ಗುರುವಾರ , ಮೇ 6, 2021
24 °C

ಮಂಡ್ಯ: ಐವರು ದರೋಡೆಕೋರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ನಗರದ ಪಶ್ಚಿಮ ಠಾಣೆಯ ಪೊಲೀಸರು ಐವರು ದರೋಡೆಕೋರರನ್ನು ಬಂಧಿಸಿ ಅವರು ವಿವಿಧೆಡೆ ದೋಚಿದ್ದ ರೂ. 5.5 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ನಗರದ ನೂರಡಿ ರಸ್ತೆಯ ಅಂಗಡಿಯೊಂದರ ಬಳಿ ಶಂಕಾಸ್ಪದ ರೀತಿಯಲ್ಲಿ  ಓಡಾಡುತ್ತಿದ್ದ ಯುವಕರನ್ನು ಬಂಧಿಸಿ ವಿಚಾರಣೆಗೆ ಒಳಡಿಸಿದಾಗ ಕೃತ್ಯ ಬಯಲಾಗಿದೆ. ಬಂಧಿತರಿಂದ 72 ಗ್ರಾಂ ತೂಕದ ಚಿನ್ನಾಭರಣ, ಕಾರು , ಎರಡು ಲ್ಯಾಪ್‌ಟಾಪ್, ಕ್ಯಾಮೆರಾ ಸೇರಿ ರೂ. 5.5 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬೆಂಗಳೂರಿನ ಕೂಡ್ಲುಗೇಟ್ ನಿವಾಸಿ ಕೈಲಾಸ್ ಮೂರ್ತಿ (22),  ಉಡುಪಿ ಜಿಲ್ಲೆಯ ಅಮಾಸೆಬೈಲ್‌ನ ವಿಶ್ವನಾಥ ಶೆಟ್ಟಿಗಾರ್ (26), ಬೆಂಗಳೂರು ಕೆಂಪೇಗೌಡ ನಗರದ ಕೃಷ್ಣಚಾರ್ (23), ಕೊರಟಗೆರೆ ನಿವಾಸಿ ನಯಾಜ್ ಖಾನ್ (27) ಮತ್ತು ಸಾಲಿಗ್ರಾಮದ ಮಹಮ್ಮದ್ ಆರೀಫ್ (27) ಬಂಧಿತರು.ಇವರು ಬೆಂಗಳೂರಿನ ಉತ್ತರಹಳ್ಳಿ ಪೂರ್ಣಪ್ರಜ್ಞ ಲೇಔಟ್‌ನಲ್ಲಿ ಮಾಲೀಕ ಚಂದ್ರಶೇಖರ್ ಅವರ ಮನೆಯಲ್ಲಿ ಲಾಂಗ್ ತೋರಿಸಿ ಮಾರುತಿ ಜೆನ್ ಎಸ್ಟಿಲೋ ಕಾರು ಅಪಹರಿಸಿದ್ದರು. ಬನಶಂಕರಿ 2ನೇ ಹಂತದಲ್ಲಿ ಲಕ್ಷ್ಮೀರಾಮಣ್ಣ ಎಂಬುವವರ ಮನೆಯಲ್ಲಿ ಮಚ್ಚು ತೋರಿಸಿ ಚಿನ್ನಾಭರಣ ದೋಚಿದ್ದರು. ಪೂರ್ಣಪ್ರಜ್ಞ ಲೇಔಟ್‌ನಲ್ಲಿ ದೋಚಿದ್ದ ಕಾರಿಗೆ ನಕಲಿ ನಂಬರ್ ಹಾಕಿ ಬಳಸುತ್ತಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.