ಶಿವಮೊಗ್ಗ: ಮಾಹಿತಿ ತಂತ್ರಜ್ಞಾನ ಬೆಳೆದ ನಂತರ ಇಂಟರ್ನೆಟ್ ಬಳಕೆ ವ್ಯಾಪಕವಾಗಿದೆ. ಇಂದು ಎಲ್ಲಾ ಕ್ಷೇತ್ರಗಳೂ ಮಾಹಿತಿ ತಂತ್ರಜ್ಞಾನವನ್ನೇ ಅವಲಂಬಿಸಿವೆ. ಸಮಾಜಘಾತುಕ ಶಕ್ತಿಗಳೂ ಸಮಾಜ ವಿರೋಧಿ ಚಟುವಟಿಕೆಗಳನ್ನು ನಡೆಸಲು ಇಂಟರ್ನೆಟ್ ಬಳಸಿಕೊಳ್ಳುತ್ತಿವೆ. ಸೈಬರ್ಕೆಫೆಗಳು ಇಂತಹ ಶಕ್ತಿಗಳಿಗೆ ಸುಲಭವಾಗಿ ಇಂಟರ್ನೆಟ್ ಸೌಲಭ್ಯ ಸಿಗುವ ತಾಣಗಳಾಗಿವೆ.

ಇದು ಸೈಬರ್ ಅಪರಾಧಗಳು ಮತ್ತಷ್ಟು ಹೆಚ್ಚಲು ಕಾರಣವೂ ಆಗಿ, ದೇಶದ ರಕ್ಷಣಾ ವ್ಯವಸ್ಥೆಗೆ ಮಾರಕವಾಗಿವೆ. ಪೊಲೀಸ್ ಇಲಾಖೆ ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ದಿಟ್ಟ ಕ್ರಮಕೈಗೊಂಡಿದೆ. ಇದಕ್ಕಾಗಿ ಜಿಲ್ಲೆಯ ಸೈಬರ್ ಕೆಫೆಗಳಿಗೆ `ಕ್ಲಿಂಕ್' ಎಂಬ ಭದ್ರತಾ ಸಾಫ್ಟ್ವೇರ್ ಅನ್ನು ಉಚಿತವಾಗಿ ಅಳವಡಿಸಲಾಗಿದೆ.

`ಕ್ಲಿಂಕ್' ಸಾಫ್ಟ್ವೇರ್ ನೆರವಿನಿಂದ ಸೈಬರ್ ಕೆಫೆಗೆ ಭೇಟಿ ನೀಡುವ ಗ್ರಾಹಕರ ಮಾಹಿತಿಯನ್ನು ನೇರವವಾಗಿ ಸರ್ವರ್ ಮೂಲಕ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸೈಬರ್ಕೆಫೆಗಳು ದುರ್ಬಳಕೆ ಆಗದಂತೆ ತಡೆಯುವ ಪ್ರಯತ್ನ ನಡೆದಿದೆ. ದುರ್ಬಳಕೆ ಮಾಡಿದವರನ್ನು ಪತ್ತೆಹಚ್ಚಲೂ ಇದರಿಂದ ಅನುಕೂಲವಾಗಿದೆ.

`ಕ್ಲಿಂಕ್' ಸಾಫ್ಟ್ವೇರ್ ಅನ್ನು ಸೈಬರ್ ಕೆಫೆಗಳಿಗೆ ಉಚಿತವಾಗಿ ಅಳವಡಿಸುವ ಮೂಲಕ ಪೊಲೀಸ್ ಇಲಾಖೆ ಪರಿಣಾಮಕಾರಿ ಯೋಜನೆಗೆ 2011ರ ಡಿಸೆಂಬರ್ನಲ್ಲೇ ಚಾಲನೆ ನೀಡಿದೆ. ಆದರೆ, ಈ ಯೋಜನೆ ಜಾರಿ ಆದಷ್ಟೇ ವೇಗವಾಗಿ ಮೂಲೆಗುಂಪಾಗಿದೆ. ಸೈಬರ್ ಕೆಫೆ ಮಾಲೀಕರು ಈ ಸಾಫ್ಟ್ವೇರ್ ಬಳಸುವುದಕ್ಕೆ ನಿರಾಸಕ್ತಿ ವಹಿಸುತ್ತಿದ್ದಾರೆ.

