ಅದೊಂದು ಸುಂದರ ಬಂಗಲೆ. ಅದರ ವಾಸ್ತುಶಿಲ್ಪಿ ಒಬ್ಬ ಪ್ರಖ್ಯಾತ ವಿನ್ಯಾಸಗಾರ. ಒಮ್ಮೆ ಆ ಬಂಗಲೆಯ ಬಾಹ್ಯ ಸೌಂದರ್ಯವನ್ನು ಸವಿಯೋಣ. ಒಳಗಡೆ ಕಾಲಿಟ್ಟರೆ ಸುಂದರವಾದ ಡ್ರಾಯಿಂಗ್ ರೂಮು. ಒಪ್ಪ ಓರಣವಾಗಿ ಜೋಡಿಸಿಟ್ಟ ಡಿಸೈನರ್ ಸೋಫಾ, ಕುರ್ಚಿ, ಕಾರ್ಪೆಟ್, ಕಟ್ಲರಿ ಸ್ಟ್ಯಾಂಡ್. ಇವೆಲ್ಲವೂ ಖ್ಯಾತ ಡಿಸೈನರುಗಳು ತಯಾರಿಸಿದವು. ಅಲ್ಲಿಂದ ಹೊರಗಡೆ ಬಂದರೆ ಸುಂದರ ತೋಟ, ಕಾರಂಜಿ. ಇವು ಕೂಡ ಡಿಸೈನರುಗಳ ಕೈಚಳಕವನ್ನು ಸಾರುವಂತಿವೆ.

ಇನ್ನು ಬಂಗಲೆಯ ಮುಂಭಾಗಕ್ಕೆ ಬಂದರೆ ಅತ್ಯಂತ ಆಕರ್ಷಣೀಯ ಕಾಂಪೌಂಡು, ಅದಕ್ಕೆ ಜೋಡಿಸಿದ್ದ ಮಾರ್ಬಲ್ಲು ಕಲ್ಲು. ಇವೆಲ್ಲವೂ ನೋಡಲು ಮತ್ತು ಸವಿಯಲು ಎರಡು ಕಣ್ಣು ಸಾಲದು. ಗೋಡೆಗೆ ಜೋಡಿಸಿದ ನಾಮಫಲಕ, ಅದರಲ್ಲಿ ಕೊರೆಯಿಸಲಾದ ಇಂಗ್ಲಿಷ್ ಲಿಪಿ.ವಾಹ್! ಇವಿಷ್ಟು ಹೇಳಿದ್ದು ಡಿಸೈನ್ ಮತ್ತು ಅದರ ಉಪಯೋಗದ ಬಗ್ಗೆ. ಅಂದಹಾಗೆ, ಈ ಡಿಸೈನ್ನ ಬೆರಗಿನಲೋಕವನ್ನು ನೀವು ಗಮನವಿಟ್ಟು ನೋಡಿದ್ದೀರಾ?

ಇವುಗಳ ಬಗ್ಗೆ ಯಾಕೆ ಒತ್ತುಕೊಟ್ಟು ಹೇಳುತ್ತಿರುವೆ ಅಂದರೆ, ಅವುಗಳೆಲ್ಲ ಡಿಸೈನರುಗಳ ಮಹತ್ವವನ್ನು ಸಾರಿ ಸಾರಿ ಹೇಳುತ್ತಿದೆ. ಇಂದು ನಾವು ಆಧುನಿಕ ಯುಗದಲ್ಲಿ ಇದ್ದೇವೆ. ನಾವು ಬಳಸುವ ಪ್ರತಿಯೊಂದು ವಸ್ತುವೂ ಡಿಸೈನರುಗಳ ಕೈಯಲ್ಲಿ ತಯಾರಾಗುತ್ತಿದೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು.

