ಗುರುವಾರ , ಫೆಬ್ರವರಿ 25, 2021
18 °C

ಭಾರತ ವಿಭಜನೆ ಕುರಿತ ಕೃತಿಗೆ ಪ್ರತಿಷ್ಠಿತ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ ವಿಭಜನೆ ಕುರಿತ ಕೃತಿಗೆ ಪ್ರತಿಷ್ಠಿತ ಪ್ರಶಸ್ತಿ

ನ್ಯೂಯಾರ್ಕ್‌ (ಪಿಟಿಐ): ಭಾರತದ ವಿಭಜನೆ ಮತ್ತು ಅದರ ದುಷ್ಪರಿಣಾಮಗಳನ್ನು ಕುರಿತ ‘ಮಿಡ್‌ನೈಟ್ಸ್‌ ಫ್ಯೂರೀಸ್‌: ದಿ ಡೆಡ್ಲಿ ಲೆಗಸಿ ಆಫ್‌ ಇಂಡಿಯಾಸ್‌ ಪಾರ್ಟಿಷಿಯನ್‌’ ಕೃತಿ 2016ನೇ ಸಾಲಿನ ಪ್ರತಿಷ್ಠಿತ ‘ವಿಲಿಯಂ ಇ ಕಾಲ್ಬಿ’ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ.ವಾಷಿಂಗ್ಟನ್ ಮೂಲದ, ಸಿಂಗಪುರ ನಿವಾಸಿ ಲೇಖಕ, ಪತ್ರಕರ್ತ ನಿಸಿದ್‌ ಹಜಾರಿ ಅವರ ಮೊದಲ ಕೃತಿ ಇದು. ‘ಮಿಡ್‌ನೈಟ್ಸ್‌ ಫ್ಯೂರೀಸ್‌...’  1947ರ ಭಾರತದ ವಿಭಜನೆ ಮತ್ತು ಆ ಸಂದರ್ಭದಲ್ಲುಂಟಾದ ಹಿಂಸಾಚಾರದ ಕಥಾ ವಸ್ತುವನ್ನೊಳಗೊಂಡಿದೆ.ಪ್ರಶಸ್ತಿಯು ಸುಮಾರು ₹ 3.40 ಲಕ್ಷ  (5 ಸಾವಿರ ಡಾಲರ್) ಮೊತ್ತವನ್ನೊಳಗೊಂಡಿದೆ. ಪ್ರಶಸ್ತಿಯ ಮೊತ್ತವನ್ನು ಚಿಕಾಗೊ ಮೂಲದ ತೈವಾನ್‌ ಫೌಂಡೇಷನ್‌ ಪ್ರಾಯೋಜಿಸುತ್ತದೆ.‘ಬ್ಲೂಮ್‌ ಬರ್ಗ್ ನ್ಯೂಸ್‌’ ಪತ್ರಿಕೆಯ ಏಷ್ಯಾ ಆವೃತ್ತಿಯ  ಸಂಪಾದಕರಾಗಿರುವ ನಿಸಿದ್‌, ತಮ್ಮ ಅಂಕಣದಲ್ಲಿ  ಏಷ್ಯಾದ ರಾಜಕೀಯ, ಆರ್ಥಿಕ ವಿಶ್ಲೇಷಣೆಗಳನ್ನು ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.