ಸೋಮವಾರ, ಜನವರಿ 20, 2020
19 °C

ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ‘ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಎಲ್ಲರೂ ವಿದ್ಯಾವಂತರನ್ನಾಗಿ ಮಾಡುವ ಕಾರ್ಯದಲ್ಲಿ ತೊಡಗಬೇಕು’ ಎಂದು ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಪರುವಂಗಡ ಬೋಸ್ ಪೆಮ್ಮಯ್ಯ ಹೇಳಿದರು.ಇಲ್ಲಿನ ಲಯನ್ಸ್ ಕ್ಲಬ್‌ಗೆ ಭೇಟಿ ನೀಡಿ ಬಳಿಕ ಕೊಡವ ಸಮಾಜದಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಮಾತನಾಡಿದರು.

ಭಾರತ ಬುದ್ಧಿವಂತರನ್ನು ಹೊಂದಿದ ಸೂಪರ್ ಪವರ್ ದೇಶವಾಗಿದೆ. ಯುವಜನತೆ ತನ್ನಲ್ಲಿರುವ ಬುದ್ಧಿವಂತಿಕೆ ಯನ್ನು ಬಳಸಿಕೊಳ್ಳುವಂತಾಗಬೇಕು. ಶೇ 90ರಷ್ಟು ಯುವಕರು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸದೆ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ ಎಂದರು.ಮೂರ್ನಾಡು ಲಯನ್ಸ್ ಕ್ಲಬ್ ಅಧ್ಯಕ್ಷ ಮುಲ್ಲೇರ ಪಾಪ ಕಾವೇರಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸವಿತ ಪೆಮ್ಮಯ್ಯ, ಲಯನೆಸ್ ಸುನೀತ ಕಾವೇರಪ್ಪ, ಮೂರ್ನಾಡು ಲಯನ್ಸ್ ಕ್ಲಬ್ ಖಜಾಂಚಿ ನವೀನ್ ಕಾರ್ಯಪ್ಪ, ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಉಪಸ್ಥಿತರಿದ್ದರು.ಲಯನ್ಸ್ ಕ್ಲಬ್ ಅಧ್ಯಕ್ಷ ಮುಲ್ಲೇರ ಪಾಪ ಕಾವೇರಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ ವಂದಿಸಿದರು.

ಪ್ರತಿಕ್ರಿಯಿಸಿ (+)