ಗುರುವಾರ , ಮೇ 13, 2021
35 °C

ಮಕ್ಕಳ ಅಭಿವೃದ್ಧಿಗೆ ಕುಟುಂಬ ಪೂರಕ

ಪ್ರಜಾವಾಣಿ ವಾರ್ತೆ / ಎಸ್. ಸಂಪತ್ Updated:

ಅಕ್ಷರ ಗಾತ್ರ : | |

ರಾಮನಗರ : `ಕಟುಂಬದ ವಾತಾವರಣದಲ್ಲಿ ಮಕ್ಕಳು ಬೆಳೆಯಬೇಕು. ಇದು ಪ್ರತಿ ಮಗುವಿನ ಹಕ್ಕು' ಎಂಬ ಘೋಷ ವಾಖ್ಯದೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ವಿನೂತನ ಪ್ರಾಯೋಜಕತ್ವ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಅದರ ಅನುಷ್ಠಾನದ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸಿದೆ.ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಉತ್ತಮ ತತ್ವಗಳನ್ನು ಅಳವಡಿಸಿಕೊಂಡು ಮಗುವಿನ ಹಿತ ರಕ್ಷಿಸುವುದು ಈ ಯೋಜನೆಯ ಉದ್ದೇಶ.ಕುಟುಂಬದ ವಾತಾವರಣವನ್ನು ಉತ್ತಮ ಪಡಿಸುವ ಸಲುವಾಗಿ ಮಕ್ಕಳು ದುಡಿಮೆಗೆ ಹೋಗುವುದನ್ನು ತಪ್ಪಿಸುವುದು, ಶಿಕ್ಷಣವನ್ನು ಮುಂದುವರೆಸುವುದನ್ನು ಉತ್ತೇಜಿಸುವುದು, ಮಕ್ಕಳ ವೈದ್ಯಕೀಯ, ಪೌಷ್ಠಿಕ ಆಹಾರ, ಶೈಕ್ಷಣಿಕ, ವೃತ್ತಿ ತರಬೇತಿ ಮತ್ತು ಇತರೆ ಅವಶ್ಯಕತೆಗಳನ್ನು ಪೂರೈಸಲು ಕುಟುಂಬಗಳಿಗೆ ಪೂರಕವಾಗಿ ಆರ್ಥಿಕ ನೆರವನ್ನು ಒದಗಿಸುವುದೇ ಈ ಯೋಜನೆಯಾಗಿದೆ.ಈ ಯೋಜನೆಯಡಿ ಅರ್ಹ ಮಕ್ಕಳ ಪೋಷಣೆ, ವೈದ್ಯಕೀಯ ವೆಚ್ಚ, ಶಿಕ್ಷಣ ಹಾಗೂ ಇತರೆ ಅವಶ್ಯಕತೆಗಳ ಪೂರೈಸಲು ಹಾಗೂ ಅವರ ಜೀವನ ಉತ್ತಮಗೊಳಿಸಲು ಪ್ರತಿ ತಿಂಗಳು ್ಙ. 1000 ಆರ್ಥಿಕ ನೆರವನ್ನು ಗರಿಷ್ಠ ಮೂರು ವರ್ಷ ನೀಡಲು ಅವಕಾಶ ಇದೆ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2013ರ ಮಾರ್ಚ್ 13ರಂದು ಆದೇಶ ಹೊರಡಿಸಿದೆ.ಈ ವಿನೂತನ ಕಾರ್ಯಕ್ರಮ ಅನುಷ್ಠಾನಕ್ಕೆ ರಾಜ್ಯದ ಪ್ರತಿ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ತಲಾ ್ಙ. 5 ಲಕ್ಷದಂತೆ ವಾರ್ಷಿಕ ್ಙ.150 ಲಕ್ಷ ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದರಂತೆ ರಾಮನಗರ ಜಿಲ್ಲೆಗೆ ಐದು ಲಕ್ಷ ರೂಪಾಯಿ ಅನುದಾನ ಬಂದಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕೆ.