ಶನಿವಾರ, ಮೇ 15, 2021
23 °C
ಕಳಸದಲ್ಲಿ ಮಳೆ ಬಿರುಸು

ಭದ್ರಾನದಿ ನೀರಿನ ಮಟ್ಟ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ಹೋಬಳಿಯಾದ್ಯಂತ ಕಳೆದ ವಾರದಿಂದ ಸತತವಾಗಿ ಭಾರಿ ಮಳೆ ಸುರಿಯುತ್ತಿದೆ.ಜೂನ್ 8ರಂದು ಆರಂಭಗೊಂಡ ಮಳೆಯು ಪ್ರತಿದಿನವೂ ಹದವಾಗಿ ಸುರಿಯುತ್ತಿದೆ. ಕಳೆದ ವರ್ಷ ಮಳೆಯ ಪ್ರಮಾಣ ಕೇವಲ 95 ಅಂಗುಲ ಆಗಿತ್ತು.  ಆದರೆ ಈಗಾಗಲೇ ಬಾರಿ ಈಗಾಗಲೇ 20 ಅಂಗುಲ ಮಳೆ ಆಗಿದ್ದು, ವಾಡಿಕೆಯ 120 ಅಂಗುಲಕ್ಕೆ ಏರಬಹುದು ಎಂಬ ನಂಬಿಕೆ ಮೂಡಿಸಿದೆ.ಮಳೆಯ ಜತೆಗೆ ಆಗಾಗ್ಗೆ ಬೀಸುವ ರಭಸವಾದ ಗಾಳಿಯು ಚಳಿ ಹೆಚ್ಚಿಸಿದೆ. ಕಾಫಿ ತೋಟಗಳಲ್ಲಿ ಮರಗಳು ನೆಲಕ್ಕೆ ಉರುಳಿದರೆ ಅಡಿಕೆ ತೋಟಗಳಲ್ಲಿ ಅಡಿಕೆ ಮರಗಳೂ, ಬಾಳೆ ಗಿಡಗಳು ಮುರಿದು ಬಿದ್ದಿವೆ.   ಮಳೆಯಿಂದಾಗಿ ಬತ್ತದ ಕೃಷಿ ಚುರುಕಾಗಿದ್ದು, ಗದ್ದೆಯಲ್ಲಿ ಉಳುಮೆ, ಅಗಡಿಯ ಕೆಲಸಗಳು ನಡೆದಿವೆ.ಆದರೆ ಮಳೆಯು ಕಾಫಿ ತೋಟದಲ್ಲಿ ಕೆಲಸವನ್ನು ಬಹುತೇಕ ಸ್ಥಗಿತಗೊಳಿಸಿದೆ. ಕಾಫಿ ಗಿಡಗಳಿಗೆ ಗೊಬ್ಬರ ನೀಡುವ ಮತ್ತು ಕಾಫಿ ಗಿಡ ಕಸಿ ಮಾಡುವ ಬೇಸಿಗೆ ಕಾಲದ ಕೆಲಸಗಳು ಈ ಬಾರಿ ಬಹುತೇಕ ತೋಟಗಳಲ್ಲಿ ಮುಗಿದಿಲ್ಲ. ಮಳೆಯಲ್ಲಿ ಈ ಕೆಲಸಗಳು ಅಸಾಧ್ಯವಾಗಿರುವುದರಿಂದ ಕೆಲ ಬೆಳೆಗಾರರು ಸಹಜ ಕಾಫಿ ಕೃಷಿ ಪ್ರಯೋಗಕ್ಕೆ ಕೈಹಾಕಿದಂತಾಗಿದೆ.ಮಳೆ ಬಿಡುವು ನೀಡಿದರೆ ಅಡಿಕೆ ಕೊಳೆ ರೋಗಕ್ಕೆ ಔಷಧಿ ಸಿಂಪಡಿಸುವ ಕೆಲಸ ತುರ್ತಾಗಿ ನಡೆಯಬೇಕಿದೆ. ಮಳೆಯು ಚಹಾತೋಟದಲ್ಲಿ ಭರ್ಜರಿ ಸೊಪ್ಪು ಚಿಗುರಿಸಿದೆ. ಆದರೆ ಸೊಪ್ಪು ಕೊಯ್ಯಲು ಕಾರ್ಮಿಕರ ಕೊರತೆಯಿಂದಾಗಿ ಉತ್ಪತ್ತಿ ಕೈ ಸೇರದೆ ನಷ್ಟವಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.