ಮಂಗಳವಾರ, ಜೂನ್ 15, 2021
26 °C

ಮಕ್ಕಳ ಸುಪ್ತ ಪ್ರತಿಭೆಯನ್ನು ಗುರುತಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಿಯಮ್ಮನಹಳ್ಳಿ: ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜತೆಗೆ, ಮಕ್ಕಳು ಇಂತಹ ಕಾರ್ಯಕ್ರಮಗಳನ್ನು ಸದುಪಯೋಗ ಪಡೆಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಸಿಆರ್‌ಪಿ ತಿಂದಪ್ಪ ಹೇಳಿದರು. ಅವರು ಸಮೀಪದ ಹನುಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎನ್‌ಪಿಇಜಿಎಲ್ ಕಾರ್ಯಕ್ರಮದಡಿಯಲ್ಲಿ ವಿವಿ ಚಟುವಟಿಕೆಗಳ ಅನುಷ್ಠಾನ ಕಾರ್ಯಕ್ರಮದ ಕ್ಲಸ್ಟರ್ ಮಟ್ಟದ ಮೀನಾ ಸಮಾವೇಶದಲ್ಲಿ ಮಾತನಾಡಿದರು. ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚು ಮಹತ್ವ ನೀಡುವುದರೊಂದಿಗೆ, ಅವರಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಬೇಕಿದೆ. ಇದಕ್ಕೆ ಶಿಕ್ಷಕರೊಂದಿಗೆ ಪೋಷಕರು ಅವಕಾಶ ಮಾಡಿಕೊಡಬೇಕಿದೆ. ಅಲ್ಲದೆ ಅವರಲ್ಲಿ ನೈತಿಕ ಮೌಲ್ಯಗಳನ್ನು ಮೂಡಿಸಬೇಕಿದೆ ಎಂದರು. ಡಣಾಪುರ ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ.ಎಸ್.ಮೃತ್ಯುಂಜಯ ಮಾತನಾಡಿ, ಮಕ್ಕಳಲ್ಲಿ ಮೊದಲು ಸಮಾಜದ ಬಗ್ಗೆ ಕಳಕಳಿ, ಜಾಗೃತಿ, ಸಮಾಜಿಕ ಪ್ರಜ್ಞೆ ಮೂಡಿಸುವ ಅಗತ್ಯವಿದೆ. ಅಲ್ಲದೆ ವಿವಿಧ ಚಟುವಟಿಕೆಯ ಮೂಲಕ ಅವರ ವ್ಯಕ್ತಿತ್ವವನ್ನು ರೂಪಿಸುವ ಕೆಲಸವನ್ನು ಸಹ ಮಾಡಬೇಕಿದೆ. ಇಂತಹ ಕಾರ್ಯಕ್ರಮಗಳು ಅವರಲ್ಲಿ ಹೊಸ ಚೈತ್ಯನ ಮೂಡಿಸುವುದರೊಂದಿಗೆ ಅವರಿಗೆ ಹೊಸ ಯೋಚನೆ ಹಾಗೂ ಹೊಸದನ್ನು ಕಲಿಯಲು ಸಾಧ್ಯವಾಗುವುದು ಎಂದರು.ಕಾರ್ಯಕ್ರಮವನ್ನು ಎಸ್‌ಡಿಎಂಸಿ ಅಧ್ಯಕ್ಷ ಕುರಿ ವೆಂಕಟೇಶ್ ಉದ್ಘಾಟಿಸಿದರು. ಶಿಕ್ಷಕ ಬಿ.ರಾಮಜ್ಜ ಮಾತನಾಡಿದರು. ಮುಖ್ಯ ಶಿಕ್ಷಕರಾದ ಬಿ.ನಾಗಣ್ಣಾಚಾರ್, ಎಂ.ಗುರುರಾಜ್, ಕೆ.ವೆಂಕಟೇಶ್ ಇತರರು ಉಪಸ್ಥಿತರಿದ್ದರು.ಗೌಸಿಯಾ ಮತ್ತು ಅರುಣಾಕುಮಾರಿ ಪ್ರಾರ್ಥನೆ ಸಲ್ಲಿಸಿದರು. ಎಚ್.ಎಂ.ಕರಿಬಸವಸ್ವಾಮಿ ಸ್ವಾಗತಿಸಿದರು, ತೇಜಕುಮಾರಿ ವಂದಿಸಿದರು. ಎಲ್.ಹಾಲ್ಯಾನಾಯ್ಕ ಕಾರ್ಯಕ್ರಮ ನಿರೂಪಿಸಿದರು. ನಂತರ ವಿವಿಧ ಶಾಲಾ ಮಕ್ಕಳಿಂದ ನೃತ್ಯ, ರೂಪಕ, ಗೀತಗಾಯನ, ನಾಟಕ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.