ಇದೀಗ ಬಂಗಲೆಯ ಮುಂಭಾಗದಲ್ಲಿ ಜೋಡಿಸಿದ್ದ ನಾಮಫಲಕ ಲಿಪಿ ಬಗ್ಗೆ. ಆ ಲಿಪಿಯನ್ನು ಕಲ್ಲಿನಲ್ಲಿ ಕೊರೆಯಿಸಿರಬಹುದು. ಆದರೆ ಅಲ್ಲಿ ಬಳಸಿದ ಲಿಪಿಯು ಫ್ಯಾಮಿಲಿಯನ್ನು ಓರ್ವ ಡಿಸೈನರ್ ತಯಾರು ಮಾಡಿದ್ದಾನೆ ಎನ್ನುವುದು ಆಶ್ಚರ್ಯದ ವಿಷಯ. ಅಂತಹ ಲಿಪಿಯ ಗುಂಪುಗಳು ಇಂಗ್ಲಿಷ್ನಲ್ಲಿ ನಮಗೆ ಸಾಕಷ್ಟು, ನಮ್ಮ ಅಭಿರುಚಿಗೆ ಸ್ಟೈಲಿಗೆ ಅನುಗುಣವಾಗಿ ನಮಗೆ ಸಿಗುತ್ತದೆ. ಆದರೆ ಕನ್ನಡದಲ್ಲಿ?

ಇದೆಲ್ಲ ವಿಷಯವನ್ನು ಹೇಳಿದ್ದು ಯಾವುದೋ ಬಂಗಲೆಯ ಜಾಹೀರಾತಿಗಾಗಿ ಅಲ್ಲ. ಇದು ಜಾಗತೀಕರಣದ ಹಿನ್ನೆಲೆಯಲ್ಲಿ ತಮ್ಮ ತಮ್ಮ ಕೆಲಸದ ಅಸ್ತಿತ್ವವನ್ನು ದೃಢಪಡಿಸುವ ಒಂದು ಮಾರ್ಗ, ಅಷ್ಟೇ. ಈ ಮಾರ್ಗ ವಾಸ್ತವದ ತಳಹದಿಯ ಮೇಲೆ ನಿಂತಿದೆ. ಒಂದು ಕಟ್ಟಡ ಕಣ್ಣಿಗೆ ಚೆನ್ನಾಗಿ ಕಾಣಬಹುದು. ಆದರೆ ಅದರ ಜೊತೆಯಲ್ಲಿ Structural design ಬಹು ಮುಖ್ಯ ಪಾತ್ರ ವಹಿಸುತ್ತದಲ್ಲ; ಇದೇ ಧೋರಣೆಯನ್ನು ನಮ್ಮ ಲಿಪಿ (typography) ಹಿನ್ನೆಲೆಯಲ್ಲೂ ಕಾಣಬೇಕು.

ಭಾಷೆಯ ಬಗ್ಗೆ ಭಾವುಕತೆಯಿಂದ ಮಾತನಾಡುವವರ ದಂಡನ್ನೇ ನಮ್ಮ ಸುತ್ತಮುತ್ತ ಕಾಣಬಹುದು. ಅಂಥ ಭಾವುಕತೆಯನ್ನು ಬದಿಗಿಟ್ಟು, ನಮ್ಮ ಭಾಷೆ ಮತ್ತದರ ‘ಲಿಪಿ’ಯನ್ನು ಗಮನಿಸಬೇಕು. ಹಾಗೆ ಗಮನಿಸಿದಾಗಲೇ ‘ಲಿಪಿ’ಯಿಂದ ಪ್ರಯೋಜನಗಳ ಬಗ್ಗೆ ಚಿಂತನೆ ಶುರುವಾಗುತ್ತದೆ.

ಆಧುನಿಕ ಯುಗದಲ್ಲಿ ನಮ್ಮ ವ್ಯವಹಾರ ವಹಿವಾಟುಗಳ ಸ್ವರೂಪ ಬದಲಾಗಿದೆಯಷ್ಟೇ. ವ್ಯಕ್ತಿತ್ವವನ್ನು ಪ್ರತಿನಿಧಿಸುವ ಪ್ಯಾಶನ್, ಹಾಕುವ ಬಟ್ಟೆ, ವ್ಯಾಪಾರ ಮಾಡುವ ಬ್ಯಾಂಕು, ವೈದ್ಯಕೀಯ ವಿಜ್ಞಾನ, ಎಂಜಿನಿಯರಿಂಗ್ ಕಂಪೆನಿ, ಐಟಿ/ಬಿಟಿ ಉದ್ಯಮ- ಇವುಗಳ ಡಿಸೈನರುಗಳು ಅಕ್ಷರಗಳನ್ನು ತಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ

