ನ್ಯೂಯಾರ್ಕ್ (ಪಿಟಿಐ): ಮನೆ ಕೆಲಸದವಳಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತದ ರಾಜತಾಂತ್ರಿಕ ಅಧಿಕಾರಿ ಮತ್ತು ಅವರ ಪತಿ 15 ಲಕ್ಷ ಡಾಲರ್ ಪರಿಹಾರ ನೀಡಬೇಕು ಎಂಬ ನ್ಯಾಯಾಧೀಶರ ಶಿಫಾರಸಿಗೆ ಇದುವರೆಗೆ ಆಕ್ಷೇಪಣೆ ಬಾರದಿರುವುದರಿಂದ ಶಿಫಾರಸೇ ತೀರ್ಪಾಗಲಿದೆ.

ರಾಜತಾಂತ್ರಿಕ ಅಧಿಕಾರಿ ನೀನಾ ಮಲ್ಹೋತ್ರಾ ಮತ್ತು ಅವರ ಪತಿ ಜೋಗೇಶ್ ಅವರು ತಮ್ಮ ಮನೆ ಕೆಲಸದಲ್ಲಿದ್ದ ಶಾಂತಿ ಗುರುಂಗ್ಗೆ ಕಿರುಕುಳ ನೀಡಿ ದೌರ್ಜನ್ಯ ಎಸಗಿರುವುದರಿಂದ ಪರಿಹಾರವಾಗಿ 15 ಲಕ್ಷ ಡಾಲರ್ ನೀಡಬೇಕು ಎಂದು ನ್ಯೂಯಾರ್ಕ್ನ ಜಿಲ್ಲಾ ನ್ಯಾಯಾಧೀಶರಾದ ವಿಕ್ಟರ್ ಮೆರಾರೊ ಅವರು ಕಳೆದ ಫೆಬ್ರುವರಿ 22ರಂದು ಶಿಫಾರಸು ಮಾಡಿದ್ದರು.

ಈ ಶಿಫಾರಸಿಗೆ ಆಕ್ಷೇಪ ವ್ಯಕ್ತಪಡಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ನಿಗದಿತ ಸಮಯದಲ್ಲಿ ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಿಲ್ಲ.

ಆದ್ದರಿಂದ ನ್ಯಾಯಾಧೀಶರ ಶಿಫಾರಸು ತೀರ್ಪಾಗಿ ಮಾರ್ಪಾಡಾಗುತ್ತದೆ ಎಂದು ಶಾಂತಿ ಪರ ವಕೀಲರಾದ ಮೈಕೆಲ್ ಕರ್ಲಾನ್ ಅವರು ತಿಳಿಸಿದ್ದಾರೆ.

ಮ್ಯಾನ್ಹಟನ್ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಯಲ್ಲಿ ನೀನಾ ಮಲ್ಹೋತ್ರಾ ಅವರು ಮಾಧ್ಯಮ, ಸಂಸ್ಕೃತಿ, ಮಾಹಿತಿ, ಶಿಕ್ಷಣ ಮತ್ತು ಸಮುದಾಯ ವ್ಯವಹಾರಗಳ ಸಮಾಲೋಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ನೀನಾ ಮತ್ತು ಅವರ ಪತಿ ತನಗೆ ನಿಗದಿಪಡಿಸಿದ ಸಂಬಳವನ್ನು ನೀಡಿಲ್ಲ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಹಾಗೂ ಪಾಸ್ಪೋರ್ಟ್ನ್ನು ವಶಪಡಿಸಿಕೊಂಡ್ದ್ದಿದಾರೆ ಎಂದು ಶಾಂತಿ ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.