು ಬೇಕಿರುವ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಉದ್ಯಮದ ತಜ್ಞರು ಈ ತರಬೇತಿ ರೂಪಿಸಿದ್ದಾರೆ. ಇಲ್ಲಿ ಅಭ್ಯರ್ಥಿಗಳು ಸಂದರ್ಶನಗಳನ್ನು ಸಮರ್ಥವಾಗಿ ಎದುರಿಸುವ ಕಲೆ ಮಾತ್ರವಲ್ಲದೆ ವೃತ್ತಿ ಬದುಕಿನಲ್ಲೂ ಸಾಧನೆ ಮಾಡಲು ನೆರವಾಗುವ ಅಂಶಗಳನ್ನು ಹೇಳಿಕೊಡಲಾಗುತ್ತದೆ ಎನ್ನುತ್ತಾರೆ ಬ್ಲೂ ಟೈಗರ್‌ನ ಸಿಇಒ ಸಂಪತ್ ಅಯ್ಯಂಗಾರ್.

`ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿದೆ ಎಂಬುದು ನಮಗೆಲ್ಲಾ ಗೊತ್ತು. ಆದರೆ ಅದೊಂದೇ ಸಾಲದು. ಆದರೆ ಸೂಕ್ತ ವೃತ್ತಿ ಆಯ್ಕೆ ಮಾಡಲು ಸೂಕ್ತ ತರಬೇತಿಯೂ ಬೇಕು. ಕೆಲಸ ಸಿಕ್ಕ ಬಳಿಕ ವೃತ್ತಿ ಕೌಶಲವನ್ನೂ ಪ್ರದರ್ಶಿಸಿದರೆ ಜೀವನದಲ್ಲಿ ಮುಂದೆ ಬರಬಹುದು~ ಎಂದು ಅವರು ಹೇಳುತ್ತಾರೆ. ಎಂದರು.

ಫಾಸ್ಟ್ ಟ್ರಾಕ್ ಉದ್ಯೋಗ ಖಾತರಿ ಮತ್ತು ವೃತ್ತಿ ಆಧಾರಿತ ಇತರ ತರಬೇತಿಗಳ ಬಗೆಗಿನ ವಿವರಗಳಿಗೆ www.bluetiger.in  ಅಥವಾ  92436 22152 ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.