ಬಾಗಲಕೋಟೆ: ಕದಳಿ ಪ್ರಶಸ್ತಿ ಪುರಸ್ಕೃತರಾದ ಮಂಜುಳಾತಾಯಿ ಅಂಗಡಿಯವರ ಅಮೃತ ಮಹೋತ್ಸವ ಮತ್ತು ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭ ವಿದ್ಯಾಗಿರಿಯ ಎಂಜಿನಿಯರಿಂಗ್ ಕಾಲೇಜಿನ ಮಹಾವಿದ್ಯಾಲಯದ ಸಭಾಭವನದಲ್ಲಿ ಭಾನುವಾರ(ಮಾ.13) ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.ಅಮೃತ ಮಹೋತ್ಸವ ಸಂಘಟನಾ ಸಮಿತಿ ಅಧ್ಯಕ್ಷ ಬಿ.ಆರ್.ಬೋಳಿಶೆಟ್ಟಿ ಹಾಗೂ ಅಭಿನಂದನ ಗ್ರಂಥ ಪ್ರಧಾನ ಸಂಪಾದಕ ಎ.ಎಸ್.ಪಾವಟೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ನಿವೃತ್ತಿ ನಂತರವೂ ಸಾಮಾಜಿಕ ಸಂಘಟನೆಯಲ್ಲಿ ತೊಡಗಿಕೊಂಡಿರುವ ಮಂಜುಳಾತಾಯಿ ಅವರಿಗೆ ಗೌರವ ಸಮರ್ಪಿಸುವ ಉದ್ದೇಶದಿಂದ ಅಮೃತ ಮಹೋತ್ಸವ ಆಚರಿಸಲು ನಿರ್ಧರಿಸಲಾಯಿತು ಎಂದರು.ಬಸವೇಶ್ವರ ಬಾಲಕಿಯರ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ, ಮುಖ್ಯಾಧ್ಯಾಪಕಿಯಾಗಿ ಗಣನೀಯ ಸೇವೆ ಸಲ್ಲಿಸಿರುವ ಮಂಜುಳಾತಾಯಿ ಅವರು, ಅಧ್ಯಾತ್ಮಿಕತೆ ಕಡೆಗೆ ಒಲವು ತೋರಿದ್ದಲ್ಲದೇ ಅಕ್ಕನಬಳಗದ ಮೂಲಕ ಮಹಿಳಾ ಸಂಘಟನೆಯಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದು ವಿವರಿಸಿದರು.

ಸಾಧನೆಯ ಹಾದಿ
ಬಾಗಲಕೋಟೆಯಲ್ಲಿರುವ ಎಲ್ಲ 26 ಮಹಿಳಾ ಮಂಡಳಗಳನ್ನು ಒಗ್ಗೂಡಿಸಿ ‘ಸಂಸ್ಕೃತಿ ಮಹಿಳಾ ಒಕ್ಕೂಟ’ ಸ್ಥಾಪಿಸಿದ ಕೀರ್ತಿ ಮಂಜುಳಾತಾಯಿ ಅವರದು. ಇದಲ್ಲದೇ ಕದಳಿ ವೇದಿಕೆಯನ್ನು ಆರಂಭಿಸಿದ್ದಾರೆ.ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷರಾಗಿ ಒಂದು ಸಾವಿರಕ್ಕಿಂತ ಅಧಿಕ ಜನರನ್ನು ಆಜೀವ ಸದಸ್ಯರನ್ನಾಗಿ ಮಾಡುವ ಮೂಲಕ ಮಹಾಸಭೆಯ ಕೇಂದ್ರ ಕಚೇರಿಯಿಂದ ಪ್ರಶಸ್ತಿ ಗಳಿಸಿದ್ದಾರೆ.

2004ರಲ್ಲಿ ಅಕ್ಕನಬಳಗಕ್ಕೆ ಮಹಾಲಿಂಗಪುರದ ಫ.ಗು.ಹಳಕಟ್ಟಿ ಪ್ರತಿಷ್ಠಾನದ ವತಿಯಿಂದ ‘ಹಳಕಟ್ಟಿಶ್ರೀ ಪ್ರಶಸ್ತಿ’; ಅಕ್ಕನಬಳಗ ಮತ್ತು ಶಿಶುವಿಹಾರ ಸಂಘಟನೆಗಾಗಿ 2005ರಲ್ಲಿ ರಾಜ್ಯ ಪ್ರಶಸ್ತಿ; ಅಕ್ಕನಬಳಗ ಕಾರ್ಯವೈಖರಿ ಮೆಚ್ಚಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ‘ಕದಳಿ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಶಿಕ್ಷಕಿ, ಸಮಾಜ ಸೇವಕಿ, ಅಧ್ಯಾತ್ಮಜೀವಿ, ವಚನಕಾರ್ತಿಯಾಗಿ ಅನೇಕ ದಶಕಗಳವರೆಗೆ ಸಮಾಜದ ಏಳ್ಗೆಗೆ ಶ್ರಮಿಸಿದ ಮಂಜುಳಾತಾಯಿ ಅವರನ್ನು ಅವರ ಕುಟುಂಬವರ್ಗ, ಶರಣ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್, ಅಕ್ಕನಬಳಗ, ಕದಳಿ ವೇದಿಕೆ ಹಾಗೂ ಅವರ ವಿದ್ಯಾರ್ಥಿ ಸಮೂಹದ ವತಿಯಿಂದ ಅಮೃತ ಮಹೋತ್ಸವ ಏರ್ಪಡಿಸಲಾಗಿದೆ ಎಂದು ಬೋಳಿಶೆಟ್ಟಿ ಹಾಗೂ ಪಾವಟೆ ತಿಳಿಸಿದರು.

ಚರಂತಿಮಠದ ಪ್ರಭುಸ್ವಾಮಿ ಹಾಗೂ ಟೀಕಿನಮಠದ ರೇವಣಸಿದ್ಧೇಶ್ವರ ಸ್ವಾಮೀಜಿ ಅಮೃತ ಮಹೋತ್ಸವದ ಸಾನ್ನಿಧ್ಯ ವಹಿಸಲಿದ್ದು, ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ.ಶಿವಮೊಗ್ಗದ ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಶಿವಯೋಗಿ ಹಿರೇಮಠ ಅತಿಥಿಯಾಗಿ ಆಗಮಿಸಲಿದ್ದು, ಡಿಡಿಪಿಐ ಸಿದ್ಧರಾಮ ಮನಹಳ್ಳಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅವರು ಕೋರಿದರು.ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಜಿಗಜಿನ್ನಿ, ಸಿ.ವಿ.ಕೋಟಿ, ಮಂಜುಳಾತಾಯಿಯವರ ಪುತ್ರ, ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಡಾ.ಷಣ್ಮುಖಪ್ಪ ಅಂಗಡಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.