ರಾಧಾ ಅವರು `ಪ್ರಜಾವಾಣಿ'ಗೆ ಮಾಹಿತಿ ನೀಡಿದರು.ಬಡತನದ ಕಾರಣದಿಂದ ಸಂಸ್ಥೆಗಳಿಗೆ ಮಕ್ಕಳನ್ನು ದಾಖಲಿಸುವ ಕುಟುಂಬಗಳಿಗೆ ನೆರವು ನೀಡುವ ಮೂಲಕ ಮಕ್ಕಳು ಕುಟುಂಬದ ವಾತಾವರಣದಲ್ಲಿ, ಅವರ ಪೋಷಕರ ಆಶ್ರಯದಲ್ಲಿಯೇ ಬೆಳೆಯುವುದಕ್ಕೆ ಈ ಕಾರ್ಯಕ್ರಮದ ಮೂಲಕ ಪ್ರೋತ್ಸಾಹಿಸಲಾಗುವುದು ಎಂದು ಅವರು ವಿವರಿಸಿದರು.ಅತ್ಯಂತ ಕನಿಷ್ಠ ಸೌಲಭ್ಯಗಳಿಂದ ವಂಚಿತರಾದ ಅಥವಾ ಶೋಷಣೆಗೆ ಒಳಗಾದ ಕುಟುಂಬಗಳಿಗೆ ನೆರವು ನೀಡುವ ಮೂಲಕ ಮಗು ಪೋಷಕರಿಂದ ಬೇರ್ಪಡುವುದನ್ನು ತಪ್ಪಿಸುವುದು. ಈಗಾಗಲೇ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳನ್ನು ಸಂಸ್ಥೆಗಳಿಂದ ಬಿಡುಗಡೆಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.ಮಕ್ಕಳ ಆಯ್ಕೆಗೆ ಮಾನದಂಡ: ಮಕ್ಕಳು 0-18 ವರ್ಷದೊಳಗಿರಬೇಕು. ಸತತ ಆರು ತಿಂಗಳವರೆಗೆ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾವುದು. ವಾರ್ಷಿಕ ಆದಾಯ ್ಙ 24 ಸಾವಿರ ಮೀರಿರಬಾರದು. ತಾಯಿ ಒಬ್ಬರೇ ಇರುವ ಅಥವಾ ವಿಧವೆಯರ ಮಕ್ಕಳಿಗೆ, ಕುಷ್ಟರೋಗ/ಎಚ್‌ಐವಿ ಸೋಂಕಿತ ಪೋಷಕರ ಮಕ್ಕಳಿಗೆ, ಕುಟುಂಬಕ್ಕೆ ಆಧಾರವಾಗಿದ್ದ ಪೋಷಕರು ಜೈಲಿನಲ್ಲಿದ್ದರೆ ಅಂತಹ ಕುಟುಂಬದ ಮಕ್ಕಳಿಗೆ ಆದ್ಯತೆ ನೀಡಿ ಆರ್ಥಿಕ ನೆರವು ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.ಆರ್ಥಿಕ ನೆರವು: ಒಂದು ಮಗುವಿಗೆ ತಿಂಗಳಿಗೆ 1000 ರೂಪಾಯಿಯಂತೆ ಕುಟುಂಬದಲ್ಲಿ ಗರಿಷ್ಠ ಎರಡು ಮಕ್ಕಳಿಗೆ ಈ ಸೌಲಭ್ಯ ನೀಡಬಹುದು. ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿಯಲ್ಲಿ ಒದಗಿಸಲಾದ ಅನುದಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 75:25ರ ಅನುಪಾತದಲ್ಲಿ ವೆಚ್ಚ ಭರಿಸಲಿವೆ. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಗರಿಷ್ಠ 3 ವರ್ಷಗಳು ಅಥವಾ 18 ವರ್ಷವಾಗುವವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಅವರು ವಿವರಿಸಿದರು.