ಭಾನುವಾರ, ಮಾರ್ಚ್ 7, 2021
28 °C

ಭಾವಿ ಅಮ್ಮಂದಿರ ಯೋಗಾ ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾವಿ ಅಮ್ಮಂದಿರ ಯೋಗಾ ಯೋಗ

ಒಂದು ಕುಟುಂಬದ ಆಧಾರಸ್ತಂಭವೇ ತಾಯಿ. ಅವಳು ಪ್ರತಿಫಲಾಪೇಕ್ಷೆ ಇಲ್ಲದೆ ಪ್ರೀತಿಸುತ್ತಾಳೆ. ಅಂತಹ ತಾಯಂದಿರಿಗೆ ನೆರವಾಗಲೆಂದು ಅಪೊಲೋ ಕ್ರೇಡಲ್ ಈಚೆಗೆ ವಿಶೇಷವಾದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಇದು ಅಮ್ಮಂದಿರ ದಿನ ಅಂಗವಾಗಿ ನಡೆದ ಕಾರ್ಯಕ್ರಮ.ಈಗಷ್ಟೇ ತಾಯಿಯಾದವರು ಮತ್ತು ಭಾವಿ ಅಮ್ಮಂದಿರು ಇದರಲ್ಲಿ ಭಾಗವಹಿಸಿದ್ದರು. ಭಾವಿ ತಾಯಂದಿರು ಶಕ್ತಿವಂತ, ಆರೋಗ್ಯವಂತ ಮತ್ತು ಆತ್ಮವಿಶ್ವಾಸವುಳ್ಳ ತಾಯಂದಿರಾಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಆಸ್ಪತ್ರೆ ಹೇಳಿಕೊಂಡಿದೆ.

 

ಅಂದಹಾಗೆ, ಈ ಸಂದರ್ಭದಲ್ಲಿ ತಾಯ್ತನದ ಸುಖ ಅನುಭವಿಸುತ್ತಿರುವ ಮತ್ತು ಅದಕ್ಕೆ ಸಿದ್ಧತೆ ನಡೆಸುತ್ತಿರುವ ಭಾವಿ ಅಮ್ಮಂದಿರಿಗಾಗಿ ಅನೇಕ ವಿನೋದಾವಳಿಗಳನ್ನು ಏರ್ಪಡಿಸಿತ್ತು. ಮಾತೃತ್ವ ಯೋಗ ಕುರಿತು ಸಮಾಲೋಚನೆ ಪಡೆದುಕೊಂಡ ಭಾವಿ ತಾಯಂದಿರಿಗೆ ಅನೇಕ ಆಸಕ್ತಿಕರ ವಿಷಯಗಳನ್ನು ತಿಳಿಸಿಕೊಡಲಾಯಿತು. ಇದು ಅಪೊಲೋ ಕ್ರೇಡಲ್‌ನ ಕೋರಮಂಗಲ ಹಾಗೂ ಜಯನಗರ ಎರಡೂ ಕೇಂದ್ರಗಳಲ್ಲಿ ನಡೆಯಿತು.೩೦ ಮಂದಿ ಭಾವಿ ಅಮ್ಮಂದಿರು ಮಾತೃತ್ವ ಯೋಗದಲ್ಲಿ ಭಾಗವಹಿಸಿದ್ದರು. ಅಪೊಲೋ ಕ್ರೇಡಲ್‌ನ ಯೋಗ ತಜ್ಞರಾದ ಸುಪ್ರಿಯಾ ಇದನ್ನು ನಡೆಸಿಕೊಟ್ಟರು. ಅವರು ಮಾತೃತ್ವ ಮತ್ತು ಮಗುವಿನ ಮೇಲೆ ಆಗುವ ಯೋಗದ ಪ್ರಭಾವವನ್ನು ತಿಳಿಸಿಕೊಟ್ಟರು. ಪೌಷ್ಟಿಕಾಂಶಗಳ ಬಗ್ಗೆ ರೆಂಜು ಜಾಯ್ ತಿಳಿಸಿಕೊಟ್ಟರು. ಗರ್ಭಾವಧಿಯಲ್ಲಿ ಮತ್ತು ಹಾಲೂಡಿಸುವಾಗ ಯಾವುದನ್ನು ಸೇವಿಸಬಹುದು/ಸೇವಿಸಬಾರದು ಎಂಬುದನ್ನು ತಿಳಿಸಿದರು. ಹೊಸ ಮತ್ತು ನಿರೀಕ್ಷೆಯಲ್ಲಿರುವ ತಾಯಂದಿರನ್ನು ಖುಷಿಪಡಿಸಲು ಅಪೊಲೋ ಕ್ರೇಡಲ್, ಗ್ರೀನ್ ಟ್ರೆಂಡ್ಸ್ ಜೊತೆಗೂಡಿ ಕೆಲವಾರು ಪ್ರಸಾಧನ ವಸ್ತುಗಳನ್ನು ಕೊಡುಗೆಯಾಗಿ ನೀಡಿತು.  ತಾಯಿಯಾಗುವ ನಿರೀಕ್ಷೆಯಲ್ಲಿರುವ ಸುಮಿತ್ರಾ ಎನ್. ಹೀಗೆ ಹೇಳುತ್ತಾರೆ:‘ಗರ್ಭಿಣಿಯಾಗಿರುವ ನಾನು, ಪ್ರತಿಬಾರಿ ಇಲ್ಲಿಗೆ ಬಂದಾಗಲೂ ಏನಾದರೂ ಒಂದು ಸಂತೋಷಕರ ಅನುಭವವಾಗುತ್ತದೆ. ಈವತ್ತಂತೂ ಐಸ್‌ಕ್ರೀಂ ಮೇಲೆ ಚೆರ್ರಿ ಇಟ್ಟ ಹಾಗೆ ಅತ್ಯಂತ ವಿಶೇಷವಾಗಿತ್ತು. ಅನೇಕ ವಿಷಯಗಳನ್ನು ತಿಳಿದೆವು ಕೂಡ. ನಮಗೆ ಪ್ರಶ್ನೆಗಳನ್ನು ಕೇಳುವ ಅವಕಾಶ ಇತ್ತು. ಇಂತಹ ಸಂದರ್ಭಗಳು ಇನ್ನೂ ಹೆಚ್ಚಲಿ ಎಂದು ಆಶಿಸುತ್ತೇನೆ’. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.