‘ಭಾರತದಲ್ಲಿ ಎಲ್ಲ ರೀತಿಯ ಜನರೂ ಇದ್ದಾರೆ. ಅವರೆಲ್ಲವೂ ಭಾರತದ ಬಹುಸಂಸ್ಕೃತಿಯ ಭಾಗ. ಆದ್ದರಿಂದ ಈ ದೇಶವನ್ನು ಸಹಿಷ್ಣು–ಅಸಹಿಷ್ಣು ಹೀಗೆ ಯಾವುದೇ ಒಂದು ರೀತಿಯ ಹಣೆ ಪಟ್ಟಿ ಹಚ್ಚಿ ನೋಡುವುದು ಸಾಧ್ಯವಿಲ್ಲ’ ಎಂದು ಜನಪ್ರಿಯ ಹಾಸ್ಯನಟ ಸೈರಸ್ ಸಾಹುಕಾರ್ ಅಭಿಪ್ರಾಯಪಟ್ಟಿದ್ದಾರೆ.

‘ಛಾಲೆಂಜ್ ಅಕ್ಸೆಪ್ಟೆಡ್’ ಎಂಬ ಕಿರುತೆರೆ ಹಾಸ್ಯ ಕಾರ್ಯಕ್ರಮದ ಮೂಲಕ ಜನಪ್ರಿಯರಾದ ಸೈರಸ್ ಇತ್ತೀಚೆಗೆ ದೆಹಲಿಯಲ್ಲಿ ಐಎಎನ್ಎಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೀಗೆ ಹೇಳಿದ್ದಾರೆ.

‘ಭಾರತ ಅಸಹಿಷ್ಣು ಎಂದು ಹೇಗೆ ಹೇಳುತ್ತೀರಿ? ಇದು ಬಹುಸಂಸ್ಕೃತಿ ದೇಶ. ಈ ಒಂದು ದೇಶದ ಒಳಗೇ ಹಲವು ಉಪಭಾರತಗಳಿವೆ. ಇದು ವಿಶಾಲವಾದ ದೇಶ. ಇಲ್ಲಿ ತೀವ್ರ ಅಸಹಿಷ್ಣುಗಳು ಇದ್ದಾರೆ ಎನ್ನುವುದು ನಿಜ. ಆದರೆ ಅವರ ಅಸಹಿಷ್ಣುತೆಗೆ ಪ್ರಬಲವಾಗಿ ವಿರೋಧ ವ್ಯಕ್ತಪಡಿಸುವ ಸಹಿಷ್ಣುಗಳೂ ಸಾಕಷ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಅಸಹಿಷ್ಣುಗಳ ಒಂದು ಗುಂಪಿದೆ. ಆದರೆ ಅದಕ್ಕ ಪ್ರತಿರೋಧ ಒಡ್ಡುವವರೂ ಇಲ್ಲಿದ್ದಾರೆ. ಆದ್ದರಿಂದ ಇಷ್ಟು ವೈವಿಧ್ಯಮಯ ಜಾತಿ, ದೃಷ್ಟಿಕೋನ, ನಂಬಿಕೆಗಳು ಇರುವಂತಹ ಭಾರತಕ್ಕೆ ಯಾರೂ ಅಸಹಿಷ್ಣು ದೇಶ ಎಂದು ಹಣೆಪಟ್ಟಿ ಹಚ್ಚಲು ಸಾಧ್ಯವಿಲ್ಲ’ ಎಂದು ಸೈರಸ್ ಖಡಾಖಂಡಿತವಾಗಿ ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.