ಶುಕ್ರವಾರ, ಮೇ 7, 2021
23 °C

ಮಕ್ಕಳಲ್ಲಿ ನೈತಿಕ ಸ್ಥೈರ್ಯ ಬೆಳೆಸಿ: ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ಸಾಮಾಜಿಕ ಸೇವೆಯೊಂದಿಗೆ ಜನರಲ್ಲಿ ನೈತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಬಿತ್ತಿ ಬೆಳಸುವಲ್ಲಿ ಮಠಮಾನ್ಯಗಳ ಪಾತ್ರ ಅನನ್ಯ ಎಂದು ಶಾಸಕ ಡಿ.ಸಿ. ತಮ್ಮಣ್ಣ ಅಭಿಪ್ರಾಯಪಟ್ಟರು.ಸಮೀಪದ ವೈದ್ಯನಾಥಪುರದ ಕದಂಬ ಜಂಗಮ ಮಠದಲ್ಲಿ ತಿಂಗಳ ಪೂರ್ಣಿಮಾ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ನಮ್ಮ ಮಕ್ಕಳಲ್ಲಿ ನೈತಿಕ ಸ್ಥೈರ್ಯ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸಲು ಧಾರ್ಮಿಕ ಗುರುಗಳ ಪ್ರವಚನ ಮಾರ್ಗದರ್ಶನ ಅಗತ್ಯವಿದೆ. ಈ ನಿಟ್ಟಿನಲ್ಲಿ ಕದಂಬ ಜಂಗಮ ಮಠದ ಅಭಿವೃದ್ಧಿಗೆ ತಮ್ಮ ಶಾಸಕ ನಿಧಿಯಿಂದ ಅಗತ್ಯ ಅನುದಾನ ಒದಗಿಸಲು ಬದ್ಧ ಎಂದು ತಿಳಿಸಿದರು.ಕದಂಬ ಜಂಗಮಮಠದ ಪೀಠಾಧಿಪತಿಗಳಾದ ರೇಣುಕಾಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮ ಜಗತ್ತಿನಲ್ಲೇ ಅತ್ಯಂತ ಉತ್ಕೃಷ್ಟ ಧರ್ಮವಾಗಿದೆ. ಮಾನವೀಯತೆಯ ಬೋಧನೆಯೇ ಈ ಧರ್ಮದ ಮೂಲ ಆಶಯವಾಗಿದೆ. ಅತ್ಯಂತ ಕಷ್ಟದಲ್ಲಿದ್ದ ಜಂಗಮ ಮಠ ಇಂದು ಉತ್ತಮ ಅಭಿವೃದ್ಧಿ ಸಾಧಿಸಿದೆ. ಇದಕ್ಕೆ ಭಕ್ತರ ಸಹಕಾರ ಹಾಗೂ ಅಭಿಮಾನವೇ ಪ್ರೇರಣೆ ಎಂದರು. ಸಾಹಿತಿ ಹಿ.ಚಿ. ಶಾಂತವೀರಯ್ಯ, ತಹಶೀಲ್ದಾರ್ ಡಾ.ಎಚ್.ಎಲ್. ನಾಗರಾಜು, ಬೂದಗುಪ್ಪೆ ವೀರಶೈವ ಸಮಾಜ ಕಲ್ಯಾಣ ಸಂಘದ ಅಧ್ಯಕ್ಷ ಶಿವಮಲ್ಲಪ್ಪ ಮಾತನಾಡಿದರು. ಮನ್‌ಮುಲ್ ಮಾಜಿ ನಿರ್ದೇಶಕ ಆಲೂರು ಶಿವಶಂಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ  ಪ್ರಕಾಶ್, ಗುತ್ತಿಗೆದಾರ ಮಹೇಶ್, ಮುಖಂಡರಾದ ಮ್ಲ್ಲಲೇನಹಳ್ಳಿ ಮಲ್ಲೇಶ್, ಮಲ್ಲಿಕ್, ಬಸವರಾಜು, ಮಠದ ಕಾರ್ಯನಿರ್ವಾಹಕರಾದ ಪ್ರದೀಪ್ ಸಂದೇಶ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.