ಮಗುವನ್ನು ಸಂಸ್ಥೆಗೆ ದಾಖಲಿಸಲು ಮಕ್ಕಳ ಕಲ್ಯಾಣ ಮಂಡಳಿ ನೀಡಿದ ಆದೇಶ, ವೈಯಕ್ತಿಕ ಪಾಲನಾ ಯೋಜನೆ, ಗೃಹ ಅಧ್ಯಯನ ವರದಿಗಳನ್ನು ಆಧರಿಸಿ ಅರ್ಹ ಫಲಾನುಭವಿ ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ. ಮಕ್ಕಳ ಆಯ್ಕೆ ವಿಚಾರದಲ್ಲಿ ಪ್ರಾಯೋಜಕತ್ವ ಮತ್ತು ಪೋಷಕತ್ವ ಅನುಮೋದನೆ ಸಮಿತಿಯ ಪಾತ್ರ ಪ್ರಮುಖವಾಗಿರುತ್ತದೆ. ಈ ಸಮಿತಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅಧ್ಯಕ್ಷರಾಗಿದ್ದರೆ, ರಕ್ಷಣಾಧಿಕಾರಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ/ಸದಸ್ಯರು, ವಿಶೇಷ ದತ್ತು ಸಂಸ್ಥೆಯ ಪ್ರತಿನಿಧಿ ಹಾಗೂ ಮಕ್ಕಳ ರಕ್ಷಣಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಈ ಸಮಿತಿ ಪ್ರಸ್ತಾವನೆ ಮತ್ತು ದಾಖಲೆಗಳನ್ನು ಪರಿಶೀಲಿಸಿ ಅರ್ಹ ಮಕ್ಕಳನ್ನು ಆಯ್ಕೆಮಾಡುತ್ತದೆ ಎಂದು ಅವರು ತಿಳಿಸಿದರು.ಜಿಲ್ಲೆಯ 40 ಮಕ್ಕಳನ್ನು ಆರಿಸಲಾಗುವುದು: ಪ್ರಾಯೋಜಕತ್ವ ಕಾರ್ಯಕ್ರಮ ಅನುಷ್ಠಾನಕ್ಕೆ ರಾಮನಗರ ಜಿಲ್ಲೆಗೆ ಐದು ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ. ಇದರಲ್ಲಿ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಿಂದ ತಲಾ 10ರಂತೆ ಒಟ್ಟು 40 ಅರ್ಹ ಮಕ್ಕಳನ್ನು ಆಯ್ಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕೆ.ರಾಧಾ ವಿವರಿಸಿದರು.ಪ್ರತಿಭಾ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿರುವ ಶಿವಕುಮಾರ್ ಅವರ ಏಳು ವರ್ಷದ ಮಗನಿಗೆ, ಚನ್ನಪಟ್ಟಣದಲ್ಲಿ ಮಗುವೊಂದು `ಹೀಮೋಫೀಲಿಯಾ' ಕಾಯಿಲೆಯಿಂದ ನರಳುತ್ತಿದ್ದು ಆ ಮಗುವಿಗೆ ಈ ಯೋಜನೆಯಡಿ ಆರ್ಥಿಕ ನೆರವು ನೀಡಲು ಚಿಂತಿಸಲಾಗಿದೆ. 40 ಅರ್ಹ ಮಕ್ಕಳನ್ನು ಹುಡುಕಲು ಈಗಾಗಲೇ ಸಮೀಕ್ಷೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ಫಲಾನುಭವಿ ಮಕ್ಕಳ ಆಯ್ಕೆಯಾಗಲಿದೆ. ಆ ಮಕ್ಕಳಿಗೆ ಪ್ರಾಯೋಜಿಕತ್ವ ಕಾರ್ಯಕ್ರಮದಲ್ಲಿ ತಿಂಗಳಿಗೆ ತಲಾ 1000 ರೂಪಾಯಿಂತೆ ಮೂರು ವರ್ಷ ಆರ್ಥಿಕ ನೆರವು ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.