ಜಿಲ್ಲೆಯಾದ್ಯಂತ ಸುಮಾರು 250 ಕ್ಕೂ ಹೆಚ್ಚು ಸೈಬರ್ ಕೆಫೆಗಳು ಇದ್ದು, ಶೇಕಡ 80 ರಷ್ಟು ಸೈಬರ್ ಕೆಫೆಗಳಲ್ಲಿ ಈಗಾಗಲೇ ಕೆಲ ತಾಂತ್ರಿಕ ತೊಂದರೆಗಳ ಕಾರಣ ನೀಡಿ, `ಕ್ಲಿಂಕ್' ಸಾಫ್ಟ್ವೇರ್ ಬಳಕೆಯನ್ನು ಕೈಬಿಡಲಾಗಿದೆ. ಇದು ಸೈಬರ್ ಕೆಫೆಗಳು ದುಷ್ಕೃತ್ಯಗಳಿಗೆ ಸುಲಭವಾಗಿ ಬಳಕೆ ಆಗುವ ಆತಂಕ ಉಂಟುಮಾಡಿದೆ.

`ಕ್ಲಿಂಕ್' ಸಾಫ್ಟ್ವೇರ್ ಭದ್ರತಾ ದೃಷ್ಟಿಯಿಂದ ಉತ್ತಮವಾದುದು. ಆದರೆ, ಸಾಫ್ಟ್ವೇರ್ ಇನ್ಸ್ಟಾಲ್ ಮಾಡಿದ ನಂತರ ಕಂಪ್ಯೂಟರ್ ಕಾರ್ಯ ಕ್ಷಮತೆ ಕುಂಠಿತವಾಗಿದೆ. ಪ್ರತಿ 5 ನಿಮಿಷಗಳಿಗೆ ಒಮ್ಮೆ ಕಂಪ್ಯೂಟರ್ ಹ್ಯಾಂಗ್ ಆಗುತ್ತದೆ ಎಂದು ಗ್ರಾಹಕರು ದೂರುತ್ತಿದ್ದರು. ಇದರಿಂದ, ಸೈಬರ್ ಕೆಫೆಗಳು `ಕ್ಲಿಂಕ್' ಸಾಫ್ಟ್ವೇರ್ ಬಳಕೆ ನಿಲ್ಲಿಸುತ್ತಿವೆ ಎನ್ನುತ್ತಾರೆ ಶಿವಮೊಗ್ಗ ಜಿಲ್ಲಾ ಸೈಬರ್ಕೆಫೆ ಮಾಲೀಕರ ಸಂಘದ ಅಧ್ಯಕ್ಷ ಜಿ.ಬಿ.ಸುರೇಶ್.

`ಐಡಿಯಾಕ್ಟ್ಸ್ ಸಲೂಷನ್ ಎಂಬ ಕಂಪೆನಿ `ಕ್ಲಿಂಕ್' ಸಾಫ್ಟ್ವೇರ್ ನಿರ್ವಹಣೆ ಮಾಡು ತ್ತಿದ್ದು, ಕಂಪೆನಿ ಇಂಟರ್ನೆಟ್ನಲ್ಲಿ ಜಾಹೀರಾತು ಗಳನ್ನು ಅತಿಯಾಗಿ ಹರಿಬಿಡುತ್ತದೆ. ಇದು ಬ್ರೌಸಿಂಗ್ ಮಾಡಲು ಅಡಚಣೆ ಉಂಟು ಮಾಡುತ್ತದೆ. ಅಲ್ಲದೆ, ಕಂಪ್ಯೂಟರ್ಗಳಲ್ಲಿ ನಮಗೆ ಉಪಯೋಗಕ್ಕೆ ಬಾರದ, ಅವಶ್ಯಕತೆ ಇಲ್ಲದ ಅಪ್ಲಿಕೇಶನ್ಗಳನ್ನು ಅಳವಡಿಸಲಾಗಿದೆ.

ನಮಗೆ ಬೇಕಿರುವ ಅಪ್ಲಿಕೇಶನ್ಗಳನ್ನು ಬಳಸುವ ಅವಕಾಶಗಳನ್ನೂ ಇದು ನೀಡಿಲ್ಲ. `ಕ್ಲಿಂಕ್' ನ ದೋಷಗಳನ್ನು ನಿವಾರಿಸಿ 2ನೇ ಸುಧಾರಿತ ಆವೃತ್ತಿ ಬಿಡುಗಡೆ ಮಾಡಿದರೆ ಖಂಡಿತವಾಗಿ ಸೈಬರ್ ಕೆಫೆಗಳು ಅಳವಡಿಸಿಕೊಳ್ಳುತ್ತವೆ' ಎನ್ನುತ್ತಾರೆ ಅವರು.

ಏನಿದು `ಕ್ಲಿಂಕ್' ಸಾಫ್ಟ್ವೇರ್
ಐಡಿಯಾಕ್ಸ್ ಇನ್ನೋವೇಷನ್ ಎಂಬ ಕಂಪೆನಿ ಈ ಕ್ಲಿಂಕ್ ಸಾಫ್ಟ್ವೇರ್ ಅನ್ನು ನಿರ್ವಹಣೆ ಮಾಡುತ್ತಿದೆ. ಇದೊಂದು ಸೈಬರ್ ಭದ್ರತೆ ಮತ್ತು ನಿರ್ವಹಣೆ ಮಾಡುವ ಸಾಫ್ಟ್ವೇರ್ ಆಗಿದೆ.

