ಭಾನುವಾರ, ಫೆಬ್ರವರಿ 28, 2021
31 °C

ಭಾರತದ ಟಿಂಟು ಲೂಕಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ಟಿಂಟು ಲೂಕಗೆ ನಿರಾಸೆ

ರಿಯೊ ಡಿ ಜನೈರೊ (ಪಿಟಿಐ): ಭಾರತದ ಟಿಂಟು ಲೂಕ ಜಾಗತಿಕಮಟ್ಟದಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ಮತ್ತೊಮ್ಮೆ ವಿಫಲರಾಗಿದ್ದು, ಮಹಿಳೆಯರ 800 ಮೀ. ಓಟದ ಸ್ಪರ್ಧೆಯ ಹೀಟ್ಸ್‌ನಲ್ಲೇ ಹೊರಬಿದ್ದಿದ್ದಾರೆ.ಬುಧವಾರ ಮೂರನೇ ಹೀಟ್ಸ್‌ನಲ್ಲಿ ಓಡಿದ ಅವರು 2 ನಿಮಿಷ 00.58 ಸೆಕೆಂಡುಗಳಲ್ಲಿ ಗುರಿಮುಟ್ಟಿ ಆರನೇ ಸ್ಥಾನ ಪಡೆದರು. 65 ಸ್ಪರ್ಧಿಗಳಲ್ಲಿ ಅವರಿಗೆ ಒಟ್ಟಾರೆಯಾಗಿ 29ನೇ ಸ್ಥಾನ ಲಭಿಸಿತು.800 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ (1 ನಿಮಿಷ 59.17 ಸೆ.) ಟಿಂಟು ಹೆಸರಿನಲ್ಲಿದೆ. ಅವರು 2010 ರಲ್ಲಿ ಈ ಸಮಯ ದಾಖಲಿಸಿದ್ದರು. ಆದರೆ ಅದನ್ನು ಉತ್ತಮಪಡಿಸಲು ವಿಫಲರಾದರು.ಟಿಂಟು ಸುಮಾರು 600 ಮೀ. ವರೆಗೆ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಕೊನೆಯ 200 ಮೀ.ನಲ್ಲಿ ಅವರಿಗೆ ಅದೇ ವೇಗ ಕಾಪಾಡಿಕೊಳ್ಳಲು ಆಗಲಿಲ್ಲ. ಐವರು ಸ್ಪರ್ಧಿಗಳು ಅವರನ್ನು ಹಿಂದಿಕ್ಕಿ ಗುರಿಯತ್ತ ಮುನ್ನಡೆದರು.ಒಟ್ಟು ಎಂಟು ಹೀಟ್ಸ್‌ಗಳು ನಡೆದವು. ಪ್ರತಿ ಹೀಟ್ಸ್‌ನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದವರು ಹಾಗೂ ಅತ್ಯುತ್ತಮ ಸಮಯ ದಾಖಲಿ ಸಿದ ಇತರ ಎಂಟು ಅಥ್ಲೀಟ್‌ಗಳು ಸೆಮಿಫೈನಲ್ಸ್‌ಗೆ ಮುನ್ನಡೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.