ಬಳಸುವಂತಾದರೆ ಭಾಷೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇದಕ್ಕೆ ತಕ್ಕುದಾದ ‘ಡಿಸೈನರ್ ಲಿಪಿ’ ನಮ್ಮ ಭಾಷೆಯಲ್ಲಿ ಇದೆಯೇ?
ಪ್ರತಿಷ್ಠಿತ ‘ಮಾಲ್’ಗಳಿಗೆ ಭೇಟಿಕೊಟ್ಟಾಗ ಅಲ್ಲಿನ ಶಾಪಿಂಗ್ ಅನುಭವವನ್ನು ಮೆಲುಕುಹಾಕಿ. ಅಲ್ಲಿ ಇಂಗ್ಲಿಷನ್ನು ಯಾವ ರೀತಿ ಬಳಸಿದ್ದಾರೆ ಮತ್ತು ಅದು ಅಷ್ಟೊಂದು ಅತ್ಯಾಕರ್ಷಕವಾಗಿ ಹೇಗೆ ಕಾಣುತ್ತದೆ? ಇಂಗ್ಲಿಷಿನ ಅಬ್ಬರದ ನಡುವೆ, ಒಂದು ಮೂಲೆಯಲ್ಲಿ ಸಣ್ಣದಾಗಿ ನಮ್ಮ ಅಕ್ಷರ ಇಣುಕುತ್ತಿದೆ. ಅದು ಯಾಕೆ ಮೂಲೆಯಲ್ಲಿ ಕುಳಿತಿದೆ?

ಈ ಪ್ರಶ್ನೆಗಳಿಗೆಲ್ಲ ಉತ್ತರ ಸುಲಭ. ನಮ್ಮ ‘ಲಿಪಿ’ ಬರೀಯ ಭಾವನಾತ್ಮಕ ಅಕ್ಷರವಾಗಿದೆಯೇ ವಿನಾ ಅದಕ್ಕೆ ಇಂದಿನ ಕಾಲಕ್ಕೆ ನಿಲ್ಲುವ easthetic ಬಲ ಇಲ್ಲ. ಅಂದರೆ, ತನ್ನ ಕಾಲ ಮೇಲೆ ನಿಲ್ಲುವ ಶಕ್ತಿ ಅದಕ್ಕಿಲ್ಲ.

ಕನ್ನಡದ ಲಿಪಿಯನ್ನು ಆಧುನಿಕ ಮನೋಧರ್ಮಕ್ಕೆ ಒಗ್ಗಿಸುವ ನಿಟ್ಟಿನಲ್ಲಿ ಕಳೆದ ಮೂವತ್ತು ವರ್ಷಗಳಿಂದ ನಾನು ಕೆಲವು ಪ್ರಯೋಗಗಳನ್ನು ಮಾಡಿರುವುದಲ್ಲದೆ, ಈ ಬಗ್ಗೆ ಮಂಗಳೂರಿನಲ್ಲಿ ಒಂದು ಪ್ರದರ್ಶನವನ್ನೂ ನಡೆಸಿದ್ದೇನೆ. ಹಾಂ, ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಮೊದಲು ಪ್ರಕಟವಾದದ್ದು ಇದೇ ಜಿಲ್ಲೆಯಲ್ಲಿ. ಆ ಕಾರಣದಿಂದಲೇ ಮಂಗಳೂರಿನಲ್ಲೇ ಲಿಪಿಗೆ ಸಂಬಂಧಿಸಿದ ನನ್ನ ಪ್ರದರ್ಶನ ನಡೆಸಿದ್ದು.

ಲಿಪಿ ಡಿಸೈನ್
ಸುಂದರವಾದ ದೇಹ ಸಿರಿ ಯಾರಿಗೆ ಬೇಡ? ಈ ಮಟ್ಟಸವಾದ ದೇಹ ಲಿಪಿಗೂ ಬೇಕು. ಲಿಪಿಯನ್ನು ಕೂಡ ನಾವು ಅತ್ಯಂತ ಸುಂದರವಾಗಿ, ಆಕರ್ಷಣೀಯವಾಗಿ ಆರೋಗ್ಯಕರವಾಗಿ ಮಾಡಿದರೆ, ಅದರಿಂದ ಹೆಚ್ಚಿನ ಚಲಾವಣೆ ಸಾಧ್ಯವಾಗಿ ಅದರ ಲಾಭ ಖಂಡಿತವಾಗಿಯೂ ಭಾಷೆಗೆ ದೊರಕುತ್ತದೆ. ಉದಾಹರಣೆಗೆ ಇಂಗ್ಲಿಷ್ ನಮ್ಮ ಕಣ್ಣಮುಂದೆಯೇ ಇದೆ.