`ಕ್ಲಿಂಕ್' ಸಾಫ್ಟ್ವೇರ್ ಬಳಸುವ ಬಳಕೆ ದಾರರು ಮೊದಲು ತಮ್ಮ ಖಾತೆ ರಚಿಸಬೇಕು. ಇದಕ್ಕೆ ತಮ್ಮ ವೈಯಕ್ತಿಕ ಗುರುತಿನ ವಿವರಗಳು ಇರುವ ಚುನಾವಣಾ ಗುರುತು ಚೀಟಿ, ಚಾಲನಾ ಪರವಾನಗಿ ಹಾಗೂ ಇತರ ವಿವರಗಳನ್ನು ನೀಡಿ, ಯೂಸರ್ ಐಡಿ ಮತ್ತು ಪಾಸ್ವರ್ಡ್ ಪಡೆಯಬೇಕು. ಹೀಗೆ ಖಾತೆ ತೆರೆದ ನಂತರ `ಕ್ಲಿಂಕ್' ಸಾಫ್ಟ್ವೇರ್ ಅಳವಡಿಸಿರುವ ಸೈಬರ್ಕೆಫೆಗಳಲ್ಲಿ ಗುರುತಿನ ವಿವರ ನೀಡದೆ ಇಂಟರ್ನೆಟ್ ಬಳಸುವ ಅವಕಾಶವನ್ನು ಇದು ಒಳಗೊಂಡಿದೆ.

`ಕ್ಲಿಂಕ್' ಸಾಫ್ಟ್ವೇರ್ ಬಳಕೆದಾರರ ವಿವರಗಳನ್ನು ನೇರವಾಗಿ ಸರ್ವರ್ನಲ್ಲಿ ದಾಖಲೆ ಮಾಡಿಕೊಳ್ಳುತ್ತದೆ. ವಿಚಾರಣೆಯ ಅವಶ್ಯಕತೆ ಇದ್ದಲ್ಲಿ ಪೊಲೀಸ್ ಇಲಾಖೆ ನೇರವಾಗಿ ಸರ್ವರ್ ಮೂಲಕ ವಿಚಾರಣೆ ಕೈಗೊಳ್ಳಬಹುದು. ಇದರಿಂದ ಸೈಬರ್ಕೆಫೆ ಮಾಲೀಕರು ಪ್ರತ್ಯೇಕವಾಗಿ ಗ್ರಾಹಕರ ವಿವರಗಳನ್ನು ಸಂಗ್ರಹಿಸುವ ಅವಶ್ಯಕತೆ ತಪ್ಪಿದೆ.

ಏಕೆ `ಕ್ಲಿಂಕ್' ಸಾಫ್ಟ್ವೇರ್ ಬಳಕೆ?
ದೇಶದಲ್ಲಿ ಸೈಬರ್ ಕೆಫೆ ಬಳಸಿಕೊಂಡು ಮಾಡುವ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾದಾಗ ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಸೈಬರ್ ಕೆಫೆಗಳಿಗೆ ಅನುಸರಿಸಬೇಕಾದ ಮಾರ್ಗ ಸೂಚಿಗಳನ್ನು ಏ.11, 2011 ರಂದು ಜಾರಿ ಮಾಡಿದೆ.

ಈ ಮಾರ್ಗ ಸೂಚಿಯಂತೆ ಸೈಬರ್ ಕೆಫೆಗಳಲ್ಲಿ ಇಂಟರ್ನೆಟ್ ಬಳಕೆ ಮಾಡಿದ ಗ್ರಾಹಕರ ವಿವರಗಳನ್ನು ಸಂಗ್ರಹಿಸಿ, ಅದನ್ನು 1ವರ್ಷ ಅವಧಿ ವರೆಗೆ ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಹಾಗೂ ಪ್ರತಿ ತಿಂಗಳು ಕಾನೂನು ಜಾರಿ ಪ್ರಾಧಿಕಾರಕ್ಕೆ ವಿವರಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ.

ಇದರಂತೆ, ಸೈಬರ್ಕೆಫೆಗಳು ಭೌತಿಕವಾಗಿ ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದವು. ಇದರಲ್ಲಿ ಲೋಪದೋಷಗಳು ಇದ್ದ ಕಾರಣ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ `ಕ್ಲಿಂಕ್' ಎಂಬ ಸೈಬರ್ ಭದ್ರತೆ ಮತ್ತು ನಿರ್ವಹಣಾ ಸಾಫ್ಟ್ವೇರ್ ಅನ್ನು ಡಿಸೆಂಬರ್ 2011ರಲ್ಲಿ ಅಳವಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.