ಮಂಗಳವಾರ, ಮೇ 18, 2021
30 °C

ಮಕ್ಕಳೊಂದಿಗೆ ಹೊಂಡಕ್ಕೆ ಹಾರಿ ಮಹಿಳೆ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಅಪರಿಚಿತ ಮಹಿಳೆಯೊಬ್ಬಳು ತನ್ನ ಎರಡು ಗಂಡು ಮಕ್ಕಳೊಂದಿಗೆ ನೀರಿನ ಹೊಂಡಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಕೋಗಿಲು ಬಡಾವಣೆಯ ಬಂಡೆ ಪ್ರದೇಶದಲ್ಲಿ ಗುರುವಾರ ರಾತ್ರಿ ನಡೆದಿದೆ.ಶವಗಳನ್ನು ಸುಮಾರು 35 ವರ್ಷದ ಮಹಿಳೆ ಹಾಗೂ ಒಂದೂವರೆ ಮತ್ತು ಎರಡೂವರೆ ವರ್ಷದ ಇಬ್ಬರು ಗಂಡು ಮಕ್ಕಳು ಎಂದು ಗುರುತಿಸಲಾಗಿದೆ.ಶುಕ್ರವಾರ ಮದ್ಯಾಹ್ನ 2 ಗಂಟೆ ಹೊತ್ತಿನಲ್ಲಿ ಶವಗಳು ಬಂಡೆ ಪ್ರದೇಶದ ನೀರಿನ ಹೊಂಡದಲ್ಲಿ ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದರು.ಅಪರಿಚಿತ ಮಹಿಳೆಯು ವೇಲ್‌ನಿಂದ ತನ್ನ ಇಬ್ಬರು ಮಕ್ಕಳನ್ನು ಸೊಂಟಕ್ಕೆ ಕಟ್ಟಿಕೊಂಡು  ಗುರುವಾರ ರಾತ್ರಿ ನೀರಿನ ಹೊಂಡಕ್ಕೆ ಜಿಗಿದಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ಯಲಹಂಕ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಚಹರೆ: ಮಹಿಳೆಯು ಹುಲಿ ಚರ್ಮದ ಗುರುತಿನ ಚೂಡಿದಾರ್ ಹಾಗೂ ಮಕ್ಕಳು ಬೂದು ಮತ್ತು ಕಂದು ಬಣ್ಣದ ಸಫಾರಿ ಉಡುಪನ್ನು ಧರಿಸಿದ್ದಾರೆ. ಶವಗಳನ್ನು ಅಂಬೇಡ್ಕರ್ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.