ಲಿಪಿಯ ಸುಧಾರಣೆಯಿಂದ ಮುದ್ರಣ ಮಾಧ್ಯಮದಲ್ಲಿ ಸುಧಾರಣೆ ಸಾಧ್ಯವಾಗುತ್ತದೆ. ಸುಂದರವಾದ ಫ್ಯಾಶನ್ ಪತ್ರಿಕೆ, ಕ್ರೀಡಾ ಪತ್ರಿಕೆ, ಸಿನಿಮಾ ಪತ್ರಿಕೆಗಳು ರೂಪುಗೊಳ್ಳುವಲ್ಲಿ ಹಾಗೂ ಅವುಗಳ ಮೂಲಕ ಭಾಷೆಯ ಅರ್ಥವಂತಿಕೆ-ಸೊಬಗನ್ನು ಹೆಚ್ಚಿಸುವುದರಲ್ಲಿ ‘ಡಿಸೈನರು ಲಿಪಿ’ ಪಾತ್ರ ಮಹತ್ವದ್ದು. ಜಾಹೀರಾತು ಹೋರ್ಡಿಂಗ್ಗಳು ಸೇರಿದಂತೆ ವಿದ್ಯುನ್ಮಾನ ಮಾಧ್ಯಮದಲ್ಲೂ ಲಿಪಿಗೆ ವಿಶೇಷ ಮಹತ್ವವಿದೆ.

ಕನ್ನಡದಲ್ಲಿ ‘ಡಿಸೈನರ್ ಲಿಪಿ’ಯ ಸಂಶೋಧನೆ ಮತ್ತು ತಯಾರಿಸುವಿಕೆ ಇಂದು ನಮ್ಮ ಭಾಷೆ ಮುಂಚೂಣಿಗೆ ಬರಲು ಒಂದು ಉತ್ತಮ ಅಸ್ತ್ರ. ಇಂಗ್ಲಿಷ್ ಭಾಷೆ ಇದನ್ನೇ ಮಾಡಿದ್ದು. ಇಲ್ಲಿರುವ ‘ಲಿಪಿ ಕಲಾಕೃತಿ’ಗಳು ಲಿಪಿಯನ್ನು ತಯಾರಿಸಿ ಜೋಡಿಸಿದಾಗ ಆಗುವ ಸೌಂದರ್ಯದ ಅನುಭವವನ್ನು ನಮಗೆ ಕೊಡುತ್ತವೆ. ಇದು ನಿಮಗೆ ಒಬ್ಬ ವಾಸ್ತುಶಿಲ್ಪಿ ತಯಾರು ಮಾಡಿದ ಮನೆ ಅಥವಾ ಬಂಗಲೆಯ ಅನುಭವವನ್ನು ನೀಡಬಹುದು.

ಸರ್ಕಾರ ಅಥವಾ ನುಡಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಯೂನಿವರ್ಸಿಟಿಗಳು ನಾಡಿನ ಡಿಸೈನರುಗಳನ್ನು ಒಂದೆಡೆ ಸೇರಿಸಿ, ಆಧುನಿಕ ಸಂದರ್ಭಕ್ಕೆ ಹೊಂದುವ ಕನ್ನಡ ‘ಡಿಸೈನರ್ ಲಿಪಿ’ಯನ್ನು ತಯಾರಿಸಿ ಚಲಾವಣೆ ತಂದರೆ, ಇಂದು ಸರ್ವಂ ಇಂಗ್ಲಿಷ್ಮಯವಾಗಿರುವ ವಾತಾವರಣದಲ್ಲಿ ನಮ್ಮ ಭಾಷೆ ಘನತೆಯಿಂದ ತಲೆ ಎತ್ತಿ ಸ್ಪರ್ಧಾತ್ಮಕವಾಗಿ ಕಂಗೊಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.