ಬೆಂಗಳೂರು: ಭಾರತ ಅಂಧರ ಕ್ರಿಕೆಟ್ ತಂಡವು ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ಸರಣಿಯನ್ನಾಡಲು ನವೆಂಬರ್ 14 ರಂದು ಪಾಕಿಸ್ತಾನ ಪ್ರವಾಸ ಬೆಳಸಲಿದೆ ಎಂದು ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ನಾಗೇಶ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನವೆಂಬರ್ 18ರಿಂದ 26ರ ವರೆಗೆ ಲಾಹೋರ್ ಹಾಗೂ ಇಸ್ಲಾಮಾಬಾದ್ನಲ್ಲಿ ಈ ಸರಣಿ ನಡೆಯಲಿವೆ. ಪ್ರವಾಸಿ ತಂಡ ಆತಿಥೇಯ ಪಾಕಿಸ್ತಾನದ ಎದುರು ಮೂರು ಏಕದಿನ ಹಾಗೂ ಮೂರು ಟ್ವೆಂಟಿ- 20 ಪಂದ್ಯಗಳನ್ನು ಆಡಲಿದೆ.

ಕಳೆದ ತಿಂಗಳು ಮೈಸೂರಿನಲ್ಲಿ ನಡೆದ ಅಂತರ ವಲಯ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಈ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ. ನವದೆಹಲಿಯಲ್ಲಿ ನಡೆಯುವ ನಾಲ್ಕು ದಿನಗಳ ತರಬೇತಿ ಶಿಬಿರದ ಬಳಿಕ ಭಾರತ ತಂಡ ಪಾಕ್ಗೆ ಪ್ರಯಾಣ ಕೈಗೊಳ್ಳಲಿದೆ.

ಕರ್ನಾಟಕದ ಶೇಖರ್ ನಾಯಕ್ ಲಚ್ಮಾ ಅವರಿಗೆ ಭಾರತ ತಂಡದ ನಾಯಕ ಸ್ಥಾನದ ಜವಾಬ್ದಾರಿ ಲಭಿಸಿದೆ. ಭಾರತ 2006ರಲ್ಲಿ ಇಸ್ಲಾಮಾಬಾದ್ನಲ್ಲಿ ನಡೆದ ಅಂಧರ ವಿಶ್ವಕಪ್ನಲ್ಲಿ ರನ್ನರ್ ಆಪ್ ಸ್ಥಾನ ಪಡೆದಿತ್ತು.

ಈ ಬಾರಿ ಪ್ರಶಸ್ತಿ ಪಡೆಯುವ ನೆಚ್ಚಿನ ತಂಡವಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಜಿ.ಕೆ. ಮಾಹಾಂತೇಶ್ ವಿಶ್ವಾಸ ವ್ಯಕ್ತಪಡಿಸಿದರು. ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಪಿ.ಎಸ್.ನಾಯ್ಡು ಇತರರು ಉಪಸ್ಥಿತರಿದ್ದರು.ಭಾರತ ಕೈಗೊಳ್ಳುತ್ತಿರುವ ನಾಲ್ಕನೇ ಪಾಕ್ ಪ್ರವಾಸ ಇದಾಗಿದೆ. 2006 ಹಾಗೂ 2010ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತುಈ ವೇಳೆ ಚಾಂಪಿಯನ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.