ಮಂಗಳವಾರ, ಮೇ 24, 2022
30 °C

ಮಕ್ಕಳಲ್ಲಿ ದುರ್ಗದ ದುರ್ಗಿಯ ಶೌರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿತ್ತೂರಿನ ಹುಲಿ ಓಬವ್ವನ ಸಾಹಸಗಾಥೆ, ವೀರಾವೇಶ, ಹೈದರಾಲಿಯ ಕುತಂತ್ರ, ಮದಕರಿ ನಾಯಕನ ಧೀರತ್ವದ ನೆನಪು ಮತ್ತೊಮ್ಮೆ ಮರುಕಳಿಸುವಂತಿತ್ತು ಪುಟಾಣಿಗಳ ಅಭಿನಯ. `ದುರ್ಗದ ದುರ್ಗಿ~ ನಾಟಕ ಪ್ರದರ್ಶನವಾಗುತ್ತಿದ್ದಂತೆ ಅಲ್ಲಿ ನೆರೆದವರೆಲ್ಲರೂ ಮಕ್ಕಳ ಪ್ರತಿಭೆಗೆ ಕರತಾಡನದ ಉಡುಗೊರೆ ನೀಡಿದರು.ಕನಕಪುರ ರಸ್ತೆಯ ಕನಕನಗರದ ಮೈತ್ರಿ ಕಲಾತಂಡವು ಇತ್ತೀಚೆಗೆ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮವದು. ನಟರಾಜ್ ಭಾಗವತ್ ರಚನೆ ಹಾಗೂ ಸಂತೋಷನಾಯ್ಕ ಅವರ ನಿರ್ದೇಶನದಲ್ಲಿ ಮೂಡಿ ಬಂದ ನಾಟಕವನ್ನು ಮಕ್ಕಳು ನೆರೆದವರ ಮನಮುಟ್ಟುವಂತೆ ಅಭಿನಯಿಸಿದರು.ಕಾರ್ಯಕ್ರಮವನ್ನು ಹಾಸ್ಯ ಚಲನಚಿತ್ರ ನಟ ಮೈಸೂರು ರಮಾನಂದ್ ಉದ್ಘಾಟಿಸಿದರು. ಅತಿಥಿಗಳಾಗಿ ಬಿ.ಬಿ.ಎಂ.ಪಿ ಸದಸ್ಯ ಎಚ್.ಸುರೇಶ್,  ಜೆ.ಡಿ.ಎಸ್. ಮುಖಂಡ ಇವೇಂದ್ರನ್, ಬಿ.ಟಿ.ಎಂ.ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವೆಂಕಟೇಶ್, ಕರ್ನಾಟಕ ಕರಕುಶಲ ನಿಗಮದ ನಿರ್ದೇಶಕ ಎಸ್. ಕೆ. ರವಿಕುಮಾರ್, ಪ್ರಭು, ಟಿ. ನಾಗೇಶ್, ಕೆ. ಮಂಜುನಾಥ್, ಮಾರ್ಗ್ ಶಾಲೆಯ ಪ್ರಾಂಶುಪಾಲರಾದ ವಾಸಂತಿ ಪಾಲ್ಗೊಂಡಿದ್ದರು.ಬೇಸಿಗೆ ಶಿಬಿರದ ವಿದ್ಯಾರ್ಥಿಗಳು ಹಾಗೂ ಮೈತ್ರಿ ಕಲಾತಂಡದ ಸದಸ್ಯರಿಂದ ಹಲವಾರು ನೃತ್ಯಗಳು ಹಾಗೂ ಎರಡು ವಿಭಿನ್ನ ನಾಟಕಗಳು ಪ್ರದರ್ಶನಗೊಂಡವು.ಬೇಲೂರು ಕೃಷ್ಣಮೂರ್ತಿಯವರು ರಚಿಸಿ, ಕಿರುತೆರೆ ಕಲಾವಿದರಾದ ಯಶವಂತ ನಿ,ರ್ದೇಶಿಸಿದ ನಾಟಕ `ಕಂಬನಿ~, ತಂಡದ ಹಿರಿಯ ಸದಸ್ಯರಿಂದ ಪ್ರದರ್ಶನಗೊಂಡಿತು. ವರದಕ್ಷಿಣೆ ಪಿಡುಗಿನ ಮೇಲೆ ಈ ನಾಟಕ ಬೆಳಕು ಚೆಲ್ಲಿತು.ಕಲಾವಿದರಾಗಿ ಸಂತೋಷನಾಯ್ಕ, ಯಶವಂತ, ಶಿವರಂಜಿನಿ. ಜಿ. ಎಂ. ವಸಂತ. ಎಚ್.ಆರ್. ಮಂಜುನಾಥ ಗಮನ ಸೆಳೆದರು. ಮೈತ್ರಿಕಲಾತಂಡದ ಪ್ರಧಾನ ಕಾರ್ಯದರ್ಶಿ ಜಿ. ಎಂ. ಮಹದೇವ ಮತ್ತು ದಿಲೀಪ್. ಎಂ. ಸಿ. ಪಾತ್ರಗಳಿಗೆ ಜೀವ ತುಂಬಿದರು. ಎರಡೂ ನಾಟಕಕ್ಕೆ ಟಿ. ಜಿ. ಹರೀಶ್ ಸಂಗೀತ, ರಾಮಕೃಷ್ಣ ಭೂತೆ ಪ್ರಸಾಧನ ವಿಭಾಗದಲ್ಲಿ ನೆರವು ನೀಡಿದರು.  

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.